ನಮಸ್ಕಾರ ಸ್ನೇಹಿತರೆ…ಇವತ್ತಿನ ಈ ಲೇಖನದ ಮುಖಾಂತರ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಯಾವ ರೀತಿ ರೈತರ ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದು ಎಂಬುದರ ಎಲ್ಲಾ ಸಂಪೂರ್ಣವಾದ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವುದರ ಮುಖಾಂತರ, ನೀವು ಕೂಡ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಕೆ ಮಾಡಿರಿ. ಈಗಾಗಲೇ ಸಾಕಷ್ಟು ರೈತರು ಸರ್ಕಾರದಿಂದ ಸಿಗುತ್ತಿರುವಂತಹ ಯೋಜನೆಗಳ ಮೂಲಕ ಹಲವಾರು ಪ್ರಯೋಜನಗಳನ್ನು ಕೂಡ ಈವರೆಗೂ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿಯ ಯೋಜನೆಗಳು ಕೂಡ ಜಾರಿಯಲ್ಲಿಯೇ ಇರುತ್ತದೆ. ಅಥವಾ ಬೇರೆ ರೀತಿಯ ಹೊಸ ಹೊಸ ಯೋಜನೆಗಳು ಕೂಡ ರೈತರಿಗಾಗಿಯೇ ಜಾರಿಯಾದರೂ ಆಗಬಹುದು. ಈ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2024 !
ರೈತರಿಗೆ ಈ ರೀತಿಯ ಯೋಜನೆಗಳು ಸರ್ಕಾರದ ಕಡೆಯಿಂದ ಸಿಗುತ್ತದೆ. ಆದರೆ ರೈತರ ಮಕ್ಕಳಿಗೂ ಕೂಡ ಸರ್ಕಾರವು ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವೆಂಬ ಹೊಸ ಸ್ಕಾಲರ್ಶಿಪ್ ಅನ್ನು ಪರಿಚಯಿಸಿದೆ. ಇದು ಪ್ರಸ್ತುತವಾಗಿ ಕೇಳುತ್ತಿರುವಂತಹ ವಿದ್ಯಾರ್ಥಿಗಳಿಗೆ ಹೊಸ ಸ್ಕಾಲರ್ಶಿಪ್ ಎಂದು ಅನಿಸಬಹುದು. ಆದರೆ ಈ ಒಂದು ಸ್ಕಾಲರ್ಶಿಪ್ 2021ನೇ ಸಾಲಿನಲ್ಲಿ ಜಾರಿಯಾಯಿತು. ಈಗಾಗಲೇ ಸಾಕಷ್ಟು ಲಕ್ಷಾಂತರ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನ ಮುಖಾಂತರ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ನೀವು ಈ ವಿದ್ಯಾರ್ಥಿ ವೇತನ ದಡಿಯಲ್ಲಿ ಹಣವನ್ನು ಪಡೆಯಲು ಬಯಸುವಿರಿ ಎಂದರೆ, ನೀವು ಮೊದಲಿಗೆ ಆನ್ಲೈನ್ ಮುಖಾಂತರ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಇದು ರಾಜ್ಯ ಸರ್ಕಾರದಿಂದಲೇ ಅಧಿಕೃತವಾಗಿ ಜಾರಿಯಾಗಿರುವಂತಹ ಸ್ಕಾಲರ್ಶಿಪ್ ಇದಾಗಿದೆ. ಆದಕಾರಣ ಈ ಒಂದು ವಿದ್ಯಾರ್ಥಿ ವೇತನಕ್ಕೆ ಕೆಲ ಅರ್ಹತಾ ಮಾನದಂಡಗಳು ಕೂಡ ಇರುತ್ತವೆ. ಆ ಅರ್ಹತಾ ಮಾನದಂಡಗಳನ್ನು ಪಾಲಿಸುವಂತಹ ರೈತರ ಮಕ್ಕಳು ಮಾತ್ರ ಈ ವಿದ್ಯಾರ್ಥಿ ವೇತನ ದಡಿಯಲ್ಲಿ ಹಣವನ್ನು ಪಡೆದುಕೊಳ್ಳುತ್ತಾರೆ. ಹಾಗಾದರೆ ಯಾವ ಅರ್ಹತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಮುಖಾಂತರ ಹಣವನ್ನು ಪಡೆಯುತ್ತಾರೆ ಎಂಬುದನ್ನು ನೋಡೋಣ ಬನ್ನಿರಿ.
ವಿದ್ಯಾರ್ಥಿಗಳು ಹೊಂದಿರಬೇಕಾದ ಅರ್ಹತೆಗಳು
- ಮೊದಲಿಗೆ ಈ ವಿದ್ಯಾರ್ಥಿಗಳ ಪೋಷಕರು ರೈತರಾಗಿರಬೇಕು.
- ರೈತರ ಮಕ್ಕಳಿಗೆ ಮಾತ್ರ ಈ ಒಂದು ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ದೊರೆಯುತ್ತದೆ.
- ಹಾಗೂ ಎರಡನೆಯ ಅರ್ಹತೆ ಏನೆಂದರೆ, ಕರ್ನಾಟಕದಲ್ಲಿಯೇ ಈವರೆಗೂ ವಾಸ ಮಾಡುತ್ತಿರಬೇಕಾಗುತ್ತದೆ.
- ಕುಟುಂಬದ ವಾರ್ಷಿಕ ಆದಾಯವು ಎರಡುವರೆ ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈ ಎಲ್ಲಾ ಅರ್ಹತಮಾನದಂಡಗಳನ್ನು ಪಾಲಿಸುವಂತಹ ವಿದ್ಯಾರ್ಥಿಗಳು ಮಾತ್ರ ರೈತ ವಿದ್ಯಾನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಹಣವನ್ನು ಕೂಡ ಪಡೆಯಬಹುದು.
ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ದಾಖಲಾತಿಗಳು.
- ಯಾವೆಲ್ಲ ದಾಖಲಾತಿಗಳನ್ನು ಹೊಂದಿದ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿ ಹಣವನ್ನು ಪಡೆಯುತ್ತಾರೆ ಎಂದರೆ,
- ಮೊದಲಿಗೆ ನೀವು ಕಡ್ಡಾಯವಾಗಿ ಪ್ರಸ್ತುತ ಓದುತ್ತಿರುವಂತಹ ಶಾಲಾ ಕಾಲೇಜಿನ ಪ್ರವೇಶಾತಿ ದಾಖಲಾತಿಯನ್ನು ಹೊಂದಿರಬೇಕು,
- ಹಾಗೂ ಆಧಾರ್ ಕಾರ್ಡ್,
- ಆದಾಯ ಪ್ರಮಾಣ ಪತ್ರ,
- ನಿಮ್ಮ ಪೋಷಕರು ರೈತರು ಎಂಬುದರ ಪತ್ರ,
- ಬ್ಯಾಂಕ್ ಖಾತೆ,
- ಇಂದಿನ ವರ್ಷದ ಮಾರ್ಕ್ಸ್ ಕಾರ್ಡ್, ಈ ರೀತಿಯ ಎಲ್ಲಾ ದಾಖಲಾತಿಗಳನ್ನು ವಿದ್ಯಾರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ.
ಯಾವ ವಿದ್ಯಾರ್ಥಿಗಳಿಗೆ ಈ ಹಣ ದೊರೆಯಲಿದೆ.
ಯಾವ ಶಿಕ್ಷಣವನ್ನು ಪ್ರಸ್ತುತವಾಗಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಹಣ ದೊರೆಯುತ್ತದೆ ಎಂದರೆ, ಎಂಟನೇ ತರಗತಿಯಿಂದ ಸ್ನಾತಕೋತ್ತರ ಪದವೀಧರರಿಗೂ ಕೂಡ ಈ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ದೊರೆಯಲಿದೆ. ಅಂದರೆ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡ ದೊರೆಯುತ್ತದೆ. ಹಾಗೂ ಪಿಯುಸಿ ಐಟಿಐ, ಡಿಗ್ರಿ, ಸ್ನಾತಕೋತ್ತರ ಪದವಿ, ಮತ್ತು ಬಿ ಎ, ಬಿ ಎಸ್ ಸಿ, ಎಂಬಿಬಿಎಸ್ ಇನ್ನಿತರ ಶಿಕ್ಷಣಕ್ಕೂ ಕೂಡ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ದೊರೆಯುತ್ತದೆ.
ನೀವು ಕೂಡ ಇದೇ ರೀತಿಯ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದೀರಿ ಎಂದರೆ, ನಿಮಗೂ ಕೂಡ ಈ ಒಂದು ಹಣ ಖಾತೆಗೆ ಜಮಾ ಆಗಲಿದೆ. ಎಷ್ಟು ಹಣ ಖಾತೆಗೆ ಜಮಾ ಆಗುತ್ತದೆ ಎಂದರೆ, 2,500 ದಿಂದ 12,000 ವರೆಗೂ ಕೂಡ ಹಣ ಖಾತೆಗೆ ಜಮಾ ಆಗಲಿದೆ. ಒಂದೊಂದು ಪ್ರಸ್ತುತ ಶಿಕ್ಷಣಕ್ಕೂ ಕೂಡ ಬೇರೆ ರೀತಿಯ ವಿವಿಧ ವಿದ್ಯಾರ್ಥಿ ವೇತನ ಹಂಚಿಕೆಯಾಗಿರುತ್ತದೆ. ಆ ನಿಗದಿ ಶಿಕ್ಷಣಕ್ಕೆ ಎಷ್ಟು ಹಣ ಮೀಸಲಾಗಿದೆಯೋ ಅಷ್ಟು ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತದೆ ರಾಜ್ಯ ಸರ್ಕಾರ.
ವಿದ್ಯಾರ್ಥಿಗಳೇ ಇನ್ನೇಕೆ ತಡ ಮಾಡುತ್ತೀರಿ, ನಿಮ್ಮ ಪೋಷಕರು ಕೂಡ ರೈತರಾಗಿದ್ದರೆ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂದರ್ಥ. ಈ ಒಂದು Apply Online ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆಯಬಹುದು. ಆ ಒಂದು ಹಣದಿಂದ ನೀವು ನಿಮ್ಮ ಮುಂದಿನ ಶಿಕ್ಷಣದ ವೆಚ್ಚವನ್ನು ನಿವಾರಿಸಿಕೊಳ್ಳಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…