Raita Vidya Nidhi Scholarship: ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ! ರೈತರ ಮಕ್ಕಳು ಕೂಡಲೇ ಅರ್ಜಿ ಸಲ್ಲಿಕೆ ಮಾಡಿ.

raita-vidya-nidhi-scholarship-2024

raita vidya nidhi scholarship 2024: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಒದಗಿಸಲಾಗುತ್ತಿದೆ. ನೀವು ಕೂಡ ರೈತರ ಮಕ್ಕಳು ಆಗಿದ್ದೀರಿ ಎಂದರೆ, ನಿಮಗೂ ಕೂಡ ಈ ಒಂದು ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಬರೋಬ್ಬರಿ 11,000 ಹಣವನ್ನು ಕೂಡ ನೀವು ಪಡೆದುಕೊಳ್ಳಲು ಅರ್ಹರಾಗುವಿರಿ. ನೀವು ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಯಾವ ಪ್ರಕ್ರಿಯೆಯನ್ನು ಈ ಒಂದು ವಿದ್ಯಾರ್ಥಿ ವೇತನ ಹೊಂದಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಮಾಹಿತಿಯನ್ನು ತಿಳಿದುಕೊಳ್ಳಿರಿ.

ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2024 !

ರಾಜ್ಯ ಸರ್ಕಾರದಿಂದ ಈ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಜಾರಿಯಾಗಿದೆ. ಈ ಹಿಂದೆ ದಿನಗಳಲ್ಲಿಯೂ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನಿಡಿದ್ದು, ಇನ್ನು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆಯ ಮುಕ್ತಾಯ ದಿನಾಂಕ ಕೂಡ ಬಂದಿಲ್ಲ. ಮುಕ್ತಾಯದ ದಿನಾಂಕದೊಳಗೆ ನೀವು ಕೂಡ ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರ ಅರ್ಜಿ ಸಲ್ಲಿಕೆ ಯನ್ನು ಕೂಡ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಬರೋಬ್ಬರಿ 11,000 ವಿದ್ಯಾರ್ಥಿ ವೇತನದ ಹಣ ಅವರ ಖಾತೆಗೆ ಜಮಾ ಆಗುತ್ತದೆ.

ರೈತರ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆಯಾ ?

ಹೌದು ಸ್ನೇಹಿತರೆ ರೈತರ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ. ಸಾಮಾನ್ಯ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಅಭ್ಯರ್ಥಿಗಳು ಕೂಡ ರೈತರಾಗಿಯೇ ಕಂಡುಬರುತ್ತಾರೆ. ಆ ರೈತರ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣವನ್ನು ಪಡೆಯಬೇಕು ಮುಂದಿನ ದಿನಗಳಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕು. ಶಿಕ್ಷಣವನ್ನು ಪಡೆಯಬೇಕು, ಎಂಬ ಕಾರಣದಿಂದ ಮಾತ್ರ ರೈತರ ಮಕ್ಕಳಿಗೆ ಈ ವಿದ್ಯಾರ್ಥಿ ವೇತನದ ಹಣವನ್ನು ಜಮಾ ಮಾಡಲಾಗುತ್ತಿದೆ.

ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡುತ್ತಾರೋ ಅಂತಹ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ರೈತರಾಗಿರಬೇಕು. ರೈತರ ಫ್ರೂಟ್ಸ್ ಐಡಿಯನ್ನು ಯಾರೆಲ್ಲಾ ಹೊಂದಿರುತ್ತಾರೋ ಅಂತವರು ಮಾತ್ರ ಅರ್ಜಿ ಸಲ್ಲಿಕೆ ಮಾಡುವಂತಹ ಅರ್ಹತೆಯನ್ನು ಹೊಂದಿರುತ್ತಾರೆ. ಅರ್ಜಿ ಸಲ್ಲಿಕೆ ಮಾಡಿದ ನಂತರ ಸರ್ಕಾರ ಒಂದೊಮ್ಮೆ ನಿಮ್ಮ ಅರ್ಜಿ ಸಲ್ಲಿಕೆಯನ್ನು ಕೂಡ ಪರಿಶೀಲನೆ ಮಾಡಿ ಆನಂತರ ನಿಮಗೆ ಎಷ್ಟು ಹಣವನ್ನು ಜಮಾ ಮಾಡಬೇಕು ಎಂಬುದನ್ನು ಕೂಡ ನಿರ್ಧಾರ ಮಾಡುತ್ತದೆ. ಏಕೆಂದರೆ ಒಂದೊಂದು ಶಿಕ್ಷಣಕ್ಕೂ ಕೂಡ ಒಂದೊಂದು ರೀತಿಯ ಹಣವನ್ನು ಮೀಸಲಿಟ್ಟಿದೆ ಸರ್ಕಾರ. ಆದಕಾರಣ ಆ ಒಂದು ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲು ಕೂಡ ಮುಂದಾಗುತ್ತದೆ.

 

ಈ ಶಿಕ್ಷಣದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನದ ಹಣ ದೊರೆಯುವುದು.

  • ಎಂಟರಿಂದ 10ನೇ ತರಗತಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ :- 2000 ಹಣ ಖಾತೆಗೆ ಜಮಾ ಆಗುತ್ತದೆ.
  • ಪಿಯುಸಿ ಐಟಿಐ ಡಿಪ್ಲೋಮೋ ಮಾಡುತ್ತಿರುವಂತವರಿಗೆ :- 2,500 ದಿಂದ 3,000 ಹಣ
  • ಬಿಕಾಂ, ಬಿಎ, ಬಿಎಸ್ಸಿ, ವಿದ್ಯಾರ್ಥಿಗಳಿಗೆ :- 5,000 ದಿಂದ 5,500 ಹಣ
  • ಎಲ್ಎಲ್ಬಿ, ಬಿ ಫಾರ್ಮಸಿ ಶಿಕ್ಷಣಕ್ಕೆ :- 7,500 ದಿಂದ 7,000 ಹಣ
  • ಎಂಬಿಬಿಎಸ್ ಹಾಗೂ ಸ್ನಾತಕೋತರ ಪದವಿ ಮಾಡುತ್ತಿರುವಂತವರಿಗೆ :- ವಿದ್ಯಾರ್ಥಿನಿಗೆ 11,000 ವಿದ್ಯಾರ್ಥಿಗೆ 10,000 ಹಣ ಸಿಗಲಿದೆ.

ಅರ್ಜಿ ಸಲ್ಲಿಕೆ ಮಾಡುವಂತವರು ಈ https://raitamitra.karnataka.gov.in/ ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮುಖಾಂತರ ನಿಮ್ಮ ಪೋಷಕರ ಫ್ರೂಟ್ ಐಡಿ ಯೊಂದಿಗೆ ನಿಮ್ಮ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡುವ ಮೂಲಕ ಅರ್ಜಿಯನ್ನು ಆನ್ಲೈನ್ ಪ್ರಕ್ರಿಯೆಯಲ್ಲಿದೆ ಸಲ್ಲಿಕೆ ಮಾಡಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *