Raitha Siri: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಸಮಸ್ತ ಕರ್ನಾಟಕದ ರೈತ ಬಾಂಧವರಿಗೆ ತಿಳಿಸುವ ವಿಷಯವೇನೆಂದರೆ, ರೈತ ಸಿರಿ ಯೋಜನೆಯ ಮೂಲಕ ಸರ್ಕಾರವು ರೈತರಿಗೆ ಅಂತಾನೆ ರೂ.10,000ಗಳನ್ನು ಸಹಾಯಧನವಾಗಿ ನೀಡುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಯನ್ನು ನೀಡಿರುತ್ತೇವೆ ಲೇಖನವನ್ನು ಕೊನೆಯವರೆಗೂ ಓದಿ.
ಇದೇ ತರಹದ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ ನಮ್ಮ ಜಾಲತಾಣದಲ್ಲಿ ಬೆಳೆ ಪರಿಹಾರ ಬೆಳೆ ವಿಮೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.
Raitha Siri Yojane
ಈ ರೈತ ಸಿರಿ ಯೋಜನೆಯ ಕಡಿಮೆ ಜಮೀನನ್ನು ಹೊಂದಿರುವಂತಹ ರೈತರಿಗೆ ಸಹಾಯಕಾರಿಯಾಗಲೆಂದು ಅಂತಹ ರೈತರ ಖಾತೆಗೆ 10,000ಗಳನ್ನು ಸಹಾಯಧನವನ್ನಾಗಿ ನೀಡಲು ಮುಂದಾಗಿದೆ. ಇದನ್ನು ಉಪಯೋಗಪಡಿಸಿಕೊಳ್ಳಲು ಯಾವೆಲ್ಲ ಅರ್ಹತೆಗಳಿರಬೇಕು? ಮತ್ತು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಎಂಬ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಿ.
(Raitha Siri Yojane) ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ಸಿರಿಧಾನ್ಯಗಳನ್ನು ಬೆಳೆಯುವ ರೈತರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
- ನೀವು ಒಂದು ಎಕರೆ ಕೃಷಿ ಭೂಮಿಯನ್ನು ಹೊಂದಿರಬೇಕು.
- ರಾಗಿ ಬೆಳೆಯುವ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು.
- ಸರ್ಕಾರದ ಬೇರೆ ಯಾವುದೇ ಯೋಜನೆಯ ಸಹಾಯಧನ ಪಡೆದರಬಾರದು.
(Raitha Siri Yojane) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ರೈತರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ಈ ಕೆಳಗಿನಂತೆ ತಿಳಿಸಲಾಗಿರುತ್ತದೆ. ಈ ದಾಖಲೆಗಳು ಜಮೀನನ್ನು ಹೊಂದಿರುವ ಹೆಸರಿನಲ್ಲಿರುವವರಿಗೆ ಮಾತ್ರ ಅನ್ವಯಿಸಿರಬೇಕು.
- ಆಧಾರ್ ಕಾರ್ಡ್.
- ಮೊಬೈಲ್ ನಂಬರ್.
- ಬ್ಯಾಂಕ್ ಖಾತೆ ವಿವರಗಳು.
- ವಿಳಾಸದ ಪ್ರಮಾಣ ಪತ್ರ.
- ಜಮೀನಿನ ದಾಖಲೆಗಳು.
- ರೇಷನ್ ಕಾರ್ಡ್.
ಎಲ್ಲ ಮೇಲಿನ ದಾಖಲೆಗಳನ್ನು ಸರಿಪಡಿಸಿಕೊಂಡು ರೈತಸಿರಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ನೀವು ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಕೆಳಗೆ ಕೊಟ್ಟಿರುವ ಜಾಲತಾಣವನ್ನು ಬಳಸಿಕೊಂಡು ನಿಮ್ಮ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
https://raitamitra.karnataka.gov.in/
ಮೇಲೆ ಕೊಟ್ಟಿರುವ ಜಾಲತಾಣವನ್ನು ಬಳಸಿಕೊಂಡು ನೀವು ಪ್ರೀತಿಸಿರಿ ಯೋಜನೆಗೆ ಆರಾಧಿ ಸಲ್ಲಿಸಿ, ಅರ್ಹತೆಗಳನ್ನು ಸಂಪೂರ್ಣವಾಗಿ ಮೊದಲು ಓದಿಕೊಳ್ಳಿ. ನಂತರ ಬೇಕಾಗುವ ದಾಖಲೆಗಳನ್ನು ತೆಗೆದುಕೊಳ್ಳಿ. ಈ ಮೇಲೆ ನೀಡಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ರೈತಸಿರಿ ಯೋಜನೆಗೆ ಅರ್ಜಿ ಸಲ್ಲಿಸಿ 10,000 ಸಹಾಯಧನವನ್ನು ಪಡೆದುಕೊಳ್ಳಿ.