ration card application new update: ನಮಸ್ಕಾರ ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳುವುದು ಮತ್ತು ಇದೇ ರೀತಿಯಾಗಿ ರೇಷನ್ ಕಾರ್ಡ್ ನಲ್ಲಿ ದೋಷಗಳಿದ್ದಲ್ಲಿ ತಿದ್ದುಪಡಿ ಮಾಡುವುದು ರೇಷನ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಲು ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಇನ್ನು ಮುಂದೆ ಪ್ರತಿ ತಿಂಗಳು ಕೂಡ ಇಂತಿಷ್ಟು ದಿನ ಅಂತ ಕಾಲಾವಕಾಶ ಕೊಡಲಿದ್ದಾರೆ ಅದರ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.
ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಜನ ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ ರೇಷನ್ ಕಾರ್ಡ್ ಪರಿಶೀಲನೆ ನಡೆಯುತ್ತಿದೆ ಮತ್ತು ರೇಷನ್ ಕಾರ್ಡ್ ಅವಾಗ ಸಿಗುತ್ತೆ ಅಂತ ಅರ್ಜಿ ಸಲ್ಲಿಸಿರುವ ಜನರು ಕಾಯುತ್ತಲೇ ಇದ್ದಾರೆ.
ಆದರೆ ಸರ್ಕಾರ ಈ ವಿಚಾರವನ್ನು ತಲೆಗೆ ಹಾಕಿಕೊಂಡಿಲ್ಲ. ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳುತ್ತಲೇ ಇದೆ ಹೊರತು ಹಳೆಯ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಯಾವುದೇ ರೀತಿಯ ಗಮನವನ್ನು ಸರ್ಕಾರ ಇಲ್ಲಿಯವರೆಗೆ ಹರಿಸಿಲ್ಲ.
ಆದರೆ ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ ಯಾಕೆಂದರೆ ಸರ್ಕಾರ ಈ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಂಡಿದೆ ಆ ಪರಿಹಾರದಿಂದ ಈ ಸಮಸ್ಯೆ ಪೂರ್ಣವಾಗಿರಬಹುದು ಎಂದು ಸರ್ಕಾರ ಈ ಮೂಲಕ ಆದೇಶ ಹೊರಡಿಸಿರುತ್ತದೆ.
ಎರಡು ವರ್ಷಗಳಿಂದ ಸರ್ಕಾರಕ್ಕೆ ಸಂದಾಯವಾಗಿರುವ ರೇಷನ್ ಕಾರ್ಡ್ಗಳ ಅರ್ಜಿ ಮೂರು ಲಕ್ಷಕ್ಕೂ ಮೀರಿದಾಗಿದೆ. ಅದೇ ರೀತಿ ಕೆಲವು ಮೂರು ನಾಲ್ಕು ತಿಂಗಳಿಂದ ಆರೋಗ್ಯದ ಕಾರ್ಡ್ ಅಜಿತಾ ಪಡಿತರ ಚೀಟಿ ಪಡೆದುಕೊಳ್ಳಲು ಸರ್ಕಾರ ಸೂಚಿಸಿತ್ತು.
ಆಹಾರ ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪ ರವರು, ಇದೀಗ ಅಜಿತ ಪಡಿತರ ಚೀಟಿಯನ್ನು ಅಗತ್ಯ ಇರುವವರಿಗೆ ತಲುಪಿಸಲು ವಿತರಣೆ ಮಾಡಿ ಎಂದು ಈ ಮೂಲಕ ಆದೇಶವನ್ನು ಹೊರಡಿಸಿದ್ದಾರೆ.
ಸದ್ಯದಲ್ಲೇ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿಯನ್ನು ಹಾಕಲು ಆರಂಭವಾಗುತ್ತದೆ. ಪ್ರತಿ ಜಿಲ್ಲೆಗಳಲ್ಲಿ ಒಂದನೇ ತಾರೀಖಿನಿಂದ ಹಿಡಿದು ಅಂದರೆ ತಿಂಗಳ ಒಂದನೇ ತಾರೀಖಿನಿಂದ ಹಿಡಿದು 10ನೇ ತಾರೀಖಿನವರೆಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಆಧಾರ್ ಕಾರ್ಡ್ ತಿದ್ದುಪಡಿ ಒಂದರಿಂದ 10ನೇ ತಾರೀಖಿನವರೆಗೂ ಮಾನ್ಯವಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹೇಳಿದಂತೆ ರೇಷನ್ ಕಾರ್ಡ್ ನಲ್ಲಿ ದೋಸೆ ಇದ್ದಲ್ಲಿ ಮತ್ತು ಯಾವುದೇ ರೀತಿಯ ಗೊಂದಲ ಇದ್ದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯನ್ನು ಸರಿಯಾಗಿ ಮಾಡಿಸಿಕೊಳ್ಳುವುದು ಅಗತ್ಯ ಎಂದು ಸರ್ಕಾರವು ತಿಳಿಸಿದೆ.
ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಕೊಳ್ಳಲು ಸರಕಾರವು 3-4 ಸಲ ಅವಕಾಶವನ್ನು ಕೊಟ್ಟಿತ್ತು ಆದರೆ ಸರ್ವರ್ ದೋಷದ ಕಾರಣದಿಂದಾಗಿ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಕೊಳ್ಳಲು ಜನಸಾಮಾನ್ಯರಿಗೆ ಸಾಧ್ಯವಾಗಿಲ್ಲ. ಆದ್ದರಿಂದ ಇನ್ಮೇಲೆ ಪ್ರತಿ ತಿಂಗಳು ಒಂದನೇ ತಾರೀಖಿನಿಂದ 10ನೇ ತಾರೀಖಿನವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲು ಸಚಿವರು ತಿಳಿಸಿದ್ದಾರೆ.
ಇದಕ್ಕಾಗಿ ಸರ್ಕಾರವು ಸಾಕಷ್ಟು ಅವಕಾಶಗಳನ್ನು ನೀಡಿದೆ ರೇಷನ್ ಕಾರ್ಡ್ ನಲ್ಲಿ ಯಾವುದೇ ದೋಷವಿದ್ದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರನ್ನು ಸೇರಿಸಲು ಮತ್ತು ಡಿಲೀಟ್ ಮಾಡಿಸಲು ಅವಕಾಶ ಪ್ರತಿ ತಿಂಗಳು ಒಂದನೇ ತಾರೀಖಿನಿಂದ 10ನೇ ತಾರೀಕಿನವರೆಗೂ ನೀಡಲಾಗಿರುತ್ತದೆ.
ಈ ಸರ್ಕಾರದ ಹೊಸ ಯೋಜನೆಯು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದ್ದು ಮತ್ತು ರೇಷನ್ ಕಾರ್ಡ್ ನ ಬಗ್ಗೆ ಇರೋ ಮಾಹಿತಿಯನ್ನು ತಮಗೆ ತಿಳಿಸಿದ್ದೇನೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ನೀವೇನಾದರೂ ಪ್ರಯತ್ನ ಮಾಡುತ್ತಿದ್ದಾರೆ ಈ ಮಾಹಿತಿಯು ತಮಗೆ ಇಷ್ಟವಾಗಿರುತ್ತದೆ ಮತ್ತು ಈ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಯಾರು ರೇಷನ್ ಕಾರ್ಡ್ ನ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಈ ಮಾಹಿತಿಯನ್ನು ಹಂಚಿಕೊಳ್ಳಿ.