Ration Card Application Today: ನಮಸ್ಕಾರ ಎಲ್ಲರಿಗೂ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್ ಅಂತಾನೇ ಹೇಳಬಹುದು. ಏಕೆಂದರೆ ಇವತ್ತು ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಿಸಲು ಕೆಲವೇ ಗಂಟೆಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ. ಇದನ್ನು ನೀವು ಸದ್ದುಪಯೋಗಪಡಿಸಿಕೊಳ್ಳಬೇಕಾಗಿ ಈ ಲೇಖನವನ್ನು ಮಾಹಿತಿಗಾಗಿ ನಿಮಗೆ ತಿಳಿಸಲಾಗಿರುತ್ತದೆ.
ಹೌದು ಸ್ನೇಹಿತರೆ, ಕರ್ನಾಟಕ ರಾಜ್ಯದಲ್ಲಿರುವ ಗ್ಯಾರೆಂಟಿಗಳ ಅಂದರೆ ಕಾಂಗ್ರೆಸ್ ಸರ್ಕಾರವು ನೀಡಿದ ಐದು ಗ್ಯಾರಂಟಿಗಳ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಒಂದು ಕಡ್ಡಾಯವಾದ ದಾಖಲೆಯಾಗಿರುತ್ತದೆ. ಆದ್ದರಿಂದ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಜನರು ತುದಿ ಕಾಲಿನಲ್ಲಿ ನಿಂತಿರುತ್ತಾರೆ ಹಾಗೂ ರೇಷನ್ ಕಾರ್ಡ್ ನಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಲು ಕೂಡ ಜನರು ಪರದಾಡುತ್ತಿದ್ದಾರೆ.
ಇಂತಹ ಸಮಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಾಗೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಮಾತ್ರ ಕಾಲಾವಕಾಶವನ್ನು ಕಲ್ಪಿಸಿಕೊಡಲಾಗಿದೆ.
2-7-2024 ರಂದು ಮಧ್ಯಾಹ್ನ 12 ಗಂಟೆಯಿಂದ ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ಸಂಜೆ 6ರವರೆಗೆ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ಇವತ್ತು ಕೂಡ ಅಂದರೆ 3-7-2024 ರಂದು ಕೂಡ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಹಾಗು ತಿದ್ದುಪಡಿ ಮಾಡಿಸಲು ಕಾಲಾವಕಾಶವನ್ನು ಕಲ್ಪಿಸಿಕೊಡಲಾಗಿರುತ್ತದೆ, ಅಗತ್ಯತೆ ಉಳ್ಳವರು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಾಗೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಈ ದಿನದಂದು ಕಾಲಾವಕಾಶ ಕಲ್ಪಿಸಿಕೊಡಲಾಗುವುದು ಎಂದು ಆಹಾರ ಇಲಾಖೆಗೆ ತಿಳಿಸಲಾಗಿರುತ್ತದೆ. ಆದ್ದರಿಂದ ಅಗತ್ಯತೆ ಉಳ್ಳವರಿಗೆ ಇದು ಒಂದು ಬಹು ಮುಖ್ಯವಾದ ಮಾಹಿತಿ ಆಗಿರುತ್ತದೆ. ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಈ ಮಾಹಿತಿಯು ಉಪಯುಕ್ತವಾಗಿರುತ್ತದೆ.
2-7-2024 ರಂದು ಹಾಗೂ 3-7-2024 ರಂದು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾಲಾವಕಾಶ ಇರುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ಹೆಸರು ಸೇರಿಸಿಕೊಳ್ಳುವುದು ಹಾಗೂ ಹೆಸರನ್ನು ತೆಗೆಯುವುದು ಹಾಗೂ ರೇಷನ್ ಕಾರ್ಡ್ ಸಂಬಂಧಿತ ತಿದ್ದುಪಡಿಗಳನ್ನು ಮಾಡಿಸುವುದು, ಇ-ಕೆವೈಸಿ ಸಂಬಂಧಿಸಿದಂತೆ ಇತರ ಸೇವೆಗಳನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 6:00 ವರೆಗೆ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.
New Ration Card Application Links
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್