ನಮಸ್ಕಾರ ಸ್ನೇಹಿತರೆ…. ಕೆಲ ಅಭ್ಯರ್ಥಿಗಳಿಗೆ ಇನ್ಮುಂದೆ ಗ್ಯಾರಂಟಿ ಯೋಜನೆಗಳ ಮುಖಾಂತರ ಹಣ ದೊರೆಯುವುದಿಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಎರಡರಲ್ಲಿ ಮಾತ್ರ ಹಣ ಪ್ರಸ್ತುತ ದಿನಗಳಲ್ಲಿ ನೀಡಲಾಗುತ್ತಿತ್ತು, ಸರ್ಕಾರವು ಕೂಡ ಅವರ ಖಾತೆಗೆ ಹಣವನ್ನು ಜಮಾ ಮಾಡುತ್ತಿದ್ದು, ಆದ ಕಾರಣ ಯಾವ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ, ಅನ್ನಭಾಗ್ಯ ಯೋಜನೆ ಮುಖಾಂತರ ಅಕ್ಕಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಹಾಗೂ ಗೃಹಲಕ್ಷ್ಮಿ ಯೋಜನೆ ಮುಖಾಂತರ ಯಜಮಾನಿ ಮಹಿಳೆಗೆ ಹಣ ದೊರೆಯುತ್ತಿತ್ತು. ಈ ಯೋಜನೆ ಮುಖಾಂತರ ಇನ್ಮುಂದೆ ಕೆಲ ಮಹಿಳಾ ಅಭ್ಯರ್ಥಿಗಳಿಗೆ ಹಣ ದೊರೆಯುವುದಿಲ್ಲ. ಏಕೆಂದರೆ ಅವರು ಈ ಒಂದು ಸಮಸ್ಯೆಗೆ ಒಳಗಾಗಿದ್ದಾರೆ. ಯಾವ ಸಮಸ್ಯೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದ ಕಡೆಯಿಂದ ರದ್ದಾಯಿತು ಬಿಪಿಎಲ್ ಕಾರ್ಡ್ ಗಳು.
ಹೌದು ಸ್ನೇಹಿತರೆ ಈಗಾಗಲೇ ಸಾಕಷ್ಟು ಜನರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ. ರದ್ದಾಗಿರುವಂತಹ ಗ್ಯಾರಂಟಿ ಯೋಜನೆಗಳ ಮುಖಾಂತರ ಹಣ ದೊರೆಯುವುದಿಲ್ಲ. ಅಂತವರು ಏನು ಮಾಡಬೇಕು ರದ್ದಾಗಿದೆಯೋ ಇಲ್ಲವೋ ಎಂಬುದನ್ನು ಕೂಡ ಈ ಒಂದು ಲೇಖನದಲ್ಲಿ ತಿಳಿಸಿರುವ ಹಾಗೆ ಪರಿಶೀಲಿಸಿಕೊಳ್ಳಬಹುದು. ಆದ್ದರಿಂದ ಲೇಖನವನ್ನು ನೀವು ಕೊನೆವರೆಗೂ ಓದುವ ಮುಖಾಂತರ ಸಂಪೂರ್ಣವಾದ ಮಾಹಿತಿ ತಿಳಿದು ನಿಮ್ಮ ರೇಷನ್ ಕಾರ್ಡ್ ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬುದನ್ನು ಕೂಡ ನೀವು ನೋಡಬೇಕಾಗುತ್ತದೆ.
ನೀವು ಯಾವ ರೀತಿಯ ತಪ್ಪುಗಳನ್ನು ಮಾಡದೆ ಇದ್ದರೂ ಕೂಡ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಕೂಡ ಇವೆ ಎಂದರ್ಥ. ಆ ಒಂದು ತಾಂತ್ರಿಕ ಸಮಸ್ಯೆಗಳಿಂದ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿರುತ್ತದೆ. ರದ್ದಾದ ಕಾರಣದಿಂದಲೂ ಕೂಡ ಯಾವ ಯೋಜನೆ ಮೂಲಕ ಹಣ ಬಂದಿರುವುದಿಲ್ಲ ಅಂತಹ ಅಭ್ಯರ್ಥಿಗಳು ಮತ್ತೊಮ್ಮೆ ಆಹಾರ ಇಲಾಖೆಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಇಂಥವರ ರೇಷನ್ ಕಾರ್ಡ್ ರದ್ದಾಗಿದೆ.
- ಆದಾಯ ತೆರಿಗೆಯನ್ನು ಪಾವತಿ ಮಾಡುವ ಮೂಲಕವೂ ಕೂಡ ಈಗಾಗಲೇ ಕೆಲ ಅಭ್ಯರ್ಥಿಗಳು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರು, ಅಂಥವರ ಬಿಪಿಎಲ್ ಕಾರ್ಡ್ ಗಳು ಸರ್ಕಾರದ ಗಮನಕ್ಕೆ ಬಂದು ರದ್ದಾಗಿವೆ.
- ಕಳೆದ ಆರು ತಿಂಗಳಿನಿಂದ ಯಾವುದೇ ರೀತಿಯ ಆಹಾರ ಧಾನ್ಯಗಳನ್ನು ಪಡೆಯದೆ ಇರುವವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ.
- ಒಂದೇ ಮನೆಯಲ್ಲಿ ಹೆಚ್ಚಿನ ರೇಷನ್ ಕಾರ್ಡ್ ಗಳನ್ನು ಹೊಂದಿದಂತಹ ಎಲ್ಲಾ ಅಭ್ಯರ್ಥಿಗಳ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ.
- ಸರ್ಕಾರ ನೀಡುವಂತಹ ಶರತ್ತು ಹಾಗೂ ಮಾನದಂಡಗಳನ್ನು ಅನುಸರಿಸದೇ ಇರುವಂತಹ ಅಭ್ಯರ್ಥಿಗಳ ರೇಷನ್ ಕಾರ್ಡ್ ಕೂಡ ರದ್ದಾಗಿವೆ.
ಈ ಮೇಲ್ಕಂಡ ಕಾರಣಗಳಿಂದ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿರುತ್ತವೆ, ಒಂದೊಮ್ಮೆ ನೀವು ಫೋನಿನ ಮುಖಾಂತರವೇ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಎಂಬುದು ಕೂಡ ಪರಿಶೀಲಿಸಿಕೊಳ್ಳುವುದು ಉತ್ತಮ. ಏಕೆಂದರೆ ಕೆಲ ಅಭ್ಯರ್ಥಿಗಳಿಗೆ ಸಾಕಷ್ಟು ತಿಂಗಳಿಗಳಿಂದ ಯಾವುದೇ ಗ್ಯಾರಂಟಿ ಯೋಜನೆಗಳ ಮುಖಾಂತರವೂ ಕೂಡ ಹಣ ದೊರೆಯುತ್ತಿಲ್ಲ. ಹಾಗೂ ಪಡಿತರ ಧಾನ್ಯಗಳನ್ನು ಪಡೆಯಲು ಹೋದ ಸಂದರ್ಭದಲ್ಲಿ ಕೂಡ ಪಡಿತರ ಧಾನ್ಯಗಳು ದೊರೆಯುತ್ತಿಲ್ಲ. ಅಂತಹ ಸಮಸ್ಯೆಗಳು ನಿಮಗಾಗಿದೆ ಎಂದರೆ ನೀವು ಒಂದೊಮ್ಮೆ ಪರಿಶೀಲಿಸುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಇರುವುದಿಲ್ಲ.
ರದ್ದಾಗಿರುವ ರೇಷನ್ ಕಾರ್ಡ್ ಗಳನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
- ಎಲ್ಲಾ ಅಭ್ಯರ್ಥಿಗಳು ಕೂಡ ಆಹಾರ ಇಲಾಖೆ ವೆಬ್ಸೈಟ್ನಲ್ಲಿ ತಮ್ಮ ರೇಷನ್ ಕಾರ್ಡ್ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು. ಮೊದಲಿಗೆ ನೀವು ಈ ಒಂದು https://ahara.kar.nic.in/ ಲಿಂಕನ್ನು ಕ್ಲಿಕ್ಕಿಸಿ.
- ಕ್ಲಿಕಿಸಿದ ನಂತರವೇ ಆಹಾರ ಇಲಾಖೆ ಭೇಟಿ ನೀಡುತ್ತಿರಿ.
- ಆ ಒಂದು ಪುಟದಲ್ಲಿ ಪಡಿತರ ಸ್ಥಿತಿ ಎಂಬುದನ್ನು ನೀವು ನೋಡಿ ಕ್ಲಿಕ್ ಮಾಡಬೇಕು.
- ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೀವು ಇಲ್ಲಿ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿರಿ.
- ಪ್ರಸ್ತುತ ಪುಟದೊಳಗೆ ನಿಮ್ಮ ಜಿಲ್ಲೆ ಯಾವುದು? ಗ್ರಾಮ ಯಾವುದು ? ಹೋಬಳಿ ಯಾವುದು ಎಂಬ ಎಲ್ಲವುದರ ಮಾಹಿತಿಯನ್ನು ನೀವು ಇಲ್ಲಿ ಒದಗಿಸಿ ಗೋ ಎಂಬುದನ್ನು ಕ್ಲಿಕ್ಕಿಸಬೇಕು.
- ಕೆಲವೊಂದು ರದ್ದಾಗಿರುವಂತಹ ಪಡಿತರ ಚೀಟಿದಾರರ ಲಿಸ್ಟ್ ಕೂಡ ಕಾಣುತ್ತದೆ.
- ಆ ಒಂದು ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆ ಎಂದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ.
- ಏಕೆ ರದ್ದಾಗಿದೆ ಎಂಬ ಕಾರಣವೂ ಕೂಡ ಆ ಒಂದು ಪುಟದಲ್ಲಿಯೇ ತಿಳಿಯುತ್ತದೆ.
ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು….