ರೇಷನ್ ಕಾರ್ಡ್ (Ration card) ಎನ್ನುವುದು ಈಗ ಕೇವಲ ಪಡಿತರ ಪಡೆದುಕೊಳ್ಳುವುದಕ್ಕೆ ಅಥವಾ ಸರ್ಕಾರದ ಉಚಿತ ಯೋಜನೆಗಳ ಪ್ರಯೋಜನ ತೆಗೆದುಕೊಳ್ಳುವುದಕ್ಕೆ ಮಾತ್ರ ಅಲ್ಲದೆ ರೇಷನ್ ಕಾರ್ಡ್ ಅನ್ನು ನಿಮ್ಮ ಗುರುತಿನ ಪುರಾವೆಯಾಗಿಯೂ ಕೂಡ ಬಳಸಿಕೊಳ್ಳಬಹುದು.
ಕರ್ನಾಟಕ ರಾಜ್ಯದ ಜನತೆಗೆ ಇತ್ತೀಚೆಗೆ ಹೊಸ ಪಡಿತರ ಚೀಟಿ ವಿತರಣೆ (new ration card distribution) ಮಾಡಲಾಗುತ್ತಿದೆ. ಒಂದಷ್ಟು ಅಕ್ರಮವಾದ ಪಡಿತರ ಚೀಟಿ ರದ್ದುಪಡಿ ಮಾಡಲಾಗುತ್ತಿದ್ದರು ಕೂಡ, ಕಳೆದ ಎರಡುವರೆ ವರ್ಷಗಳಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ ಪ್ರತಿ ಜಿಲ್ಲೆಗೂ ಪಡಿತರ ಚೀಟಿ ವಿತರಣೆ ಮಾಡಲಾಗುತ್ತಿದೆ.
ನೀವು BPL ಕಾರ್ಡ್ (BPL card) ಹೊಂದಿದ್ದರೆ ಉಚಿತ ಪಡಿತರ ಪಡೆದುಕೊಳ್ಳುವುದು ಮಾತ್ರ ಅಲ್ಲವೇ ಸರ್ಕಾರದ ಉಚಿತ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ (Gruha lakshmi scheme), ಅನ್ನಭಾಗ್ಯ ಯೋಜನೆ ಹಾಗೂ ಕೇಂದ್ರ ಸರಕಾರದಿಂದ ಬಿಡುಗಡೆ ಆಗಿರುವ ಹಲವು ಯೋಜನೆಗಳ ಪ್ರಯೋಜನ ಪಡೆಯಬಹುದು ಆಗಿದೆ. ಪ್ರಯೋಜನಗಳಿಗೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರುಗಳನ್ನು ಕೂಡ ಸೇರ್ಪಡೆ ಮಾಡಬೇಕು.
ಮಕ್ಕಳ ಹೆಸರು ಸೇರ್ಪಡೆ ಮಾಡಲು ಬೇಕಾಗುವ ದಾಖಲೆಗಳು:
- ಮಗುವಿನ ಜನನದ ಪ್ರಮಾಣ ಪತ್ರ (birth certificate)
- ಕುಟುಂಬದ ಮುಖ್ಯಸ್ಥರ ಆಧಾರ್ (ರೇಷನ್ ಕಾರ್ಡ್ ನಲ್ಲಿ ಇರುವ ಮುಖ್ಯಸ್ಥರ ಹೆಸರು) ಆಧಾರ್ ಕಾರ್ಡ್
- ಪಡಿತರ ಚೀಟಿ
ಅರ್ಜಿ ಸಲ್ಲಿಸುವುದು ಹೇಗೆ?
ಮಕ್ಕಳ ಹೆಸರನ್ನು ಹೊಸದಾಗಿ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಲು ನೀವು ಆನ್ಲೈನ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ಜಾಲತಾಣ, https://ahara.kar.nic.in/Home/EServices ಅನ್ನು ಕ್ಲಿಕ್ ಅನ್ನು ಮಾಡಿ. ಆಹಾರ ಇಲಾಖೆಯ ಇ – ಸರ್ವಿಸ್ ಪೇಜ್ ತೆರೆದುಕೊಳ್ಳುತ್ತದೆ ನೋಡಿ.
ಇಲ್ಲಿ ನೀವು ಪಡಿತರ ಖಾತೆಗೆ ಹೊಸ ಸದಸ್ಯರ ಹೆಸರು ಸೇರಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಈಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಬೇಕಾಗಿದೆ.
ಹೆಸರು ಸೇರಿಸಲು ಸರಿಯಾದ ದಾಖಲೆಗಳನ್ನು ಮಾತ್ರ ನೀಡಬೇಕು. ನೀವು ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ತಿದ್ದುಪಡಿ ಮನವಿ ಸಲ್ಲಿಕೆಯು ಆಗುತ್ತದೆ. ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು “ಫಲಾನುಭವಿಗಳ ಸ್ಥಿತಿ” ಯಲ್ಲಿ ಇದನ್ನು ತಿಳಿದುಕೊಳ್ಳಬಹುದು.
ಹೀಗೆ ಅತ್ಯಂತ ಸುಲಭವಾಗಿ ನೀವು ನಿಮ್ಮ ಮನೆಯ ಹೊಸ ಸದಸ್ಯರ ಅಥವಾ ಈಗ ತಾನೆ ಹುಟ್ಟಿದ ಮಗುವಿನ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯನ್ನೂ ಮಾಡಬಹುದು.