Ration Card Update : ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಓದುಗರಿಗೆ ತಿಳಿಸುವುದೇನೆಂದರೆ, ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಬಿಡುತ್ತಾರೆ ಮತ್ತು ಹೊಸ ರೇಷನ್ ಕಾರ್ಡ್ ಗಳ ಅರ್ಜಿಯನ್ನು ಯಾವಾಗ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ನಿಮಗೆ ತಿಳಿಸಲು ಈ ಲೇಖನವನ್ನು ಕೂಡ ಹಾಕಲಾಗಿರುತ್ತದೆ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿಯನ್ನು ನೀವು ಕೂಡ ಪಡೆದುಕೊಳ್ಳಿ.
ಸ್ನೇಹಿತರೆ ಇದೇ ರೀತಿಯ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರದ ಸುದ್ದಿ ಅಲ್ಲಿ ದೊರಕುತ್ತವೆ. ಹಾಗಾಗಿ ನೀವು ಈಗಲೇ ವಾಟ್ಸಪ್ ಗ್ರೂಪ್ ಗೆ ನೀವು ಜಾಯಿನ್ ಆಗಿ.
ಸ್ನೇಹಿತರೆ ಈಗ ರೇಷನ್ ಕಾರ್ಡ್ ಯಾವುದೇ ರೀತಿಯಾಗಿ ತಿದ್ದುಪಡಿ ಮಾಡಲು ಅಥವಾ ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ನಿಮಗೆ ಅವಕಾಶ ಇಲ್ಲ. ಆದರೆ ಕೆಲವು ಜನ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಸುತ್ತಿದ್ದಾರೆ ಹಾಗೂ ಹೊಸ ರೇಷನ್ ಕಾರ್ಡ್ ಮಾಡುತ್ತಿದ್ದಾರೆ ಎಂಬ ಸುಳ್ಳು ಹೊರಡಿಸುತ್ತಿದ್ದಾರೆ ಅದನ್ನು ಯಾವುದೇ ಕಾರಣಕ್ಕೂ ನೀವು ನಂಬಬೇಡಿ.
ಇದೀಗ ನಿಮಗೆ ತಿಳಿಸುವುದೇನೆಂದರೆ ರೇಷನ್ ಕಾರ್ಡ್ ತಿದ್ದುಪಡಿಯು ಇದೇ ತಿಂಗಳಲ್ಲಿ ಬಿಡಲಿದ್ದಾರೆ ಎಂಬ ಸಣ್ಣ ಮಟ್ಟದ ಸೂಚನೆಯು ಹೊರ ಬಂದಿದ್ದು, ಯಾವ ದಿನಾಂಕದಂದು ಬಿಡುತ್ತಾರೋ ಅದು ಕನ್ಫರ್ಮ್ ಆಗಿ ಗೊತ್ತಿರುವುದಿಲ್ಲ. ಇವತ್ತೇ ಅರ್ಜಿ ಸಲ್ಲಿಸಲು ಅವಕಾಶ ಕೊಡಬಹುದು ಅಥವಾ ನಾಳೆ ಅವಕಾಶ ಕೊಡಬಹುದು ಅಥವಾ ನಾಡಿದ್ದು ಕೊಡಬಹುದು ಆದ ಕಾರಣ ನಿಮಗೆ ಒಂದು ಸುಲಭ ಮಾರ್ಗವನ್ನು ಈಗ ಹೇಳಿಕೊಡಲಿದ್ದೇನೆ.
ಸ್ನೇಹಿತರೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಮತ್ತು ಹೊಸ ಹೆಸರುಗಳನ್ನು ಸೇರಿಸಲು ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಯಾವಾಗ ದಿನಾಂಕ ಘೋಷಿಸುತ್ತಾರೋ ಗೊತ್ತಿಲ್ಲ ಬಿಟ್ಟರೂ ಕೂಡ ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ಸರ್ವರನ್ನು (server) ಬಂದ್ ಮಾಡುತ್ತಾರೆ ಆದ ಕಾರಣ ನಿಮಗೆ ಒಂದು ಒಳ್ಳೆಯ ದಾರಿಯನ್ನು ಇದೀಗ ಹೇಳಿಕೊಡಲಿದ್ದೇನೆ.
ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಹಾಗೂ CSC ಕೇಂದ್ರಗಳು ಹಾಗೂ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡುವ ಕೇಂದ್ರಗಳಿಗೆ ನೀವು ನಿಮ್ಮ ದಾಖಲೆಗಳನ್ನು ಮೊದಲಿಗೆ ಒದಗಿಸಿ ಇಡಿ. ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಅವರ ಹತ್ತಿರ ಕೊಟ್ಟಿರಿ ಅವರು ಯಾವಾಗ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಬಿಡುತ್ತಾರೋ ಅವಾಗ ಅವರು ಒಟಿಪಿ ಮೂಲಕ ಅರ್ಜಿಯನ್ನು ಅವ್ರೇ ಸಲ್ಲಿಸುತ್ತಾರೆ.
ಯಾವುದೇ ರೀತಿಯ ಬಯೋಮೆಟ್ರಿಕ್ ಹಾಗೂ ಒಟಿಪಿ ಎಲ್ಲಿ ತಿದ್ದುಪಡಿ ಮಾಡುವುದರಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಾಸವೂ ಕೂಡ ಇರುವುದಿಲ್ಲ. ಓಟಿಪಿಯಲ್ಲಿ ಮಾಡಿದ ತಕ್ಷಣ ಲೇಟಾಗಿ ಅಪ್ರುವಲ್ ಆಗುವುದು ಅಥವಾ ಬಯೋಮೆಟ್ರಿಕ್ ಅಲ್ಲಿ ಮಾಡುವುದರಿಂದ ಬೇಗನೆ ಆಗುವುದು ಈ ರೀತಿ ಯಾವುದೇ ಸಮಸ್ಯೆ ಇರುವುದಿಲ್ಲ ಎಲ್ಲವೂ ಒಂದೇ ರೀತಿಯದ್ದು ಆಗಿರುತ್ತದೆ.
ಆದಕಾರಣ ನೀವು ಏನು ಮಾಡಬೇಕೆಂದರೆ ಮೇಲೆ ತಿಳಿಸಿದ ಹಾಗೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಕೇಂದ್ರದಲ್ಲಿ ನಿಮ್ಮ ಸರಿಯಾದ ದಾಖಲೆಗಳನ್ನು ಒದಗಿಸಿ ಕೊಟ್ಟಿರಿ ಅರ್ಜಿ ಸಲ್ಲಿಸಲು ಆರಂಭವಾದ ತಕ್ಷಣವೇ ಅವರು ನಿಮಗೆ ಮೊಬೈಲ್ ನಂಬರ್ ಮೂಲಕ ಒಟಿಪಿಯನ್ನು ಕಳಿಸಿ verify ಮಾಡಿ ತಿದ್ದುಪಡಿಯನ್ನ ಮಾಡಿಕೊಡುತ್ತಾರೆ ಆದರೆ ಒಂದು ಮಾತ್ರ ನೆನಪಿಡಿ ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಬೇಕಾದರೂ ಆರಂಭವಾಗಬಹುದು ಅದು ಕೇವಲ ಕೆಲವೇ ಗಂಟೆಗಳ ಕಾಲ ಮಾತ್ರ ಚಾಲ್ತಿಯಲ್ಲಿರುತ್ತದೆ.