Ration Card Update News: ನಮಸ್ಕಾರ ಕರ್ನಾಟಕ ಸಮಸ್ತ ಜನತೆಗೆ: ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಕರ್ನಾಟಕ ಸರ್ಕಾರ ಪಡಿತರ ಚೀಟಿ(Ration Card)ಆಧಾರವಾಗಿದೆ ಈ ಕಾರ್ಡ್‌ನೊಂದಿಗೆ ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಸಬ್ಸಿಡಿಗಳ ಮೂಲಕ ವಸ್ತುಗಳನ್ನು ಪಡೆಯಬಹುದು. ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆಯು ಜಾರಿಗೆ ತಂದಿದ್ದಾರೆ.
ಸ್ನೇಹಿತರೆ,ಇತ್ತೀಚಿಗೆ ನಡೆದ ಕರ್ನಾಟಕದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕಿಯಾದ ನಯನಾ ಮೋಟಮ್ಮ ಅವರು BPL ಮತ್ತು APL ರೇಷನ್ ಕಾರ್ಡ್‌ಗಳ ಅರ್ಜಿಗಳ ತಾಂತ್ರಿಕ ಸಮಸ್ಯೆಯ ಬಗ್ಗೆ ಸಚಿವರ ತಮ್ಮ ಗಮನವನ್ನು ಸೆಳೆದರು ಅನ್ನಭಾಗ್ಯ ಯೋಜನೆ ಜಾರಿಯಾಗಿ ಇಷ್ಟು ತಿಂಗಳಾದರೂ ಕೂಡ ಅರ್ಹರಿಗೆ 5KG ಅಕ್ಕಿ ಹಣ ಇನ್ನೂ ಕೂಡ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಎಂದು ಕೂಡ ಬೇಸರ ವ್ಯಕ್ತಪಡಿಸಿದರು.
ಸ್ನೇಹಿತರೆ,ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ K.H ಮುನಿಯಪ್ಪ ಅವರು ಸುಮಾರು 2.5 ಲಕ್ಷ BPL ಕಾರ್ಡ್ ಗಳನ್ನ ಈ ವರ್ಷ ವಿತರಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಇನ್ನುಳಿದ ಅರ್ಜಿಯನ್ನು ಮಾರ್ಚ್ 31 ದಿನದ ರೊಳಗಾಗಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗಿದೆ ಏಪ್ರಿಲ್ 1 ರಿಂದಲೇ BPL ಮತ್ತು APL ರೇಷನ್ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಸೂಚನೆ ನೀಡಿದೆ.
ಈಗಾಗಲೇ ಹೊಸ ಪಡಿತರ ಚೀಟಿ ಪಡೆಯಲು ಸಲ್ಲಿಕೆಯಾದ ಅರ್ಜಿದಾರರಿಗೆ ರೇಶನ್ ಕಾರ್ಡ ವಿತರಣೆ ಮಾಡುವುದರ ಜೊತೆಗೆ ಈ ಅರ್ಜಿಗಳ ಹಂಚಿಕೆ ಪ್ರಕ್ರಿಯೆ ಮುಗಿದ ನಂತರಅಂದರೆ ಏಪ್ರಿಲ್ 1 2024ರ ನಂತರ ಹೊಸ ಕಾರ್ಡುಗಳಿಗೆ ಅರ್ಜಿಯನ್ನು ಕೂಡ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಬಹುದು.
ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ Online ಅರ್ಜಿ ಸಲ್ಲಿಸುವರಾಗಿದ್ದರೆ ಈ ಕೆಳಗೆ ನೀಡಿರುವ ಲಿಂಕ್ ಬಳಸುವದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
- ಗುರುತಿನ ಚೀಟಿ.
- ವಿಳಾಸ.
- ಪಾಸ್ಪೋರ್ಟ್ ಅಳತೆಯ ಫೋಟೋಗಳು.
- ಆದಾಯದ ಪುರಾವೆ.
- ವಾರ್ಡ್ ಕೌನ್ಸಿಲರ್ ಮತ್ತು ಪ್ರಧಾನ್ ಮಂತ್ರಿ ಅವರಿಂದ ಪ್ರಮಾಣಪತ್ರ.