Self Employment Loan Scheme: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ನೀವು ಕೂಡ ಸ್ವಯಂ ಉದ್ಯೋಗ ಪ್ರಾರಂಭಿಸಬೇಕು ಎಂದುಕೊಂಡಿದ್ದೀರ ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೂ ಉಪಯುಕ್ತವಾಗಲಿದೆ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಹೋದರು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರಹದ ಉದ್ಯೋಗದ ಮಾಹಿತಿಗಳು ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳ ಬಗ್ಗೆ ಮಾಹಿತಿ ದೊರಕುತ್ತದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಉಪಯೋಗವೇನು ಮತ್ತು ಯಾವ ರೀತಿ ಸಾಲ ಪಡೆದುಕೊಳ್ಳಬೇಕು ಮತ್ತು ಅರ್ಹತೆಗಳೇನು ಯಾವ ರೀತಿ ಬಡ್ಡಿ ದರ ಇರುತ್ತದೆ ಎಂಬುದರ ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇನೆ ಗಮನದಿಂದ ಕೊನೆವರೆಗೂ ನೋಡಿಕೊಳ್ಳಿ.
ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ನಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಭರ್ಜರಿ ಆಹ್ವಾನ! ನೀವು ಬೇಗನೆ ಅರ್ಜಿ ಸಲ್ಲಿಸಿ!
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಉದ್ದೇಶ!
ಸ್ವಯಂ ಉದ್ಯೋಗದ ಯೋಜನೆ ಅಡಿ ಅಲ್ಪಸಂಖ್ಯಾತರ ಜನರ ಗುಡಿ ಕೈಗಾರಿಕೆ, ಸಣ್ಣ ಪ್ರಮಾಣದ ವ್ಯಾಪಾರ, ಕೃಷಿ ಚಟುವಟಿಕೆಗಳು ಹಾಗೂ ಇತರೆ ಸ್ವಂತ ಉದ್ಯೋಗಗಳಿಗೆ ಸಾಲ ಮತ್ತು ಸಹಾಯಧನವನ್ನು ನೀಡುವ ಮುಖ್ಯ ಉದ್ದೇಶವನ್ನು ಹೊಂದಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ ನೀವು ಸ್ವಂತ ಉದ್ಯೋಗವನ್ನು ಆರಂಭಿಸಲು ರೂಪಾಯಿ ಒಂದು ಲಕ್ಷ ಸಹಾಯಧನ ಸಿಗುತ್ತದೆ ಎಂದು ತಿಳಿದುಬಂದಿದೆ.
ಅರ್ಹತೆಗಳು!
- ಅರ್ಜಿದಾರನು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರನು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಎಂದು ತಿಳಿಸಲಾಗಿದೆ.
- ಅರ್ಜಿದಾರರನ್ನು ಕೆ ಎಂ ಡಿ ಸಿ ಯಲ್ಲಿ ಸುಸ್ತಿಗೆದಾರನಾಗಿರಬಾರದು.
- ಅರ್ಜಿದಾರನ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರಿಯಲ್ಲಿ ಇರಬಾರದು.
- ಅರ್ಜಿದಾರನ ಕುಟುಂಬದ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು (ವಾರ್ಷಿಕವಾಗಿ).
- ಅರ್ಜಿದಾರನ ವಯಸ್ಸು ಕನಿಷ್ಠ 18ರಿಂದ ಹಿಡಿದು ಗರಿಷ್ಠ 55 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಪಾಸ್ ಪೋರ್ಟ್ ಸೈಜ್ ಫೋಟೋ (2)
- ಅಲ್ಪಸಂಖ್ಯಾತರ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ನಿವಾಸದ ಪುರಾವೆ
- ಯೋಜನಾ ವರದಿ
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಲಿಂಕ್ ಮೇಲೆ ಇದೆ ನೋಡಿ.
ನಂತರ ಮುಖಪುಟದಲ್ಲಿ ಸ್ವಯಂ ಉದ್ಯೋಗ ಯೋಜನೆ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ಕಿಸಿ.
ನಂತರ ಮೊಬೈಲ್ ನಂಬರ್ ಹಾಕಿ ಓಟಿಪಿಯನ್ನು ವೆರಿಫೈ ಮಾಡಿ.
ಮುಂದಿನ ಹಂತಗಳನ್ನು ಪೂರ್ಣಗೊಳಿಸಿ.
ಅರ್ಜಿದಾರನ ಕೆಲವು ವಿವರಗಳನ್ನು ತುಂಬಬೇಕು.
ಬ್ಯಾಂಕ್ ಮತ್ತು ಸಾಲದ ವಿವರಗಳನ್ನು ಒಪ್ಪಿಸಿ.
ಎಲ್ಲಾ ದಾಖಲೆಗಳನ್ನು ಒಪ್ಪಿಸಬೇಕಾಗುತ್ತದೆ ಮತ್ತು ಎಲ್ಲಾ ದಾಖಲೆಗಳು ಸರಿ ಇವೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/02/2024
ಇದನ್ನೂ ಓದಿ
ಸ್ನೇಹಿತರೆ ಈ ರೀತಿಯಾಗಿ ನೀವು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಮೇಲೆ ಕೊಟ್ಟಿರುವಂತಹ ಹಂತಗಳನ್ನು ಮತ್ತು ಬೇಕಾಗಿರುವಂತ ದಾಖಲೆಗಳನ್ನು ಸರಿಪಡಿಸಿಕೊಂಡು ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕಿಸಿ ಅರ್ಜಿಯನ್ನು ಸಲ್ಲಿಸಿ.