shram shakti yojana: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಯಾರೆಲ್ಲಾ ಸರ್ಕಾರದ ಕಡೆಯಿಂದ 50,000 ಹಣವನ್ನು ಪಡೆದುಕೊಳ್ಳಬೇಕು ಹಾಗೂ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂದು ಕೊಂಡಿದ್ದೀರಾ ? ಅಂತವರಿಗೆ ಹೊಸ ಯೋಜನೆ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ತಿಳಿಸಲಾಗುತ್ತಿದೆ.
ಲೇಖನವನ್ನು ನೀವು ಕೂಡ ಕೊನೆವರೆಗೂ ಓದುವ ಮುಖಾಂತರ ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಹಾಗು ಯಾವೆಲ್ಲ ದಾಖಲಾತಿಗಳನ್ನು ಹೊಂದಿದಂತಹ ಅಭ್ಯರ್ಥಿಗಳು ಮಾತ್ರ ಶ್ರಮಶಕ್ತಿ ಯೋಜನೆ ಮುಖಾಂತರ ಹಣ ಪಡೆಯುತ್ತಾರೆ ಎಂಬುದರ ಎಲ್ಲಾ ವಿವರವನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಈ ಶ್ರಮ ಶಕ್ತಿ ಯೋಜನೆ 2024 !
ಸ್ನೇಹಿತರೆ ನೀವು ಕೂಡ ನಿಮ್ಮದೇ ಆದ ಸ್ವಂತ ಉದ್ಯಮವನ್ನು ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಕೆಂದು ಕೊಂಡಿದ್ದೀರಾ ಹಾಗಿದ್ರೆ ನಿಮಗೆ ಸರ್ಕಾರದಿಂದ 50,000 ಹಣ ದೊರೆಯುತ್ತದೆ. ಆ ಒಂದು 50,000 ಹಣವನ್ನು ನೀವು ಸರ್ಕಾರದಿಂದಲೇ ಪಡೆಯುತ್ತೀರಿ. ಪಡೆಯಲು ನೀವು ಮೊದಲಿಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಬೇಕು.
ನಿಮ್ಮ ದಾಖಲಾತಿಗಳು ಎಲ್ಲವೂ ಕೂಡ ಸರಿ ಇದ್ದರೆ ಮಾತ್ರ ನಿಮಗೆ ಸರ್ಕಾರ ಸಹಾಯಧನವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತದೆ. ಆ ಒಂದು ಹಣದಿಂದ ನೀವು ನಿಮ್ಮ ವ್ಯಾಪಾರಕ್ಕೆ ಬೇಕಾಗುವಂತಹ ಸಾಮಗ್ರಿಗಳನ್ನು ಹಾಗೂ ವಸ್ತುಗಳನ್ನು ಕೂಡ ಖರೀದಿ ಮಾಡಬಹುದು.
ಸಣ್ಣ ವ್ಯಾಪಾರಸ್ಥರಿಗೆ ಹಾಗೂ ದೊಡ್ಡ ಪ್ರಮಾಣದ ವ್ಯಾಪಾರಸ್ಥರಿಗೆ ಶ್ರಮಶಕ್ತಿ ಯೋಜನೆ ಮುಖಾಂತರ ಹಣವನ್ನು ಒದಗಿಸಬೇಕು ಎಂಬ ಕಾರಣದಿಂದ ಸರ್ಕಾರ ಈ ಯೋಜನೆಯನ್ನು ಕೂಡ ಜಾರಿ ಮಾಡಿದೆ. ಹಣದ ಸಹಾಯವನ್ನು ಜನಸಾಮಾನ್ಯರಿಗೆ ಮಾಡಿದಾಗ, ಆ ಜನಸಾಮಾನ್ಯರು ಮತ್ತಷ್ಟು ವೃದ್ಧಿಯಾಗುತ್ತಾರೆ. ವೃದ್ಧಿ ಆದ ನಂತರ ಸರ್ಕಾರದಿಂದ ತೆಗೆದುಕೊಂಡಿರುವಂತಹ ಹಣವನ್ನು ನೀವು ಅರ್ಧದಷ್ಟು ಸರ್ಕಾರಕ್ಕೆ ಪಾವತಿ ಮಾಡಬೇಕು.
ಅಂದರೆ ಸರ್ಕಾರ 25000 ಹಣವನ್ನು ಯಾವುದೇ ರೀತಿಯ ಸಾಲವಾಗಿ ನೀಡುವುದಿಲ್ಲ. ಇದನ್ನು ಸಬ್ಸಿಡಿ ಹಣವಾಗಿ ನಿಮ್ಮ ಖಾತೆಗೆ ನೀಡುತ್ತದೆ. ಆದರೆ ನೀವು ಉಳಿದಂತಹ 25000 ಹಣವನ್ನು ಮಾತ್ರ ಸರ್ಕಾರಕ್ಕೆ ಮರುಪಾವತಿ ಮಾಡಬೇಕಾಗುತ್ತದೆ. ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾತ್ರ ಈ ಒಂದು ಯೋಜನೆ ಮುಖಾಂತರ ಹಣವನ್ನು ಪಡೆಯಲು ಹರಹರಾಗಿರುತ್ತಾರೆ. ನೀವು ಬೇರೆ ವರ್ಗದ ಅಭ್ಯರ್ಥಿಗಳಾಗಿದ್ದರೆ ಸರ್ಕಾರದಲ್ಲಿಯೇ ಸಾಕಷ್ಟು ಯೋಜನೆಗಳು ಇವೆ ಆ ಯೋಜನೆಗಳಿಂದಲೂ ಕೂಡ ನೀವು ಹಣವನ್ನು ಪಡೆಯಬಹುದು.
ಬೇಕಾಗುವಂತಹ ದಾಖಲಾತಿಗಳಿವು.
- ಸಾಲ ಪಡೆಯುವಂತವರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಖಾಯಂ ವಿಳಾಸದ ಮಾಹಿತಿ
- ವಯೋಮಿತಿಯ ಮಾಹಿತಿ
- ಬ್ಯಾಂಕ್ ಖಾತೆ ಮಾಹಿತಿ
ಯಾವ ಅಭ್ಯರ್ಥಿಗಳು ಈ ಹಣ ಪಡೆಯಲು ಅರ್ಹರಾಗಿರುತ್ತಾರೆ.
- ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾತ್ರ ಈ ಒಂದು ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ ಅಲ್ಪಸಂಖ್ಯಾತರು ಅಂದರೆ ಮುಸ್ಲಿಂ ಜನಾಂಗದವರು ಹಾಗೂ ಕ್ರೈಸ್ತ ಧರ್ಮದವರು ಬೌದ್ಧ ವರ್ಗದವರು ಕ್ರಿಶ್ಚಿಯನ್ ಧರ್ಮದವರು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು.
- ಇದುವರೆಗೂ ಕರ್ನಾಟಕದಲ್ಲಿಯೇ ಈ ಅಭ್ಯರ್ಥಿಗಳು ಇರಬೇಕಾಗುತ್ತದೆ. ಕರ್ನಾಟಕದಲ್ಲಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಹಣ ದೊರೆಯಲಿದೆ.
ಈ ಶ್ರಮ ಶಕ್ತಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ.
ಫೋನಿನಲ್ಲಿ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು ಫೋನಿನ ಮುಖಾಂತರ ಅರ್ಜಿ ಸಲ್ಲಿಸುವಂಥವರು https://kmdconline.karnataka.gov.in ಈ ಅಧಿಕೃತ ವೆಬ್ಸೈಟ್ಗೆ ಹೋಗಿ ನಿಮ್ಮ ದಾಖಲಾತಿಗಳನ್ನೆಲ್ಲ ಒಂದೊಮ್ಮೆ ಪರಿಶೀಲನೆ ಮಾಡಿಕೊಂಡು ಅರ್ಜಿ ಸಲ್ಲಿಕೆ ಮಾಡಿರಿ. ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವವರು ಕೆಎಂಡಿಸಿ ಕಚೇರಿಗೆ ಭೇಟಿ ನೀಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…