ಸೀತಾರಾಮ್ ಜಿಂದಾಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. ಪ್ರತಿ ತಿಂಗಳು 3,200 ಹಣವನ್ನು ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಒಂದು ಲೇಖನದ ಮುಖಾಂತರ ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡುವ ಮೂಲಕ ಪ್ರತಿ ತಿಂಗಳು 3,200 ಹಣವನ್ನು ಪಡೆಯಬಹುದಾಗಿದೆ. ಈ ಒಂದು ಹಣ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಯಾರು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು ಹಾಗೂ ಯಾವ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುದರ ಎಲ್ಲಾ ಮಾಹಿತಿಯನ್ನು ಲೇಖನದಲ್ಲಿ ತಿಳಿದುಕೊಳ್ಳಿರಿ. ಈ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೀತಾರಾಮ್ ಜಿಂದಾಲ್ ಫೌಂಡೇಶನ್ ಸ್ಕಾಲರ್ಶಿಪ್ 2024 !

ಈ ಒಂದು ವಿದ್ಯಾರ್ಥಿ ವೇತನಕ್ಕೆ ಈ ವರ್ಷದಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಂದರೆ ಡಿಸೆಂಬರ್ ಕೊನೆಯ ದಿನಾಂಕದವರೆಗೂ ಕೂಡ ನೀವು ಈ ಸೀತಾರಾಮ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು. 11ನೇ ತರಗತಿಯಿಂದ ಮುಂದಿನ ಶಿಕ್ಷಣನಗಳನ್ನು ಪ್ರಸ್ತುತ ದಿನಗಳಲ್ಲಿ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಈ ಸೀತಾರಾಮ್ ಜಿಂದಾಲ್ ಫೌಂಡೇಶನ್ ಕಡೆಯಿಂದ ಪ್ರತಿ ತಿಂಗಳು ಕೂಡ ಹಣ ದೊರೆಯುತ್ತದೆ. ವರ್ಷವಿಡಿಯಲ್ಲೂ ಕೂಡ ಈ ಒಂದು ಹಣ ಜಮಾ ಆಗಲಿದೆ. ಅಂತಹ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಈ ಮಾಹಿತಿಯಂತೆ ಸಲ್ಲಿಸಬಹುದು.

ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.

ವಿದ್ಯಾರ್ಥಿಗಳು ತಮ್ಮ ಇಂದಿನ ಶೈಕ್ಷಣಿಕ ಶಿಕ್ಷಣಗಳಲ್ಲಿ ಕಡ್ಡಾಯವಾಗಿ 45 ರಿಂದ 70ರ ವರೆಗೆ ಕೂಡ ಫಲಿತಾಂಶವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂದರೆ ಪರ್ಸೆಂಟೇಜ್ ಗಳನ್ನು ಕೂಡ ಹೊಂದಿರಬೇಕಾಗುತ್ತದೆ. ನಿಮ್ಮ ಶಿಕ್ಷಣಕ್ಕೆ ಎಷ್ಟು ಅಂಕಗಳು ಪರಿಗಣಿಕೆಯಾಗುತ್ತವೆ ಈ ವಿದ್ಯಾರ್ಥಿ ವೇತನ ಸಿಗಲು ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಂಡು ಆನಂತರ ನೀವು ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡಿ ಅರ್ಜಿಯನ್ನು ಕೂಡ ಆಫ್ಲೈನ್ ಮುಖಾಂತರ ಸಲ್ಲಿಸಬಹುದು.

11ನೇ ತರಗತಿ ವಿದ್ಯಾರ್ಥಿಗಳು ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಐಡಿಐ ಶಿಕ್ಷಣ ಪಡೆಯುತ್ತಿರುವವರು ಸ್ನಾತಕೋತ್ತರ ಪದವೀಧರರು ಈ ಎಲ್ಲಾ ರೀತಿಯ ಶಿಕ್ಷಣಗಳಲ್ಲಿ ಪ್ರಸ್ತುತವಾಗಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಈ ಜಿಂದಾಲ್ ಕಡೆಯಿಂದ ಸ್ಕಾಲರ್ಶಿಪ್ ದೊರೆಯುತ್ತಿದೆ. 7 ವರ್ಗಗಳಾಗಿ ಇಸ್ಕಾಲರ್ಶಿಪ್ ವಿಂಗಡಣೆಯಾಗಿದೆ. ಈ ಏಳು ವರ್ಗಗಳಲ್ಲೂ ಕೂಡ ಬೇರೆ ಬೇರೆ ರೀತಿಯ ಹಣದ ಮೊತ್ತ ಕೂಡ ಹಂಚಿಕೆಯಾಗಿರುತ್ತದೆ. ನಿಮಗೆ ಎಷ್ಟು ಹಣ ಸಿಗುತ್ತದೆಯೋ ಅಷ್ಟು ಹಣವನ್ನು ಜಿಂದಾಲ್ ಕಂಪನಿ ನಿಮ್ಮ ಖಾತೆಗೆ ಜಮಾ ಮಾಡಲಿದೆ.

ಎಷ್ಟು ಹಣ ವಿದ್ಯಾರ್ಥಿ ವೇತನವಾಗಿ ಸಿಗಲಿದೆ ಎಂಬುದರ ಮಾಹಿತಿ.
  • 11ನೇ ಹಾಗೂ 12ನೇ ತರಗತಿ ವಿದ್ಯಾರ್ಥಿ – 500 ಹಣ ಹುಡುಗರಿಗೆ ಸಿಗುತ್ತದೆ. ಹಾಗೂ 700 ಹಣ ಹುಡುಗಿಯರಿಗೆ ಸಿಗಲಿದೆ. ಈ ಒಂದು ಹಣ ಪ್ರತಿ ತಿಂಗಳು ಕೂಡ ಜಮಾ ಆಗುತ್ತದೆ. ತಿಂಗಳ ವಿದ್ಯಾರ್ಥಿವೇತನ ಇದಾಗಿರುತ್ತದೆ.
  • ಐಟಿಐ ವಿದ್ಯಾರ್ಥಿಗಳಿಗೆ – ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 500 ಹಣ ಹಾಗೂ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ 700 ಹಣ ದೊರೆಯುತ್ತದೆ.
  • ಬಿಎ, ಬಿಕಾಂ, ಬಿಸಿಎ, ಇನ್ನಿತರ ಮುಂತಾದವುಗಳ ಡಿಗ್ರಿ ಶಿಕ್ಷಣಕ್ಕೂ ಕೂಡ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ. ಹುಡುಗರಿಗೆ 1100 ಹುಡುಗಿಯರಿಗೆ 1400 ಹಣ ದೊರೆಯಲಿದೆ.
  • ಸ್ನಾತಕೋತ್ತರ ಶಿಕ್ಷಣಕ್ಕೆ – ಹುಡುಗಿಯರಿಗೆ 1800 ಹುಡುಗರಿಗೆ 1500 ವಿದ್ಯಾರ್ಥಿ ವೇತನವಾಗಿ ಅವರ ಖಾತೆಗೆ ಜಮಾ ಆಗಲಿದೆ.
  • ಡಿಪ್ಲೋಮೋ ಶಿಕ್ಷಣ ವಿದ್ಯಾರ್ಥಿಗಳಿಗೆ – ವಿದ್ಯಾರ್ಥಿನಿಯರಿಗೆ 1200 ಹಣ ಹಾಗೂ ವಿದ್ಯಾರ್ಥಿಗಳಿಗೆ 1000 ರೂ ಹಣ
  • ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ – 2200 ರಿಂದ 3200 ರವರೆಗೆ ಹಣ ಸಿಗಲಿದೆ.
  • ಹಾಸ್ಟೆಲ್ ನಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ 1200 ರಿಂದ 1800 ರವರೆಗೆ ಹಣ ಪ್ರತಿ ತಿಂಗಳು ಕೂಡ ದೊರೆಯುತ್ತದೆ.
ಆಫ್ ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಸಿ.

ಎಲ್ಲಾ ವಿದ್ಯಾರ್ಥಿಗಳು ಕೂಡ ಆಫ್ ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ನಮೂನೆಯ ಒಳಗೆ ನಿಮ್ಮ ದಾಖಲಾತಿಗಳನ್ನು ಭರ್ತಿ ಮಾಡಿ. ಈ ಕೆಳಕಂಡ ಮಾಹಿತಿಯಲ್ಲಿ ನೀಡಿರುವಂತಹ ಸ್ಥಳಕ್ಕೆ ಪೋಸ್ಟ್ ಮಾಡುವ ಮುಖಾಂತರ ನಿಮ್ಮ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಅರ್ಜಿ ನಮೂನೆಯನ್ನು ಇಲ್ಲಿ Form Download ಕ್ಲಿಕ್ ಮಾಡುವ ಮುಖಾಂತರ ಡೌನ್ಲೋಡ್ ಮಾಡಿಕೊಳ್ಳಿ. ಆ ಡೌನ್ಲೋಡ್ ಮಾಡಿರುವಂತಹ ಅರ್ಜಿ ನಮೂನೆಯನ್ನು ತೆಗೆದುಕೊಂಡು ನಿಮ್ಮ ದಾಖಲಾತಿಗಳನ್ನು ಫಿಲ್ ಮಾಡಿರಿ ಭರ್ತಿ ಮಾಡಿದ ನಂತರವೇ ನೀವು ಪೋಸ್ಟ್ ಆಫೀಸ್ ಗಳಿಗೆ ಹೋಗಿ ಪೋಸ್ಟ್ ಅನ್ನು ಕೂಡ ಮಾಡಿ ನಿಮಗೆ ಹಣ ಬರುವ ರೀತಿ ಮಾಡಿಕೊಳ್ಳಬಹುದು.

ದಿ ಟ್ರಸ್ಟಿ, ಸೀತಾರಾಮ್ ಜಿಂದಾಲ್ ಫೌಂಡೇಷನ್, ಜಿಂದಾಲ್ ನಗರ, ತುಮಕೂರು ರಸ್ತೆ, ಬೆಂಗಳೂರು – 560073

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *