Southern Railway Jobs 2024: RRC ದಕ್ಷಿಣ ರೈಲ್ವೆಯು ಅಗತ್ಯ 2860 ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಇದೀಗ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಾವಕಾಶ.
2860 ಪೋಸ್ಟ್‌ಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯವಾದ ಮಾಹಿತಿಗಳನ್ನು ಇಲ್ಲಿ ತಿಳಿಸಲಾಗಿದೆ.
ದಕ್ಷಿಣ ರೈಲ್ವೆ ವಲಯದ, ರೈಲ್ವೆ ನೇಮಕಾತಿ ಕೋಶವು ವಲಯದ ಎಲ್ಲ ಡಿವಿಷನ್‌ಗಳಲ್ಲಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗ ಪ್ರಕಟಣೆಯಾನ್ನೂ ಇದೀಗ ಹೊರಡಿಸಿದೆ. 1961 ರ ಅಪ್ರೆಂಟಿಸ್ ಕಾಯ್ದೆಯಡಿ, ಈ ಶಿಶಿಕ್ಷು ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಸಕ್ತರು ಹುದ್ದೆಗಳ ಕುರಿತು ಕಂಪ್ಲೀಟ್ ಡೀಟೇಲ್ಸ್ ಅನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
- ಉದ್ಯೋಗ ರೈಲ್ವೆ ವಲಯ: ದಕ್ಷಿಣ ರೈಲ್ವೆ
- ಹುದ್ದೆಗಳ ಹೆಸರು : ಅಪ್ರೆಂಟಿಸ್ (ತರಬೇತುದಾರರು)
- ಹುದ್ದೆಗಳ ಸಂಖ್ಯೆ : 2860 ಹುದ್ದೆಗಳು
ಫ್ರೆಶರ್ ಕೆಟಗರಿ(Fresher Category)ಅಡಿಯಲ್ಲಿ ಕೊಯಂಬತೂರು, ಪೆರಂಬೂರು ಡಿವಿಷನ್‌ಗಳ ವರ್ಕ್‌ಶಾಪ್ ಹಾಗೂ ಹಾಸ್ಪಿಟಲ್‌ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾಜಿ- ಐಟಿಐ ಅಭ್ಯರ್ಥಿಗಳ ಕೆಟಗರಿ ಅಡಿಯಲ್ಲಿ ಸೇಲಂ, ಪಲಕ್ಕಾಡ್, ಪರೆಂಬೂರು, ಅರಕ್ಕೋನಂ, ಚೆನ್ನೈ ಡಿವಿಷನ್, ಅವಡಿ, ರೊಯಪುರಂ, ಪೊನ್ಮಲೈ, ಮಧುರೈ, ತಿರುಚನಾಪಲ್ಲಿ, ತಂಬರಂ, ಸೇರಿದಂತೆ ವಿವಿಧ ವರ್ಕ್‌ಶಾಪ್ ಹಾಗೂ ಡಿವಿಷನ್‌ಗಳಲ್ಲಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅರ್ಹತೆಗಳು
ಅರ್ಜಿ ಸಲ್ಲಿಸಲು ಬಯಸುವವರು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ ಪಾಸ್ ಮಾಡಿರಬೇಕು. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ವಯೋಮಿತಿ:
ಕನಿಷ್ಠ 15 ವರ್ಷ ಆಗಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿಯನ್ನಾ ಸಲ್ಲಿಸಬಹುದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಒಬಿಸಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ ಎಂದು ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ: 29-01-2024
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-02-2024 ರ ಸಂಜೆ 05 ಗಂಟೆವರೆಗೆ ಇರುತ್ತದೆ.
ಮೇಲಿನ ಮೂರು ವರ್ಕ್‌ಶಾಪ್‌ಗಳಲ್ಲಿ ಎಲ್ಲೆಲ್ಲಿ ಎಷ್ಟು ಹುದ್ದೆಗಳು ಇವೆ ಎಂದು ತಿಳಿಯಲು ನೋಟಿಫಿಕೇಶನ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಬೇಕು.
General ಮತ್ತು OBC ಅಭ್ಯರ್ಥಿಗಳಿಗೆ ಶುಲ್ಕ ರೂ.100. ಇತರೆ ವರ್ಗಗಳ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಹೇಳಬಹುದು.
ಆಯ್ಕೆ ವಿಧಾನ ಹೇಗಿರುತ್ತದೆ?
ಅಭ್ಯರ್ಥಿಗಳನ್ನು ಅವರು ITI ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್