ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಸರ್ಕಾರವು ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಸ್ಪ್ರಿಂಕ್ಲರ್ ಪೈಪ್ ಸೆಟ್ ನೀಡುತ್ತಿದೆ. ಇದನ್ನು ಹೇಗೆ ಉಪಯೋಗಪಡಿಸಿಕೊಳ್ಳಬೇಕು ಮತ್ತು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಸ್ನೇಹಿತರೆ ಇದೇ ರೀತಿಯ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇಂತಹ ಮಾಹಿತಿಗಳು ದಿನನಿತ್ಯ ದೊರಕುತ್ತದೆ ಹಾಗೂ ರೈತರಿಗೆ ಉಪಯುಕ್ತವಾಗುವ ಮತ್ತು ಉದ್ಯೋಗದ ಮಾಹಿತಿಗಳು ಹಾಗೂ ಇತರೆ ವಾರ್ತೆಗಳು ಕೂಡ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಇರುತ್ತದೆ.
ಸ್ನೇಹಿತರೆ ರೈತರಿಗೆ ಸ್ಪ್ರಿಂಕ್ಲರ್ ಪೈಪ್ ಸೆಟ್ ಅನ್ನು ಸುಮಾರು 1,800 ಯಲ್ಲಿ ಸರ್ಕಾರವು ನೀಡುತ್ತಿದೆ ನೀವು ಹೊರಗಡೆ ತಗೊಂಡ್ರೆ ಇದಕ್ಕೆ ತುಂಬಾ ಬೆಲೆ ಕೊಡಬೇಕಾಗುತ್ತದೆ ಅಂದರೆ ಸುಮಾರು 20ರಿಂದ 25000 ವರೆಗೂ ನೀಡಬೇಕಾಗುತ್ತದೆ ಆದರೆ ಸರ್ಕಾರ ರೈತರಿಗೆ ಹನಿ ನೀರಾವರಿ ಉಪಯೋಗವಾಗಲಿ ಎಂದು ಕೇವಲ ಸುಮಾರು 1800ಗಳಲ್ಲಿ ಮಾತ್ರ ನೀಡುತ್ತಿದ್ದಾರೆ.
ಹಾಗಾಗಿ ರೈತರು ಯಾವ ರೀತಿ ಸ್ಪ್ರಿಂಕ್ಲರ್ ಪೈಪ್ ಚಾಟ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂಬುದರ ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇನೆ ನೋಡಿಕೊಳ್ಳಿರಿ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
https://kkisan.karnataka.gov.in/
ಈ ಮೇಲಿರುವ ಲಿಂಕನ್ನು ಪಿಕ್ ಮಾಡುವ ಮೂಲಕ ಅಲ್ಲಿ ನೀವು ಲಾಗಿನ್ ಎನ್ನುವ ಆಪ್ಷನ್ ಒತ್ತಿ ನಂತರ ನೀವು ನಿಮ್ಮ ಎಫ್ ಐ ಡಿ ನಂಬರ್ ಹಾಕಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೇ ಭೇಟಿ ನೀಡಿ ಅಲ್ಲಿ ನೀವು ಬೇಕಾದ ದಾಖಲೆಗಳನ್ನು ಒದಗಿಸುವ ಮೂಲಕ ರೈತರು ಸಬ್ಸಿಡಿ ದರದಲ್ಲಿ ಪ್ರಿಂಕ್ಲರ್ ಗಳನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ನಿಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಹೋಬಳಿಯಲ್ಲಿ ಇರುವ ನಿಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಿಮಗೆ ಇನ್ನಷ್ಟು ಮಾಹಿತಿಗಳು ದೊರಕುತ್ತವೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ಈ ಕೆಳಗಿನ ನೋಡಿಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಆರ್ ಟಿ ಸಿ ಪಹಣಿ
- ಬ್ಯಾಂಕ್ ಪಾಸ್ ಬುಕ್ ವಿವರಗಳು
- 20 ರೂಪಾಯಿ ಸ್ಟ್ಯಾಂಪ್ ಪೇಪರ್
- ನೀರಿನ ಮೂಲದ ದೃಡೀಕರಣ ಪತ್ರ
- ಭಾವಚಿತ್ರ
- ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಅನ್ವಯಿಸುತ್ತದೆ)
ಈ ಎಲ್ಲ ಮೇಲಿನ ದಾಖಲೆಗಳನ್ನು ನೀವು ತೆಗೆದುಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಿಮ್ಮ ಗ್ರಾಮದ ಒಳಗಡೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಲಾಗಿರುತ್ತದೆ.
ಅಥವಾ ಮೇಲೆ ನೀಡಿರುವ ಲಿಂಕ್ ಅನ್ನು ಉಪಯೋಗಿಸಿಕೊಂಡು ನಿಮಗೆ ತಿಳಿಸಿರುವ ಹಾಗೆ ಅಲ್ಲಿ ನಿಮ್ಮ ಲಾಗಿನ್ ಆಗುವ ಮೂಲಕ ಎಫ್ ಐಡಿ ನಂಬರ್ ಹಾಕುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಮತ್ತು ನಿಮ್ಮ ಎಲ್ಲಾ ದಾಖಲೆಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಿ ನಿಮ್ಮ ಬ್ಯಾಂಕ್ ಹೋಗಿ ಹಣವನ್ನು ತುಂಬಿ ಸ್ಪ್ರಿಂಕ್ಲರ್ ಪೈಪ್ ಗಳನ್ನು ಪಡೆದುಕೊಳ್ಳಿ.