SSLC ಪರೀಕ್ಷಾ ಫಲಿತಾಂಶ ಬಿಡುಗಡೆಗೆ ಮುಹೂರ್ತ ಫಿಕ್ಸ್ ! ಫಲಿತಾಂಶದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೇ… 2023-24 ನೇ ಸಾಲಿನ 10ನೇ ತರಗತಿ ಪರೀಕ್ಷಾ ಪಲಿತಾಂಶಕ್ಕೆ ಎಲ್ಲಾ ವಿದ್ಯಾರ್ಥಿಗಳು ಕೂಡ ಕಾಯುತ್ತಿದ್ದೀರಿ. ಈ ಒಂದು ಫಲಿತಾಂಶ ಇದೆ ತಿಂಗಳಲ್ಲಿಯೇ ಬರುತ್ತದೆ. ಈ ತಿಂಗಳಿನಲ್ಲಿ ಯಾವ ದಿನಾಂಕದಂದು ಪ್ರಕಟಣೆ ಆಗುತ್ತದೆ, ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ವಿವರಿಸಲಾಗಿದೆ.

ಮಾಹಿತಿ ತಿಳಿದು ಯಾವ ದಿನಾಂಕದಲ್ಲಿ ನಿಮ್ಮ ಪರೀಕ್ಷಾ ಪಲಿತಾಂಶ ಬಿಡುಗಡೆಯಾಗುತ್ತದೆ ಎಂಬುದನ್ನು ಕೂಡ ನೀವು ತಿಳಿದುಕೊಂಡು, ನಿಮ್ಮ ಫಲಿತಾಂಶ ಎಷ್ಟು ಬಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ನೀವೇನಾದರೂ ಅನುತ್ತೀರ್ಣರಾಗಿದ್ದರೆ ಮುಂದೇನು ಮಾಡಬೇಕು ಎಂಬುದನ್ನು ಕೂಡ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಿರಿ.

SSLC ಪರೀಕ್ಷಾ ಪಲಿತಾಂಶ ಈ ದಿನಾಂಕದಂದು ಬಿಡುಗಡೆ !

ವಿದ್ಯಾರ್ಥಿಗಳೇ ಯಾರೆಲ್ಲ ಈ ವರ್ಷದಂದು ಪರೀಕ್ಷೆಯನ್ನು ತೆಗೆದುಕೊಂಡು ಬರೆದಿದ್ದಿರೋ, ಅಂತವರಿಗೆ ಇದೇ ತಿಂಗಳಿನಲ್ಲಿಯೇ ಪರೀಕ್ಷಾ ಪಲಿತಾಂಶ ಕೂಡ ಬಿಡುಗಡೆ ಆಗುತ್ತದೆ. ಈ ವರ್ಷದಂದು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಇದರಲ್ಲಿ ಕಳೆದ ವರ್ಷ ಪೂರಕ ಪರೀಕ್ಷೆಯನ್ನು ಬರೆದು ಫೇಲ್ ಆದವರು ಕೂಡ ಇದೇ ಸಾಲಿನಲ್ಲಿ ಪರೀಕ್ಷೆಯನ್ನು ಕೂಡ ತೆಗೆದುಕೊಂಡು ಬರೆದಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ತೆಗೆದುಕೊಂಡವರು ಬಾಲಕರು, ನೀವೇನಾದರೂ ಈ ಪರೀಕ್ಷೆ ಒಂದರಲ್ಲಿ ಅನುತ್ತೀರ್ಣ ಅಂಕವನ್ನು ಗಳಿಸಿ ಫೇಲಾಗಿದ್ದೀರಿ ಎಂದರೆ, ನಿಮಗೆ ಇನ್ನು ಎರಡು ಪರೀಕ್ಷೆಗಳು ಕೂಡ ಇರುತ್ತವೆ. ಈ ಎರಡು ಪರೀಕ್ಷೆಯಲ್ಲಿ ಉತ್ತಮವಾದ ಅಂಕವನ್ನು ಗಳಿಸಲು ಪರೀಕ್ಷೆಗಳನ್ನು ಕೂಡ ತೆಗೆದುಕೊಂಡು ಬರೆಯಬಹುದು.

ಈ ತಿಂಗಳಿನಲ್ಲಿಯೇ 10ನೇ ತರಗತಿ ಪರೀಕ್ಷಾ ಪಲಿತಾಂಶ ಪ್ರಕಟ.

ಏಪ್ರಿಲ್ ತಿಂಗಳಿನಿಂದಲೂ ಕೂಡ ಮೌಲ್ಯಮಾಪನವನ್ನು ನಡೆಸುತ್ತಿದೆ ಶಿಕ್ಷಣ ಇಲಾಖೆ. ಇನ್ನೂ ಫಲಿತಾಂಶವನ್ನು ಬಿಡುಗಡೆ ಮಾಡುವುದು ಒಂದು ಬಾಕಿ ಇದೆ ಅಷ್ಟೇ, ವಿದ್ಯಾರ್ಥಿಗಳೇ ಇದೇ ತಿಂಗಳಿನಲ್ಲಿ ಎಂಟನೇ ದಿನಾಂಕದಂದು ಫಲಿತಾಂಶ ಕೂಡ ಬಿಡುಗಡೆ ಆದರೂ ಆಗಬಹುದು. ಏಕೆಂದರೆ ಶಿಕ್ಷಣ ಇಲಾಖೆಯೂ ಈಗಾಗಲೇ ಈ ಒಂದು ನಿಗದಿ ದಿನವನ್ನು ಕೂಡ ಖಚಿತಪಡಿಸಿದೆ. ಆದರೆ ಈ ಒಂದು ದಿನಾಂಕವು ಅಧಿಕೃತವಾಗಿ ಬಿಡುಗಡೆ ಆಗಿಲ್ಲ, ಒಟ್ಟಾರೆ ಹೇಳುವುದಾದರೆ ಇದೇ ತಿಂಗಳಿನಲ್ಲಿ ನಿಮ್ಮ ಫಲಿತಾಂಶ ಕೂಡ ಪ್ರಕಟಣೆ ಆಗುತ್ತದೆ. ಆ ಫಲಿತಾಂಶದ ಮೇರೆಗೆ ನೀವು ಯಾವ ಕಾಲೇಜನ್ನು ಸೇರಿಕೊಳ್ಳುವುದು ಸೂಕ್ತ ಎಂಬುದನ್ನು ಕೂಡ ನೀವು ತಿಳಿಯಬಹುದು.

ಅನುತ್ತೀರ್ಣ ಅಂಕ ಪಡೆದ ವಿದ್ಯಾರ್ಥಿಗಳೇ ಈ ರೀತಿ ಮಾಡಿ.

ನೀವೇನಾದರೂ ಅನುತ್ತೀರ್ಣ ಅಂಕವನ್ನು ಗಳಿಸಿದ್ದೀರಿ ಎಂದರೆ, ನಿಮ್ಮ ಪರೀಕ್ಷಾ ಪಲಿತಾಂಶ ನಾಟ್ ಕಂಪ್ಲೀಟೆಡ್ ಎಂದು ಬಂದಿರುತ್ತದೆ. ಈ ವರ್ಷದಂದು ಅನುತ್ತೀರ್ಣ ಅಂಕವನ್ನು ಗಳಿಸಿ ಫೇಲ್ ಆಗಿದ್ದೀನಿ ಎಂದು ಚಿಂತಿಸಬೇಡಿ. ಏಕೆಂದರೆ ನಿಮಗೆ ಶಿಕ್ಷಣ ಇಲಾಖೆಯು 2 ಕಾಲಾವಕಾಶವನ್ನು ನೀಡುತ್ತದೆ. ಅಂದರೆ, ಎರಡು ಪರೀಕ್ಷೆಯನ್ನು ಕೂಡ ನೀವು ತೆಗೆದುಕೊಂಡು ಬರೆಯಬಹುದು. ಈ ಸಾಲಿನಲ್ಲಿ ಬರೆದಿದ್ದೀರಿ ಎಂದರೆ, ನಿಮಗೆ ಇನ್ನೂ ಕೂಡ ಎರಡು ಪರೀಕ್ಷೆಗಳನ್ನು ಬರೆಯುವಂತಹ ಅವಕಾಶವನ್ನು ನೀಡಿದೆ ಶಿಕ್ಷಣ ಇಲಾಖೆ.

ಆ ಎರಡು ಪರೀಕ್ಷೆಯಲ್ಲಿ ಪರೀಕ್ಷೆ ಎರಡನ್ನು ತೆಗೆದುಕೊಂಡು ಮೊದಲು ಬರೆಯಬೇಕು. ಬಳಿಕ ಈ ಒಂದು ಪರೀಕ್ಷೆಯಲ್ಲಿ ಕೂಡ ಉತ್ತಮವಾದ ಅಂಕವನ್ನು ಗಳಿಸಲಿಲ್ಲ ಎಂದರು ಕೂಡ ನೀವು ಮುಂದಿನ ಪರೀಕ್ಷಾ ಮೂರರಲ್ಲಿ ಅರ್ಜಿ ಸಲ್ಲಿಕೆ ಮಾಡಿ ಪರೀಕ್ಷೆಯನ್ನು ಕೂಡ ಬರೆಯಬಹುದು. ಹೆಚ್ಚಿನ ಅಂಕವನ್ನು ಗಳಿಸಲು ಹೆಚ್ಚಿನ ಆಸಕ್ತಿಯನ್ನು ಯಾರೆಲ್ಲಾ ವಿದ್ಯಾರ್ಥಿಗಳು ತೋರುತ್ತಾರೋ ಅಂತವರು ಪರೀಕ್ಷೆ ಎರಡು ಪರೀಕ್ಷೆ ಮೂರನ್ನು ಕೂಡ ಬರೆಯಬಹುದು. ಫೇಲಾದ ವಿದ್ಯಾರ್ಥಿಗಳು ಕೂಡ ಈ ಎರಡು ಪರೀಕ್ಷೆಯನ್ನು ತೆಗೆದುಕೊಂಡು ಬರೆಯಬಹುದು. ಈ ರೀತಿಯ ಒಂದು ಬದಲಾವಣೆಯನ್ನು ಶಿಕ್ಷಣ ಇಲಾಖೆ ಈ ವರ್ಷದಂದೆ ಮಾಡಿದೆ.

SSLC ರಿಸಲ್ಟ್ ಅನ್ನು ಈ ರೀತಿ ಚೆಕ್ ಮಾಡಿ.

ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ https://karresults.nic.in/ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿರಿ. ಭೇಟಿ ನೀಡಿದ ಬಳಿಕ ನಿಮ್ಮ ರಿಜಿಸ್ಟರ್ ಸಂಖ್ಯೆ ಹಾಗೂ ನಿಮ್ಮ ಹುಟ್ಟಿದ ದಿನಾಂಕವನ್ನು ಹಾಕುವ ಮುಖಾಂತರ ನಿಮ್ಮ ಫಲಿತಾಂಶವನ್ನು ಕೂಡ ನೋಡಬಹುದು. ಈ ಒಂದು ವೆಬ್ಸೈಟ್ನಲ್ಲಿ ಯಾವ ದಿನಾಂಕದಲ್ಲಿ ಪರೀಕ್ಷಾ ಪಲಿತಾಂಶ ಬಿಡುಗಡೆಯಾಗುತ್ತದೆ. ಆ ಸಂದರ್ಭದಲ್ಲಿ ಮಾತ್ರ ಈ ರೀತಿ ಚೆಕ್ ಮಾಡುವಂತ ಅವಕಾಶವನ್ನು ನೀಡಲಾಗುತ್ತದೆ. ಆ ದಿನಾಂಕದಲ್ಲಿ ಈ ಒಂದು ಪರೀಕ್ಷಾ ರಿಸಲ್ಟ್ ಕೂಡ ನೀವು ಸುಲಭವಾಗಿ ನೋಡಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *