SSLC ರಿಸಲ್ಟ್ ಯಾವಾಗ ಪ್ರಕಟಣೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೆ… 8 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸೆಸೆಲ್ಸಿ ರಿಸಲ್ಟ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯು ಆದಷ್ಟು ಬೇಗ ಎಸ್ ಎಸ್ ಎಲ್ ಸಿ ರಿಸಲ್ಟ್ ಗಳನ್ನು ಕೂಡ ಪ್ರಕಟಣೆ ಮಾಡುತ್ತೇವೆ ಎಂಬ ಮಾಹಿತಿಯನ್ನು ಕೂಡ ಹೊರ ಹಾಕಿದೆ. ಪ್ರಸ್ತುತವಾಗಿ ಬರೆದಿರುವಂತಹ ಪರೀಕ್ಷೆ ಯಾವುದೆಂದರೆ ಪರೀಕ್ಷೆ ಒಂದು ಯಾರು ಉತ್ತೀರ್ಣವಾದ ಅಂಕಗಳನ್ನು ಗಳಿಸಿರುತ್ತಾರೋ ಅಂತವರು ಮುಂದಿನ ಶಿಕ್ಷಣಕ್ಕೂ ಕೂಡ ಹೋಗಬಹುದಾಗಿದೆ. ಯಾರು ಕಡಿಮೆ ಅಂಕದಿಂದ ಅನುತ್ತೀರ್ಣರಾಗಿರುತ್ತಾರೆ ಅಂತವರು ಪರೀಕ್ಷೆ ಎರಡು, ಪರೀಕ್ಷೆ ಮೂರರನ್ನು ಕೂಡ ಬರೆಯಬಹುದಾಗಿದೆ. ಈ ಪರೀಕ್ಷೆಗಳ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

SSLC ಶಿಕ್ಷಣದಲ್ಲಿ ಕಡಿಮೆ ಅಂಕಗಳಿಸಿದ್ರೆ ಏನು ಮಾಡಬೇಕು ?

ವಿದ್ಯಾರ್ಥಿಗಳೇ ಯಾರೂ ಕೂಡ ಆತಂಕಕ್ಕೆ ಒಳಗಾಗಬೇಡಿ ಕಡಿಮೆ ಅಂಕಗಳನ್ನು ಗಳಿಸಿದ್ದೇನೆ ಎಂದು ಏಕೆಂದರೆ ಸರ್ಕಾರವು ನಿಮಗೆ ಇನ್ನು ಎರಡು ಪರೀಕ್ಷೆಗಳನ್ನು ಕೂಡ ಬರೆಯಲು ಅವಕಾಶವನ್ನು ನೀಡಿದೆ. ಮೊದಲನೇ ಬಾರಿಗೆ ಈ ರೀತಿಯ ಒಂದು ಹೊಸ ನಿಯಮವನ್ನು ಕೂಡ ಜಾರಿಗೊಳಿಸಿದೆ. ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳು ಅನುತ್ತೀರ್ಣರಾದರು ಕೂಡ ಒಳ್ಳೆಯ ಅಂಕಗಳನ್ನು ಗಳಿಸಲು ಮತ್ತೆ ಮರು ಪರೀಕ್ಷೆಯನ್ನು ಕೂಡ ತೆಗೆದುಕೊಂಡು ಪರೀಕ್ಷೆ ಎರಡು ಪರೀಕ್ಷೆ ಮೂರರಲ್ಲಿ ಮತ್ತೆ ಹೊಸ ಪ್ರಯತ್ನವನ್ನು ಕೂಡ ಮಾಡಬಹುದು. ಪರೀಕ್ಷೆ ಎರಡರಲ್ಲಿ ನೀವೇನಾದರೂ ಪಾಸಾದರೆ ನೀವು ಕೂಡ ಮುಂದಿನ ಶಿಕ್ಷಣಕ್ಕೆ ಹೋಗಬಹುದಾಗಿದೆ.

ಸಾಕಷ್ಟು ವರ್ಷಗಳಿಂದ ಶಿಕ್ಷಣ ಮಂಡಳಿಯ ಪರೀಕ್ಷೆಗಳ ನಿಯಮವೇನೆಂದರೆ ಪ್ರಸ್ತುತವಾಗಿ ಬರೆದಂತಹ ಅಂತಿಮ ಪರೀಕ್ಷೆಯ ರಿಸಲ್ಟ್ ಅನುತ್ತೀರ್ಣವಾಗಿ ಬಂದರೆ ಅವರು ಪೂರಕ ಪರೀಕ್ಷೆಗಳನ್ನು ಕೂಡ ಬರೆಯುತ್ತಿದ್ದರು, ಕಳೆದ ವರ್ಷದಂದು ಎರಡು ಬಾರಿ ಪೂರಕ ಪರೀಕ್ಷೆಗಳನ್ನು ಬರೆಯಲು ಅವಕಾಶವನ್ನು ಮಾಡಲಾಯಿತು. ಆದರೆ ಈ ವರ್ಷದಂದು ಮಾತ್ರ ಈ ಒಂದು ಪರೀಕ್ಷೆಗಳನ್ನು ಪೂರಕ ಪರೀಕ್ಷೆ ಎಂದು ಪರಿಗಣಿಸಲಾಗುವುದಿಲ್ಲ, ಫ್ರೆಶ್ ಸ್ಟೂಡೆಂಟ್ಸ್ ಎಂದೇ ಪರಿಗಣಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಮಾಹಿತಿಯನ್ನು ನೀಡಿದೆ.

ಯಾವ ರೀತಿ ಎಂದರೆ ನೀವೇನಾದರೂ ಪರೀಕ್ಷೆ ಒಂದರಲ್ಲಿ ಕಡಿಮೆ ಅಂಕಗಳನ್ನು ಗಳಿಸಿ ಅನುತ್ತೀರ್ಣರಾಗಿದ್ದೀರಿ ಎಂದರೆ, ನಿಮಗೆ ನಾಟ್ ಕಂಪ್ಲೀಟ್ ಎಂಬ ರಿಸಲ್ಟ್ ಕೂಡ ಬಂದಿರುತ್ತದೆ. ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಬೇಕು ನಾವು ಅನುತ್ತೀರ್ಣರಾದ ಅಂಕಗಳನ್ನು ಗಳಿಸಿದ್ದೇವೆ ಎಂದು ಆ ರೀತಿ ಅಂಕಗಳು ಬಂದರೆ ಪರೀಕ್ಷೆ ಎರಡನ್ನು ತೆಗೆದುಕೊಂಡು ಬರೆಯಬಹುದು. ಪರೀಕ್ಷೆ ಎರಡಕ್ಕೂ ಕೂಡ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

ಇದನ್ನು ಓದಿ :- pm kisan yojana 17ನೇ ಕಂತಿನ ಹಣದ ಬಗ್ಗೆ ಸರ್ಕಾರದಿಂದ ರೈತರಿಗೆ ಬಿಗ್ ಅಪ್ಡೇಟ್ ! ಈ ನಿಗದಿ ದಿನಾಂಕದಲ್ಲಿಯೇ ಜಮಾ ಆಗುತ್ತದೆ.

ಆನಂತರ ಅಡ್ಮಿಶನ್ ಟಿಕೆಟ್ ಕೂಡ ನಿಮ್ಮ ಕೈ ಸೇರಿ ಆ ನಿಗದಿ ದಿನಾಂಕದಂದು ಯಾವ ವಿಷಯದ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ಅಂಕಗಳನ್ನು ಗಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಂಡು ಆ ದಿನದಲ್ಲಿ ನೀವು ಆ ಒಂದು ವಿಷಯದ ಬಗ್ಗೆ ಪರೀಕ್ಷೆಯನ್ನು ಕೂಡ ಬರೆಯಬಹುದು.

SSLC 2024 ನೇ ಸಾಲಿನ ಪರೀಕ್ಷಾ ರಿಸಲ್ಟ್ ಈ ನಿಗದಿ ದಿನದಂದು ಬಿಡುಗಡೆಯಾಗುತ್ತೆ.

ವಿದ್ಯಾರ್ಥಿಗಳೇ ಈಗಾಗಲೇ ಪರೀಕ್ಷೆಯನ್ನು ಕೂಡ ಬರೆದಿದ್ದೀರಿ, ಇನ್ನು ಪರೀಕ್ಷೆಯ ಫಲಿತಾಂಶವನ್ನು ನೋಡಲು ಕೂಡ ಕಾತುರದಿಂದ ಕಾಯುತ್ತಿದ್ದೀರಿ ಏಕೆಂದರೆ ಕಾಲೇಜುಗಳಲ್ಲಿ ಅಡ್ಮಿಶನ್ ಆಗಬೇಕೆಂಬ ಕಾರಣದಿಂದ ಎಲ್ಲಾ ವಿದ್ಯಾರ್ಥಿಗಳು ಕೂಡ ತಮ್ಮ ಫಲಿತಾಂಶದ ಮೇರೆಗೆ ಯಾವ ಕಾಲೇಜು ನಮಗೆ ಸೂಕ್ತ ಕರವಾಗಿ ಮುಂದಿನ ಶಿಕ್ಷಣಕ್ಕೆ ವಿದ್ಯಾಭ್ಯಾಸ ಮಾಡಲು ಯಾವ ಕಾಲೇಜುಗಳು ಸೂಕ್ತಕರವಾಗುತ್ತದೆ ಎಂಬುದನ್ನು ಕೂಡ ತಿಳಿದುಕೊಂಡು ಆ ನಿಗದಿ ಕಾಲೇಜುಗಳಿಗೆ ನೀವು ಈ ವರ್ಷದಲ್ಲಿಯೇ ಸೇರಿಕೊಳ್ಳುತ್ತೀರಿ, ಆದರೆ ಮುಂಚಿತವಾಗಿ ನಿಮಗೆ ಫಲಿತಾಂಶವೂ ಕೂಡ ಬೇಕಾಗುತ್ತದೆ.

ಆ ಒಂದು ಫಲಿತಾಂಶವನ್ನು ಮೇ 8ರಂದು ಕೂಡ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿಯ ತುಣುಕು ಹೊರ ಬಂದಿದೆ. ಆದರೆ ಈ ಒಂದು ರಿಸಲ್ಟ್ ಮುಂಚಿತ ದಿನಗಳಲ್ಲಿಯೇ ಬಂದರು ಬರಬಹುದು. ಅಥವಾ ಈ ನಿಗದಿ ದಿನಾಂಕ ಆದ ನಂತರವೂ ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆಯ ರಿಸಲ್ಟ್ ಕೂಡ ಬಿಡುಗಡೆ ಆಗಬಹುದಾಗಿದೆ. ಮೇ ಮೊದಲನೇ ವಾರ ಅಥವಾ ಮೇ ಎರಡನೇ ವಾರದಂದು ಬಿಡುಗಡೆ ಆಗುತ್ತೆ ಎಸ್ ಎಸ್ ಎಲ್ ಸಿ ರಿಸಲ್ಟ್.

ಆ ನಿಗದಿ ದಿನದಂದು ಉತ್ತೀರ್ಣವಾದ ಅಂಕಗಳನ್ನು ಗಳಿಸಿದ್ದರು ಕೂಡ ಖುಷಿಯಾಗಿ ಇರಿ, ಕಡಿಮೆ ಅಂಕಗಳನ್ನು ಕೂಡ ಗಳಿಸಿದ್ದರು ನಿಮಗೆ ಎರಡು ರೀತಿಯ ಅವಕಾಶ ಮುಂದಿನ ದಿನಗಳಲ್ಲಿ ಸಿಗುತ್ತದೆ. ಯಾವಾಗ ಪರೀಕ್ಷೆ ಎರಡು ಮತ್ತೆ ಪರೀಕ್ಷೆ ಮೂರು ನಡೆಯುತ್ತದೆ ಎಂಬುದನ್ನು ಕೂಡ ನೀವು ಶಿಕ್ಷಣ ಮಂಡಳಿಗಳಿಂದ ಮಾಹಿತಿಯನ್ನು ಕೂಡ ಪಡೆಯಬಹುದು. ಅಧಿಕೃತವಾಗಿಯೇ ಆ ಒಂದು ಪರೀಕ್ಷೆಗಳ ಮಾಹಿತಿಯೂ ಕೂಡ ಪ್ರಕಟಣೆ ಆಗುತ್ತದೆ. ಆ ದಿನದಂದು ನೀವು ಆ ಪರೀಕ್ಷೆಗಳನ್ನು ಬರೆಯಿರಿ ಮತ್ತೆ ಮರು ದಿನಗಳಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿ ಮುಂದಿನ ಶಿಕ್ಷಣಕ್ಕೆ ಹೋಗಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *