State Government jobs: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಯಡಿ ಬರುವ ಗ್ರಾಮ ಆಡಳಿತ ಅಧಿಕಾರಿ ಅಂದರೆ (ಗ್ರಾಮ ಲೆಕ್ಕಿಗ) ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ಇದೀಗ ಒಪ್ಪಿಗೆ ನೀಡಿದೆ. ಒಟ್ಟು 1000 ಹುದ್ದೆಗಳ ಭರ್ತಿಯಾಗಲಿದ್ದು, ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು ಆಯ್ಕೆ ಆಗಲಿವೆ? ಎಂದು ಸಹ ನಿಗದಿ ಮಾಡಲಾಗಿದೆ ಅಂತ ತಿಳಿಸಲಾಗಿದೆ.
ಇದರ ಕುರಿತು ಕಲಾವತಿ S.N ಸರ್ಕಾರದ ಉಪ ಕಾರ್ಯದರ್ಶಿ, ಕಂದಾಯ ಇಲಾಖೆ ಆದೇಶವನ್ನ ಹೊರಡಿಸಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ವಿವರಗಳನ್ನು ಸಲ್ಲಿಸುವ ಬಗ್ಗೆ ಎಂಬ ವಿಷಯವನ್ನು ಕೂಡ ಒಳಗೊಂಡಿದೆ ಅಂತಾನೆ ಹೇಳಬಹುದು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಂಜೂರಾದ ಹುದ್ದೆಗಳು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಗಳಿಗನುಗುಣವಾಗಿ ಖಾಲಿಯಿರುವ 1820 ಹುದ್ದೆಗಳ ಒಂದು ಸಾವಿರ ಹುದ್ದೆಗಳನ್ನು ನೇರವಾದ ನೇಮಕಾತಿಯಡಿ ಭರ್ತಿಮಾಡಿಕೊಳ್ಳಲು ಉದ್ದೇಶಿಸಲಾಗಿರುತ್ತದೆ ಎಂದು ಆದೇಶ ಹೊರಡಿಸಲಾಗಿದೆ.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿ ಇರುವಂತ ಗ್ರಾಮ ಆಡಳಿತಾಧಿಕಾರಿ(Grama Lekkiga) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ(Nemakati) ಮಾಡುವ ಸಂಬಂಧ ಆರ್ಥಿಕ (Financially) ಇಲಾಖೆಯು 2023-24, 2024-25 ಹಾಗೂ 2025-26ನೇ ಸಾಲಿಗೆ ವಾರ್ಷಿಕವಾಗಿ 500 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತ ನೀಡಿರುತ್ತದೆ ಎಂದು ಕೂಡ ಇದೀಗ ಹೇಳಿದ್ದಾರೆ.
ಯಾವ ಜಿಲ್ಲೆಗೆ ಎಷ್ಟು ಹುದ್ದೆ ನೇಮಕ ಮಾಡಲಾಗುತ್ತೆ?
ಆದೇಶದ ಪ್ರಕಾರ ಬೆಂಗಳೂರು ನಗರ 31 ಹುದ್ದೆಗಳು, ಬೆಂಗಳೂರು ಗ್ರಾಮಾಂತರ 34 ಹುದ್ದೆಗಳು, ಚಿತ್ರದುರ್ಗ 31 ಹುದ್ದೆಗಳು , ಕೋಲಾರ 43ಹುದ್ದೆಗಳು, ತುಮಕೂರು71 ಹುದ್ದೆಗಳು, ರಾಮನಗರ 51ಹುದ್ದೆಗಳು , ಚಿಕ್ಕಬಳ್ಳಾಪುರ 41 ಹುದ್ದೆಗಳು, ಶಿವಮೊಗ್ಗ 30 ಹುದ್ದೆಗಳು, ಮೈಸೂರು 62 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಚಾಮರಾಜನಗರ 54 ಹುದ್ದೆಗಳು, ಮಂಡ್ಯ 59 ಹುದ್ದೆಗಳು, ಹಾಸನ 53 ಹುದ್ದೆಗಳು, ಚಿಕ್ಕಮಗಳೂರು 23 ಹುದ್ದೆಗಳು, ಕೊಡಗು 6 ಹುದ್ದೆಗಳು, ಉಡುಪಿ 23ಹುದ್ದೆಗಳು, ದಕ್ಷಿಣ ಕನ್ನಡ 49ಹುದ್ದೆಗಳು, ಬೆಳಗಾವಿ 62 ಹುದ್ದೆಗಳು, ವಿಜಯಪುರ 7 ಹುದ್ದೆಗಳು, ಬಾಗಲಕೋಟೆ 25ಹುದ್ದೆಗಳು, ಧಾರವಾಡ 16 ಹುದ್ದೆಗಳು, ಗದಗ 30 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಹಾವೇರಿ 32 ಹುದ್ದೆಗಳು, ಉತ್ತರ ಕನ್ನಡ 8ಹುದ್ದೆಗಳು , ಕಲಬುರಗಿ 66ಹುದ್ದೆಗಳು , ರಾಯಚೂರು 8 ಹುದ್ದೆಗಳು, ಕೊಪ್ಪಳ 19 ಹುದ್ದೆಗಳು, ಬಳ್ಳಾರಿ 19 ಹುದ್ದೆಗಳು, ಬೀದರ್ 24 ಹುದ್ದೆಗಳು, ಯಾದಗಿರಿ 10 ಹುದ್ದೆಗಳು, ವಿಜಯನಗರ 13 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಇದೀಗ ಎಲ್ಲಾ ಸೇರಿ ಮಂಜೂರಾದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು 9837 ಹುದ್ದೆಗಳು, ಭರ್ತಿಯಾಗಿರುವ ಹುದ್ದೆಗಳು 8017ಹುದ್ದೆಗಳು , ಖಾಲಿ ಇರುವ ಹುದ್ದೆಗಳು 1820 ಹುದ್ದೆಗಳು ಮತ್ತು ಸದ್ಯ ಭರ್ತಿ ಮಾಡಲು ಒಪ್ಪಿಗೆ ನೀಡಿರುವ ಹುದ್ದೆಗಳು 1000ಹುದ್ದೆಗಳು .