ವಾಹನ ಖರೀದಿಸಲು 4 ಲಕ್ಷದವರೆಗೆ ಸರ್ಕಾರದಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ; Swavalambi Sarathi Yojane

Swavalambi Sarathi Yojane

ವಾಹನ ಖರೀದಿಸಲು 4 ಲಕ್ಷದವರೆಗೆ ಸರ್ಕಾರದಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ; Swavalambi Sarathi Yojane

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೆಂದರೆ, ಸ್ವಾವಲಂಬಿ ಸಾರಥಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿ ವಾಹನ ಖರೀದಿಸಲು ಸಬ್ಸಿಡಿಯ ಹಣವನ್ನು ಸರ್ಕಾರದಿಂದ ಯಾವ ರೀತಿ ಪಡೆದುಕೊಳ್ಳಬೇಕು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಯಾವೆಲ್ಲ ಲಾಭಗಳು ದೊರಕಲಿವೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದಲ್ಲಿ ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

ಇದನ್ನೂ ಓದಿ: ಇಲ್ಲಿ ಪಡೆಯಿರಿ 40,000 ದವರೆಗೆ ವೈಯಕ್ತಿಕ ಸಾಲ! ಅದು ಕೂಡ ಕೆಲವೇ ನಿಮಿಷದಲ್ಲಿ|Axis Bank Digital Personal Loan

ಸ್ವಾವಲಂಬಿ ಸಾರಥಿ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಮತ್ತು ಎಷ್ಟರವರೆಗೆ ಸಹಾಯವನ್ನು ಸಿಗಲಿದೆ? ಎಂಬುದರ ಸಂಪೂರ್ಣವಾದ ಮಾಹಿತಿ ಈ ಕೆಳಗ ನಿಮಗೆ ನೀಡಲಾಗಿದೆ ನೋಡಿ.

ಸ್ವಾವಲಂಬಿ ಸಾರಥಿ ಯೋಜನೆ: (Swavalambi Sarathi Yojane)

ಈ ಯೋಜನೆಯ ಹೆಸರು “ಸ್ವಾವಲಂಬಿ ಸಾರಥಿ ಯೋಜನೆ”, ಈ ಯೋಜನೆಗೆ ಅರ್ಜಿ ಸಲ್ಲಿಸಿ ದಲ್ಲಿ ವಾಹನ ಖರೀದಿಗೆ 75% ನಷ್ಟು ಅಂದರೆ 4 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ 21 ವರ್ಷ ಮೇಲ್ಪಟ್ಟು 45 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: 

  • ಆಧಾರ್ ಕಾರ್ಡ್ 
  • ಪಾಸ್ಪೋರ್ಟ್ ಅಳತಿಯ ಭಾವಚಿತ್ರ 
  • ರೇಷನ್ ಕಾರ್ಡ್ 
  • ಆದಾಯ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ 
  • ಜಾತಿ ಪ್ರಮಾಣ ಪತ್ರ 
  • ಡ್ರೈವಿಂಗ್ ಲೈಸೆನ್ಸ್ 

ಅರ್ಜಿ ಸಲ್ಲಿಸಲು ಅರ್ಹತೆಗಳು: 

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿರುವ ಜನರ ಆದಾಯ 90,000 ಇರಬೇಕು ಹಾಗೂ ನಗರ ಪ್ರದೇಶದಲ್ಲಿ ವಾಸಿಸುವಂತಹ ಜನರ ವಾರ್ಷಿಕ ಆದಾಯ 1.20 ಲಕ್ಷ ಇರಬೇಕು ಎಂದು ತಿಳಿಸಲಾಗಿದೆ.
  • ವಾಹನ ಚಾಲನಾ ಪರವಾನಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು. 
  • ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ಯಾವುದೇ ಯೋಜನೆಗಳಿಂದ ಸಹಾಯಧನವನ್ನು ಪಡೆದಿರಬಾರದು. 
  • ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿರುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ? (Swavalambi Sarathi Yojane)

ನೀವೇನಾದರೂ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಮೇಲೆ ಸಂಪೂರ್ಣವಾದ ವಿವರವನ್ನು ನೀಡಲಾಗಿರುತ್ತದೆ. ಅದನ್ನು ಬಳಸಿಕೊಂಡು ನೀವು ನಿಮ್ಮ ಹತ್ತಿರ ಇರುವ ಆನ್ಲೈನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಕೊನೆಯ ದಿನಾಂಕ 23.11.2024 ಆಗಿರುತ್ತದೆ. ಅದರ ಒಳಗಾಗಿ ನೀವು ನಿಮ್ಮ ಹತ್ತಿರ ಇರುವ ನಾಗರಿಕ ಸೇವ ಕೇಂದ್ರ ಅಥವಾ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿ ವಾಹನ ಖರೀದಿಗೆ ಸಹಾಯಧನವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಬಿಗ್ ಶಾಕ್! 22 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು? Ration Card Cancellation

WhatsApp Group Join Now
Telegram Group Join Now

Leave a Reply

Your email address will not be published. Required fields are marked *