ನಮಸ್ಕಾರ ಸ್ನೇಹಿತರೆ… ಪ್ರತಿದಿನವೂ ಕೂಡ ಬೇರೆ ರೀತಿಯ ಯೋಜನೆಗಳು ಕೂಡ ಮಹಿಳೆಯರಿಗಾಗಿಯೇ ಜಾರಿಯಾಗುತ್ತಿದೆ. ಅದೇ ರೀತಿ ಈಗಾಗಲೇ ಜಾರಿಯಾಗಿರುವಂತಹ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈ ಯೋಜನೆ ಮುಖಾಂತರ ಬರೋಬ್ಬರಿ 3 ಲಕ್ಷ ಹಣವನ್ನು ಕೂಡ ಮಹಿಳಾ ಅಭ್ಯರ್ಥಿಗಳು ಪಡೆಯಬಹುದು. ಈ ಯೋಜನೆಯ ಹೆಸರು ಎಂಪ್ಲಾಯಿ ಸ್ಕೀಮ್ ಎಂದು, ಈ ಯೋಜನೆ ಮುಖಾಂತರ ಎಲ್ಲಾ ಸಾಮಾನ್ಯ ಮಹಿಳೆಯರು ಕೂಡ ಹಣವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿರಿ.
ಎಂಪ್ಲಾಯಿ ಸ್ಕೀಮ್ ಯೋಜನೆಯ ಮಾಹಿತಿ !
ಈ ಒಂದು ಯೋಜನೆಯು ಮಹಿಳೆಯರಿಗೆ ಮಾತ್ರ ಮೂರು ಲಕ್ಷದವರೆಗೂ ಬಡ್ಡಿ ರಹಿತ ಸಾಲವನ್ನು ಕೂಡ ನೀಡುತ್ತದೆ. ಈ ಬಡ್ಡಿ ರಹಿತ ಸಾಲದಲ್ಲಿ ಸಬ್ಸಿಡಿ ಹಣವನ್ನು ಕೂಡ ವಿತರಣೆ ಮಾಡುತ್ತದೆ. ನೀವೇನಾದರೂ ಎಸ್ಸಿ ಎಸ್ಟಿ ವರ್ಗದ ಮಹಿಳಾ ಅಭ್ಯರ್ಥಿಗಳಾಗಿದ್ದರೆ, ನಿಮಗೆ ಮೂರು ಲಕ್ಷ ಹಣ ಕೂಡ ಸಾಲವಾಗಿ ದೊರೆಯುತ್ತದೆ. ಈ ಮೂರು ಲಕ್ಷ ಹಣದಲ್ಲಿ ಅರ್ಧದಷ್ಟು ಸರ್ಕಾರವೇ ಭಭರಿಸುತ್ತದೆ.
ಅಂದರೆ ನೀವು 1.5 ಲಕ್ಷ ಹಣವನ್ನು ಮಾತ್ರ ಮರುಪಾವತಿಸಬೇಕಾಗುತ್ತದೆ. ಆದರೆ ನಿಮಗೆ ಮುಂಚಿತ ದಿನಗಳಲ್ಲಿ ಮೂರು ಲಕ್ಷ ಹಣವನ್ನು ಕೂಡ ನೀಡಲಾಗುತ್ತದೆ. ನೀವೇನಾದರೂ ಬೇರೆಯವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ, ಸರ್ಕಾರವು 30ರಷ್ಟು ಮಾತ್ರ ಸಬ್ಸಿಡಿ ಹಣವನ್ನು ನೀಡುತ್ತದೆ, ಇನ್ನು ಉಳಿದ 70ರಷ್ಟು ಹಣವನ್ನು ನೀವೇ ಪಾವತಿಸಬೇಕಾಗುತ್ತದೆ.
ಯಾವ ರೀತಿ ಎಂದರೆ, ಸರ್ಕಾರವು ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ 90 ಸಾವಿರ ಹಣವನ್ನು ಸಬ್ಸಿಡಿಯಾಗಿ ನೀಡುತ್ತದೆ. ಈ ಒಂದು ಹಣವನ್ನು ನೀವು ಮತ್ತೆ ಮರುಪಾವತಿ ಮಾಡುವ ಹಾಗಿಲ್ಲ, ಹಾಗೂ ಇದು ಉಚಿತವಾಗಿಯೇ ಸರ್ಕಾರದಿಂದ ನಿಮಗೆ ತಲುಪುತ್ತದೆ. ಇನ್ನು ಉಳಿದಂತಹ 2,10,000 ಹಣವನ್ನು ಮಾತ್ರ ಮತ್ತೆ ಮರುಪಾವತಿ ಮಾಡಬೇಕಾಗುತ್ತದೆ. ನಿಮಗೂ ಕೂಡ ಒಟ್ಟು ಮೂರು ಲಕ್ಷ ಹಣವನ್ನು ಸಾಲವಾಗಿ ನೀಡುತ್ತದೆ. ಆದರೆ ನೀವು ಮತ್ತೆ ಮರುಪಾವತಿ ಮಾಡುವಂತಹ ಮೊತ್ತ 2,10,000.
ಈ ಒಂದು ಹಣವನ್ನು ನೀವು ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಈಗಾಗಲೇ ಇರುವಂತಹ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಮಾತ್ರ ಈ ಹಣವನ್ನು ಪಡೆಯಬಹುದು. ಮಹಿಳೆಯರಿಗೆ ಮಾತ್ರ ಈ ಯೋಜನೆ ಕಡೆಯಿಂದ ಹಣ ದೊರೆಯುತ್ತಿರುವುದು. ಸರ್ಕಾರವು ಕೂಡ ಈಗಾಗಲೇ ಈ ಯೋಜನೆಯ ನಿಯಮವನ್ನು ಕೂಡ ಹೊರಡಿಸಿದೆ. ಯಾರೆಲ್ಲ ಎರಡು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದಾರೋ, ಅಂತವರು ಮಾತ್ರ ಅರ್ಜಿ ಸಲ್ಲಿಸಬಹುದು.
ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪ್ರತಿ ವರ್ಷವೂ ಕೂಡ ಆದಾಯವಾಗಿ ಪಡೆಯುತ್ತಿರುವಂತಹ ಮಹಿಳಾ ಅಭ್ಯರ್ಥಿಗಳ ಕುಟುಂಬವು ಯಾವುದೇ ಕಾರಣಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ. ಮತ್ತು ಒಂಟಿ ಮಹಿಳೆ ಹಾಗೂ ಅಂಗವಿಕಲತೆ ಹೊಂದಿದಂತಹ ಮಹಿಳೆ ಕೂಡ ಯಾವುದೇ ರೀತಿಯ ಆದಾಯ ನಿಯಮವು ಕೂಡ ಅವರಿಗೆ ಅನ್ವಯವಾಗುವುದಿಲ್ಲ. ಅವರ ಆದಾಯವು ಎಷ್ಟು ಲಕ್ಷವಾಗಿದ್ದರೂ ಆಗಲಿ, ಅವರಿಗೆ ಮಾತ್ರ ಹಣವನ್ನು ಯಾವುದೇ ಶರತುಗಳು ಇಲ್ಲದೆ ನೀಡಲಾಗುತ್ತದೆ.
ನಿಮಗೆ ತರಬೇತಿ ಬೇಕಾದಲ್ಲಿ ತರಬೇತಿಯನ್ನು ಕೂಡ ಸರ್ಕಾರ ನೀಡುತ್ತದೆ, ಟೀ ಸ್ಟಾಲ್ ಇನ್ನಿತರ ಮಹಿಳೆಯರಿಗೆ ಅನ್ವಯಿಸುವಂತಹ ವ್ಯಾಪಾರವನ್ನು ಪ್ರಾರಂಭಿಸಬೇಕು ಎಂದುಕೊಂಡಿರುವ ಅಂತಹ ಮಹಿಳೆಯರಿಗೆ ಮಾತ್ರ ಈ ಯೋಜನೆ ಮುಖಾಂತರ ಸಬ್ಸಿಡಿ ಹಣ ಹಾಗೂ ಸಾಲದ ಹಣ ಕೂಡ ದೊರೆಯುತ್ತದೆ.
ಈ ಯೋಜನೆಯ ಮೊದಲ ಆದ್ಯತೆಯನ್ನು ಪಡೆಯುವಂತವರು ಹಳ್ಳಿಯಲ್ಲಿ ವಾಸ ಮಾಡುತ್ತಿರುವಂತಹ ರೈತ ಕುಟುಂಬದ ಮಹಿಳಾ ಅಭ್ಯರ್ಥಿಗಳು ಕೂಡ ಮೊದಲನೆಯ ಆದ್ಯತೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ನಗರ ಪ್ರದೇಶದಲ್ಲಿ ಇರುವಂತಹ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. 18 ರಿಂದ 55 ವರ್ಷದೊಳಗಿನ ಎಲ್ಲಾ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಮಹಿಳಾ ಅಭ್ಯರ್ಥಿಗಳಿಗೆ ಈ ದಾಖಲಾತಿಗಳು ಕಡ್ಡಾಯ.
- ಮಹಿಳಾ ಅಭ್ಯರ್ಥಿಯ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬಿಪಿಎಲ್ ರೇಷನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಜನ್ಮ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಬ್ಯಾಂಕ್ ಖಾತೆ ಮಾಹಿತಿ
ಈ ರೀತಿ ಅರ್ಜಿ ಸಲ್ಲಿಕೆ ಮಾಡಿ.
ಯಾರೆಲ್ಲಾ ಈ ಯೋಜನೆ ಮುಖಾಂತರ ಹಣವನ್ನು ಪಡೆಯಲು ಬಯಸುತ್ತಿದ್ದೀರೋ, ಅಂತವರು ನಿಮ್ಮ ಹತ್ತಿರದ ಖಾಸಗಿ ವಲಯಗಳ ಬ್ಯಾಂಕ್ ಗಳಿಗೂ ಕೂಡ ಭೇಟಿ ನೀಡಿ. ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಕೆ ಕೂಡ ಮಾಡಬಹುದು. ವಾಣಿಜ್ಯ ಬ್ಯಾಂಕುಗಳಲ್ಲೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇನ್ನು ಆನ್ಲೈನ್ ಮುಖಾಂತರವೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಆದರೂ ಕೂಡ ನೀವು ನಿಮ್ಮ ಹತ್ತಿರದ ಬ್ಯಾಂಕುಗಳಿಗೆ ಭೇಟಿ ನೀಡಿ ಸಾಲವನ್ನು ಪಡೆಯುವುದು ಉತ್ತಮ ಏಕೆಂದರೆ ಅಲ್ಲಿ ಏಕಕಾಲಕ್ಕೆ ಹಣವನ್ನು ನೀಡಲಾಗುತ್ತದೆ. ಆದರೆ ಇಲ್ಲಿ ಆನ್ಲೈನ್ ಗಳ ಮುಖಾಂತರ ಸಮಸ್ಯೆಗಳು ಕೂಡ ಹಲವಾರು ಇದ್ದೇ ಇರುತ್ತದೆ. ಆದ್ದರಿಂದ ಎಲ್ಲರೂ ಕೂಡ ನಿಮ್ಮ ಹತ್ತಿರದ ಬ್ಯಾಂಕುಗಳಲ್ಲಿಯೇ ಸಾಲವನ್ನು ಪಡೆಯಲು ಮುಂದಾಗಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….