ಕೇಂದ್ರದಿಂದ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಗ್ಯಾಸ್ ಸೌಲಭ್ಯ ! ಸಿಲಿಂಡರ್ ಜೊತೆಗೆ ಉಚಿತ ಸ್ಟವ್ ಕೂಡ ಸಿಗಲಿದೆ. ಈ ರೀತಿ ಅರ್ಜಿ ಸಲ್ಲಿಕೆ ಮಾಡಿ.

ನಮಸ್ಕಾರ ಸ್ನೇಹಿತರೆ… ಇವತ್ತಿನ ಈ ಒಂದು ಲೇಖನದ ಮುಖಾಂತರ ಮಹಿಳೆಯರಿಗಾಗಿ ಸರ್ಕಾರದಿಂದ ಉಚಿತವಾದ ಗ್ಯಾಸ್ ಸೌಲಭ್ಯ ದೊರೆಯುತ್ತಿದೆ. ಆ ಯೋಜನೆಯ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ಲೇಖನವನ್ನು ಕೊನೆಯವರೆಗೂ ಓದುವ ಮುಖಾಂತರ ನೀವು ಕೂಡ ಉಚಿತ ಗ್ಯಾಸ್ ಸೌಲಭ್ಯವನ್ನು ಪಡೆದುಕೊಳ್ಳಿರಿ. ಕೇಂದ್ರ ಸರ್ಕಾರದಿಂದಲೇ ಬಿಪಿಎಲ್ ಕಾರ್ಡ್ ಹೊಂದಿದಂತಹ ಎಲ್ಲಾ ಸಾಮಾನ್ಯ ಜನರಿಗೂ ಹಾಗೂ ಬಡ ಕುಟುಂಬದ ಅಭ್ಯರ್ಥಿಗಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲು ಮುಂದಾಗಿದೆ.ಈ ಯೋಜನೆಯ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 ಹಲವಾರು ವರ್ಷಗಳಿಂದಲೂ ಕೂಡ ಸಾಕಷ್ಟು ಕೋಟ್ಯಾಂತರ ಕುಟುಂಬಗಳು ಈ ಒಂದು ಸಂಪರ್ಕವನ್ನು ಈವರೆಗೂ ಪಡೆದುಕೊಂಡಿದ್ದಾರೆ. ನಿಮಗೂ ಕೂಡ ಅವರಂತೆ ಉಚಿತ ಸಂಪರ್ಕಗಳು ಬೇಕು ಎಂದರೆ, ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. 

ಈ ವರ್ಷದ ಬಜೆಟ್ ಮಂಡನೆಯ ಮಾಹಿತಿ !

ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ರವರು ಈ ವರ್ಷದಂದು ಉಜ್ವಲ ಯೋಜನೆ ಮುಖಾಂತರ ಒಂದು ಕೋಟಿಗೂ ಅಧಿಕವಾದ ಸಾಮಾನ್ಯ ಜನರಿಗೆ ಗ್ಯಾಸ್ ಸಂಪರ್ಕವನ್ನು ನೀಡಬೇಕು ಎಂದು ಘೋಷಿಸಿದ್ದಾರೆ. ಹಾಗೂ ಕಳೆದ ನಾಲ್ಕು ವರ್ಷದಲ್ಲಿ ಎಂಟು ಕೋಟಿಗೂ ಅಧಿಕವಾದ ಬಿಪಿಎಲ್ ಕಾರ್ಡ್ದಾರರಿಗೆ ಗ್ಯಾಸ್ ಸಂಪರ್ಕವನ್ನು ಒದಗಿಸಿದ್ದೇವೆ ಎಂಬ ಮಾಹಿತಿಯನ್ನು ಕೂಡ ಸ್ಪಷ್ಟಪಡಿಸಿದ್ದಾರೆ.

ಹಾಗೂ ಇಲ್ಲಿಯವರೆಗೂ ಉಜ್ವಲ ಯೋಜನೆ ಮುಖಾಂತರ ಸಂಪರ್ಕವನ್ನು ಹೊಂದಿದಂತಹ ಅಭ್ಯರ್ಥಿಗಳ ಸಂಖ್ಯೆ 29 ಕೋಟಿ. ಈ 2024ನೇ ಸಾಲಿನಲ್ಲಿ ಒಂದು ಕೋಟಿ ಜನರಿಗೆ ಮಾತ್ರ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ. ನೀವು ಕೂಡ ಇನ್ನೂ ಯಾವುದೇ ರೀತಿಯ ಉಚಿತ ಗ್ಯಾಸ್ ಗಳನ್ನು ಪಡೆದಿಲ್ಲ ಈವರೆಗೂ ಎನ್ನುವವರು ಅರ್ಜಿಯನ್ನು ಈ ಮಾಹಿತಿಯಂತೆ ಸಲ್ಲಿಸಬಹುದು.

ಇದನ್ನು ಓದಿ :- 121 ರೂ ಹಣವನ್ನು ಹೂಡಿಕೆ ಮಾಡುವ ಮೂಲಕ 27 ಲಕ್ಷ ಹಣವನ್ನು ಈ ಯೋಜನೆ ಮುಖಾಂತರ ಪಡೆಯಿರಿ.

ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಗ್ಯಾಸ್ ಸೌಲಭ್ಯ !

ಮಹಿಳೆಯರ ಹೆಸರಿನಲ್ಲಿ ಈ ಬಿಪಿಎಲ್ ಕಾರ್ಡ್ಗಳನ್ನು ನೀಡಿ ಉಜ್ವಲ ಯೋಜನೆಗೆ ನೋಂದವಣಿ ಆಗುವ ಮುಖಾಂತರ ಉಚಿತ ಗ್ಯಾಸ್ ಗಳನ್ನು ಕೂಡ ಪಡೆಯಬಹುದು. ಹಾಗೂ ಗ್ಯಾಸ್ಗಳ ಜೊತೆ ಸ್ಟವ್ ಕೂಡ ಉಚಿತವಾಗಿ ದೊರೆಯುತ್ತದೆ. ಆ ಒಂದು ಸ್ಟವ್ಗಳನ್ನು ಕೂಡ ಪಡೆದು ನೀವು ನಿಮ್ಮ ದಿನನಿತ್ಯದ ಅಡುಗೆ ಅನಿಲವಾಗಿ ಬಳಕೆ ಮಾಡಬಹುದಾಗಿದೆ. ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಸರ್ಕಾರದಿಂದ ಸಾಕಷ್ಟು ಯೋಜನೆ ಕಡೆಯಿಂದ ಪ್ರಯೋಜನಗಳು ಆಗುತ್ತಿದೆ.

ಹಾಗೂ ಈ ಒಂದು ಯೋಜನೆ ಮುಖಾಂತರವೂ ಕೂಡ ಸಾಕಷ್ಟು ಕೋಟ್ಯಂತರ ಫಲಾನುಭವಿಗಳಿಗೆ ಪ್ರಯೋಜನಕಾರಿಯಾಗಿದೆ. ಈ ಒಂದು ಯೋಜನೆ ಮುಖಾಂತರ ಸಿಗುವಂತಹ ಗ್ಯಾಸ್ ಗಳಿಂದಲೇ ಎಲ್ಲಾ ಬಿಪಿಎಲ್ ಕಾರ್ಡ್ದಾರರು ತಮ್ಮ ಮನೆಗಳಲ್ಲಿ ದಿನನಿತ್ಯ ಜೀವನದ ಅಡುಗೆಗಳನ್ನು ಕೂಡ ಮಾಡಿ ಉಪಹಾರವನ್ನು ಸೇವಿಸುತ್ತಿದ್ದಾರೆ.

ಉಜ್ವಲ ಯೋಜನೆಗೆ ಬೇಕಾಗುವಂತಹ ಅರ್ಹತೆಗಳೇನಿರಬೇಕಾಗುತ್ತದೆ ಹಾಗೂ ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾ ಪುರುಷರು ಸಲ್ಲಿಸುವಂತಿಲ್ಲವೇ ಎಂಬುದರ ಎಲ್ಲಾ ನಿಮ್ಮ ಪ್ರಶ್ನೆಗೆ ಈ ಮಾಹಿತಿಯಲ್ಲಿ ಉತ್ತರ ಸಿಗುತ್ತದೆ. ನೀವು ಗಮನದಲ್ಲಿಟ್ಟುಕೊಂಡು ಸಂಪೂರ್ಣವಾದ ಮಾಹಿತಿಯನ್ನು ತಿಳಿದು, ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಉಜ್ವಲ ಯೋಜನೆಗೂ ಕೂಡ ಆನ್ಲೈನ್ ನಲ್ಲಿ ಸಲ್ಲಿಕೆ ಮಾಡಬಹುದು ಅರ್ಜಿಯನ್ನು, ಯಾರು ಕೂಡ ಆಫ್ಲೈನ್ ಮುಖಾಂತರವೂ ಸಲ್ಲಿಕೆ ಮಾಡಲು ಸಾಕಷ್ಟು ಜನ ಮುಂದಾಗುವುದಿಲ್ಲ. ಅಂತವರಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ ಹಾಗೂ ಆಫ್ಲೈನ್ ಮುಖಾಂತರವೂ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

ಮಹಿಳಾ ಅಭ್ಯರ್ಥಿಗಳಿಗೆ ಇರಬೇಕಾದಂತಹ ಅರ್ಹತೆಗಳು :-
  • ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರತಕ್ಕದ್ದು.
  • ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  • ಬ್ಯಾಂಕ್ ಖಾತೆ ಕೂಡ ಹೊಂದಿರತಕ್ಕದ್ದು.
  • 18 ವರ್ಷ ಮೇಲ್ಪಟ್ಟ ವಯೋಮಿತಿಯನ್ನು ಮಹಿಳಾ ಅಭ್ಯರ್ಥಿಗಳು ಹೊಂದಿರತಕ್ಕದ್ದು.
  • ಬಡತನ ರೇಖೆಗಿಂತ ಕೆಳಗಿರುವಂತಹ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  • ಭಾರತದಲ್ಲಿರುವವರಿಗೆ ಮಾತ್ರ ಈ ಯೋಜನೆ ಸೌಲಭ್ಯ ದೊರೆಯುವುದು.
  • ಇದುವರೆಗೂ ಈ ಮಹಿಳಾ ಅಭ್ಯರ್ಥಿಗಳು ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಹೊಂದಿರಬಾರದು.
ಉಜ್ವಲ ಯೋಜನೆಗೆ ಬೇಕಾಗುವಂತಹ ದಾಖಲಾತಿಗಳು.
  • ಮಹಿಳಾ ಅಭ್ಯರ್ಥಿಗಳ ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಬಿಪಿಎಲ್ ರೇಷನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಮಹಿಳಾ ಅಭ್ಯರ್ಥಿಯ ಭಾವಚಿತ್ರ

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆಯ ಮಾಹಿತಿ.

ಉಜ್ವಲ ಯೋಜನೆ ಮುಖಾಂತರ ಉಚಿತವಾದ ಗ್ಯಾಸ್ ಸಂಪರ್ಕವನ್ನು ಪಡೆಯಬೇಕು ಎಂದುಕೊಂಡಿದ್ದವರು ಈ ಒಂದು ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಭೇಟಿ ನೀಡಲು ಈ ಒಂದು http://www.pmuy.gov ಲಿಂಕನ್ನು ಕ್ಲಿಕ್ಕಿಸಿದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಆ ಒಂದು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಡೌನ್ಲೋಡ್ ಮಾಡಿರುವಂತಹ ಅರ್ಜಿ ನಮೂನೆಯನ್ನು ಈ ಮೇಲ್ಕಂಡ ದಾಖಲಾತಿಗಳೊಂದಿಗೆ ಭರ್ತಿ ಮಾಡತಕ್ಕದ್ದು, ಭರ್ತಿ ಮಾಡಿದ ಬಳಿಕ ಅರ್ಜಿ ನಮೂನೆಯನ್ನು ಸಲ್ಲಿಕೆ ಮಾಡಿರಿ.

ಆ ಒಂದು ಅರ್ಜಿ ನಮೂನೆಯನ್ನು ನಿಮ್ಮ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಎಲ್ ಪಿ ಜಿ ಗ್ಯಾಸ್ ಸಂಪರ್ಕದ ಏಜೆನ್ಸಿಗಳನ್ನು ಭೇಟಿ ನೀಡಿ ಆ ಏಜೆನ್ಸಿಗಳಿಗೆ ಈ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿರುವಂತಹ ಅರ್ಜಿ ನಮೂನೆಯನ್ನು ಕೂಡ ನೀಡಬೇಕು. ನಿಮ್ಮ ದಾಖಲಾತಿಗಳನ್ನೆಲ್ಲ ಪರಿಶೀಲನೆ ಮಾಡಿ ನಿಮಗೆ ಮುಂದಿನ ದಿನಗಳಲ್ಲಿ ಉಚಿತವಾದ ಗ್ಯಾಸ್ ಸೌಲಭ್ಯವನ್ನು ನೀಡುತ್ತಾರೆ. ಹಾಗೂ ಉಚಿತವಾದ ಗ್ಯಾಸ್ ಸ್ಟವ್‌ಗಳನ್ನು ಕೂಡ ಒದಗಿಸುತ್ತಾರೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *