Vidyasiri Scholarship Online Apply 2024: ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಇದನ್ನ ನಿರ್ವಹಿಸುತ್ತದೆ.
ಕರ್ನಾಟಕ ಸರ್ಕಾರವು ವಿದ್ಯುನ್ಮಾನ ಪಾವತಿ ಮತ್ತು ವಿದ್ಯಾರ್ಥಿವೇತನದ ಅರ್ಜಿ ವ್ಯವಸ್ಥೆಯ ಮೂಲಕ ವಿದ್ಯಾರ್ಥಿವೇತನವನ್ನು ನೀಡಲು ಇದೀಗ ಹೊರಟಿದೆ, ಇದು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿವೇತನವನ್ನು ಯಾವುದೇ ತೊಂದರೆಯಿಲ್ಲದೆ ಪಡೆಯಲು ಸಹಾಯವನ್ನಾ ಮಾಡುತ್ತದೆ ಎಂದೇ ಹೇಳಬಹುದು.
ಈ ಸ್ಕಾಲರ್ಶಿಪ್ ಯೋಜನೆಯ ಮೂಲಕ, ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಕೋರ್ಸ್‌ಗಳಿಗೆ ಉಚಿತ ಹಾಸ್ಟೆಲ್ ವಸತಿ/ಶುಲ್ಕ, SSLC/ದ್ವಿತೀಯ ಪಿಯುಸಿಗೆ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನ ಮತ್ತು PMS FAAS, FC ಮತ್ತು NUR ಗಾಗಿ ಸಂಪೂರ್ಣ ಕೋರ್ಸ್ ಶುಲ್ಕ ರಿಯಾಯಿತಿಯನ್ನು ಕೂಡ ಒದಗಿಸಲಾಗುತ್ತದೆ.
ಈ ಯೋಜನೆಯ ಅನುಷ್ಠಾನದಿಂದ, ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುವ ವಿದ್ಯಾರ್ಥಿವೇತನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.
ಈ ಸ್ಕಾಲರ್ಶಿಪ್ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಲಾಗಿದೆ.
ಈ ಸ್ಕಾಲರ್ಶಿಪ್ ಯೋಜನೆಯಲ್ಲಿ ವಿದ್ಯಾರ್ಥಿಗೆ ಪ್ರತಿ ತಿಂಗಳು 1,500 ರೂಪಾಯಿಗಳು 10 ತಿಂಗಳ ತನಕ ಅಂದರೆ ಶೈಕ್ಷಣಿಕವಾಗಿ ಹತ್ತು ತಿಂಗಳ ತನಕ ವಿದ್ಯಾರ್ಥಿಯ ಖಾತೆಗೆ ಜಮಾ ಆಗುತ್ತದೆ. ಅಂದರೆ ಒಂದು ವರ್ಷಕ್ಕೆ 15000 ವಿದ್ಯಾರ್ಥಿಯ ಖಾತೆಗೆ ಜಮಾ ಆಗುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15/02/2004
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
https://ssp.postmatric.karnataka.gov.in/
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?
- ಆಧಾರ್ ಕಾರ್ಡ್(Adhar Card)
- ಮೊಬೈಲ್ ನಂಬರ್(Mobile Number)
- ಇಮೇಲ್ ಐಡಿ(e.mail)
- SSLC ನೋಂದಣಿ ಸಂಖ್ಯೆ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ವಿಳಾಸ
- ವಿದ್ಯಾರ್ಥಿಯ ಕಾಲೇಜ್ ನೋಂದಣಿ ಸಂಖ್ಯೆ
- ಹಾಸ್ಟೆಲ್ ವಿವರಗಳು ಕೂಡ ಬೇಕು
ಈ ಎಲ್ಲಾ ಮೇಲಿನ ದಾಖಲೆಗಳನ್ನು ನೀವು ಸರಿಪಡಿಸಿಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ತೆರಳಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಸಹಾಯವಾಣಿ – 8050770005