SSLC ಶಿಕ್ಷಣ ಮುಗಿದ ಬಳಿಕ ಮುಂದೇನು ? ಅಧಿಕವಾದ ವೇತನವನ್ನೇ ಪಡೆಯಲು ಈ ಬೆಸ್ಟ್ ಕೋರ್ಸ್ ಉತ್ತಮ.

ನಮಸ್ಕಾರ ಸ್ನೇಹಿತರೆ…. ಇವತ್ತಿನ ಈ ಒಂದು ಲೇಖನದ 0 ಮುಖಾಂತರ SSLC ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಆಯ್ಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿಸುತ್ತಿದ್ದೇನೆ. ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ, ನೀವು ಕೂಡ ಈ ಬೆಸ್ಟ್ ಕೋರ್ಸ್ ಗಳ ಬಗ್ಗೆ ತಿಳಿದುಕೊಳ್ಳಬಹುದು. ಈಗಾಗಲೇ ನೀವು ಕೂಡ SSLC ಪರೀಕ್ಷೆಯನ್ನು ಕೂಡ ಬರೆದಿದ್ದೀರಿ, ಇನ್ನು ಫಲಿತಾಂಶ ಬರುವುದು ಮಾತ್ರ ಬಾಕಿ ಇದೆ. ಅಲ್ಲಿಯವರೆಗೂ ಎಲ್ಲರಿಗೂ ಮೂಡುವಂತಹ ಪ್ರಶ್ನೆ ಏನೆಂದರೆ, What’s Next ಎಂಬುದು ಅಂದರೆ, ಇಲ್ಲಿಯವರೆಗೂ SSLC ಹಾಗೂ ಪಿಯುಸಿ ಶಿಕ್ಷಣವನ್ನು ತೆಗೆದುಕೊಂಡು ಓದಿದ್ದೀರಿ,

ಆದರೆ ಮುಂದಿನ ಶಿಕ್ಷಣವನ್ನು ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಿ ಉತ್ತಮವಾಗಿರುವಂತಹ ಉದ್ಯೋಗವನ್ನು ಪಡೆಯಬಹುದು ಎಂಬ ಮುಂದಾಲೋಚನೆ ನಿಮ್ಮದು. ಯಾವ ಶಿಕ್ಷಣಕ್ಕೆ ಯಾವ ಉದ್ಯೋಗ ದೊರೆಯುತ್ತದೆ ಎಂಬುದರ ವಿವರವನ್ನು ಸಂಪೂರ್ಣವಾಗಿ ನೋಡಲು, ನೀವು ಈ ಲೇಖನವನ್ನು ಕೊನೆವರೆಗೂ ಓದಲೇಬೇಕು. ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬದ ಸದಸ್ಯರು ಇದೇ ರೀತಿಯ ಶಿಕ್ಷಣವನ್ನು ಓದುತ್ತಿದ್ದಾರೆ ಎಂದರೆ, ಈ ಒಂದು ಲೇಖನವನ್ನು ಅವರಿಗೂ ಕೂಡ ಶೇರ್ ಮಾಡಿರಿ. ಅವರಿಗೂ ಕೂಡ ಈ ಒಂದು ಲೇಖನ ಉಪಯುಕ್ತವಾಗುತ್ತದೆ.

10ನೇ ತರಗತಿಯಲ್ಲಿ ಪ್ರಸ್ತುತವಾಗಿ ಓದಿ ಪರೀಕ್ಷೆಯನ್ನು ಕೂಡ ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವಂತಹ, ವಿದ್ಯಾರ್ಥಿಗಳ ಪೋಷಕರು ಕೂಡ ಈ ಒಂದು ಕೋರ್ಸ್ಗಳ ಬಗ್ಗೆಯೆ ಚಿಂತೆ ಮಾಡುತ್ತಿರುತ್ತಾರೆ. ಅಂತಹ ಪೋಷಕರಿಗೆ ಇಲ್ಲಿದೆ ನೋಡಿ ಉತ್ತಮವಾದ ಕೋರ್ಸ್ಗಳ ಸಂಪೂರ್ಣವಾದ ವಿವರ.

ವಿದ್ಯಾರ್ಥಿಗಳೇ ನೀವೇ ನಿಮ್ಮ ಮುಂದಿನ ಭವಿಷ್ಯದ ಕೋರ್ಸ್ ಗಳನ್ನು ಆಯ್ಕೆ ಮಾಡಲು ಮುಂದಾಗುತ್ತೀರಿ ಎಂದರೆ, ಎಚ್ಚರಿಕೆಯಿಂದ ಒಂದು ಬಾರಿ ಎಲ್ಲಾ ರೀತಿಯ ಆಲೋಚನೆ ಹಾಗೂ ವಿವರಣೆಯೊಂದಿಗೆ ನೀವು ಯೋಚನೆ ಮಾಡಬೇಕಾಗುತ್ತದೆ. ನಿಮ್ಮ ಪೋಷಕರ ಸಹಾಯದಿಂದಲೂ ಕೂಡ ನೀವು ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಲ್ಲೆ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಿ. ನೀವು ಬೆಳೆದಿರುವಂತಹ ಪರಿಸರ ಹಾಗೂ ನೀವು ಓದಿರುವಂತಹ ಶಾಲೆಗಳು ಕೂಡ ಈ ಒಂದು ಸಂದರ್ಭದಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.

ನೀವು ಹೆಚ್ಚಿನ ಆಸಕ್ತಿಯನ್ನು ಶಿಕ್ಷಣದಲ್ಲಿಯೇ ತೋರುತ್ತಿರಿ ಎಂದರೆ, ನೀವು ಉತ್ತಮವಾಗಿರುವಂತಹ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ನಮಗೆ ಶಿಕ್ಷಣದಲ್ಲಿ ಆಸಕ್ತಿಯೇ ಇಲ್ಲ, ಆದರೂ ಕೂಡ ಪೋಷಕರ ಒತ್ತಾಯದ ಮೇರೆಗೆ ಈ ಒಂದು ಶಿಕ್ಷಣವನ್ನು ಮಾಡುತ್ತೇವೆ ಎನ್ನುವವರಿಗೂ ಕೂಡ ಒಳ್ಳೆಯ ಕೋರ್ಸ್ಗಳು ಕೂಡ ಲಭ್ಯವಿರುತ್ತದೆ. ನಿಮಗೆ ಅನುಕೂಲಕರವಾಗುವಂತಹ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ, ಏಕೆಂದರೆ ಕೆಲ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಯಾವುದರ ಮೇಲೆ ಆಧಾರವಾಗಿರುತ್ತದೆ ಎಂದರೆ, ಬೇರೆ ವ್ಯಕ್ತಿಗಳು ಸಜೆಶನ್ ಮಾಡುವ ಮುಖಾಂತರ.

ಈ ಒಂದು ಕೋರ್ಸ್ ಗಳನ್ನು ತೆಗೆದುಕೊಂಡರೆ ದೊಡ್ಡ ವ್ಯಕ್ತಿಯಾಗಬಹುದು, ಇಂಜಿನಿಯರ್ ಆಗಬಹುದು, ಡಾಕ್ಟರ್ ಆಗಬಹುದು ಎಂದು ವಿವಿಧವಾದ ಆಸೆಯನ್ನು ನಿಮ್ಮ ಮನಸ್ಸಿನಲ್ಲಿ ಹುಟ್ಟಿಸುತ್ತಾರೆ. ಆದರೆ ನಿಮಗೆ ಅನುಗುಣವಾಗಿರುವಂತಹ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಬಿಡುವುದೇ ಇಲ್ಲ, ಬೇರೆ ವ್ಯಕ್ತಿಗಳ ಮಾತನ್ನು ಕೇಳುವುದಾದರೆ ನೀವು ಮುಂದೊಂದು ದಿನ ಪಶ್ಚಾತಾಪವನ್ನು ಪಡುವ ಪರಿಸ್ಥಿತಿ ಉಂಟಾದರೂ ಆಗಬಹುದು. ಆದ್ದರಿಂದ ನೀವು ನಿಮ್ಮ ಪೋಷಕರ ಸಜೆಶನ್ ಮತ್ತು ನಿಮ್ಮ ಒಂದು ನಿರ್ಧಾರದ ಮೇಲೆ ಮುಂದಿನ ಭವಿಷ್ಯದ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಿ.

ಪ್ರಸ್ತುತವಾಗಿ ಎಸೆಸೆಲ್ಸಿ ಮುಗಿಸಿದಂತಹ ವಿದ್ಯಾರ್ಥಿಗಳು ನಾಲ್ಕು ವಿಭಾಗದಲ್ಲಿರುವಂತಹ ಶಿಕ್ಷಣಕ್ಕೆ ಹೋಗಬಹುದು. ಮೊದಲನೆಯದಾಗಿ ವಿಜ್ಞಾನ ವಿಭಾಗ (Science) ಕಲಾವಿಭಾಗ (Arts) ವಾಣಿಜ್ಯ ವಿಭಾಗ (Commers) ಈ ಮೂರು ವಿಭಾಗದಲ್ಲಿ ನೀವು ಪಿಯುಸಿ ಶಿಕ್ಷಣವನ್ನು ಪಡೆಯಬಹುದು. ನಾಲ್ಕನೇ ವಿಭಾಗದ ಶಿಕ್ಷಣದ ಹೆಸರು ಡಿಪ್ಲೋಮಾ. ಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ ಕೋರ್ಸ್ ಗಳನ್ನು ಡಿಪ್ಲೋಮಾ ಶಿಕ್ಷಣದಲ್ಲಿ ಆಯ್ಕೆ ಮಾಡಿಕೊಂಡು ಓದಬಹುದಾಗಿದೆ.

ವಿಜ್ಞಾನ ವಿಭಾಗದ ಮಾಹಿತಿ (Science)

ಪಿಯುಸಿ ಶಿಕ್ಷಣದ ಮೂರು ವಿಭಾಗದಲ್ಲಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೆಚ್ಚಿನ ಕೋರ್ಸ್ ಎಂದರೆ, ಅದುವೇ ಸೈನ್ಸ್ ವಿಭಾಗ. ಈ ಒಂದು ವಿಜ್ಞಾನದ ವಿಭಾಗದಲ್ಲಿಯೂ ಕೂಡ ಹಲವಾರು ಉದ್ಯೋಗವಕಾಶಗಳು ಬರುತ್ತವೆ. ಹೆಚ್ಚಿನ ಅಧಿಕವಾದ ವೇತನವನ್ನು ನೀಡುವಂತಹ ಕೋರ್ಸ್ ಇದಾಗಿದೆ. ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಕೂಡ ಈ ಒಂದು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು SSLC ನಂತರ ಓದಬಹುದು. ವಿಜ್ಞಾನ ವಿಭಾಗದ ಮಾಹಿತಿ ಮುಗಿಯಿತು. ಇನ್ನು ಉಳಿದಿರುವುದೇ ವಾಣಿಜ್ಯ ವಿಭಾಗದ ಮಾಹಿತಿ,

ವಾಣಿಜ್ಯ ವಿಭಾಗದ ಮಾಹಿತಿ (Commerce)

ಈ ವಾಣಿಜ್ಯ ವಿಭಾಗದಲ್ಲಿ ನೀವು ಕಾಮರ್ಸ್ ನಲ್ಲಿ ಲಭ್ಯವಿರುವಂತಹ ಹಲವಾರು ಕೋರ್ಸ್ ಗಳನ್ನು ಕೂಡ ಓದುತ್ತೀರಿ. ಆ ಕೋರ್ಸ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಶಿಕ್ಷಣವನ್ನು ಮುಂದುವರಿಸುತ್ತೀರಿ. ಈ ಒಂದು ಕೋರ್ಸ್ ನಲ್ಲಿ ಲಭ್ಯವಿರುವಂತಹ ಉದ್ಯೋಗ ಯಾವುವು ಎಂದರೆ, ಚಾಟೆಡ್ ಅಕೌಂಟೆಂಟ್ ಹಾಗೂ ಬ್ಯಾಂಕ್ ಮ್ಯಾನೇಜರ್ ಮತ್ತು ಇನ್ನಿತರ ಬ್ಯಾಂಕ್ ವಹಿವಾಟಿನ ವ್ಯಕ್ತಿಗಳು ಈ ಒಂದು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಾರೆ. ಅವರಂತೆ ನಿಮಗೂ ಕೂಡ ಹೆಚ್ಚಿನ ಆಸಕ್ತಿ ಅಕೌಂಟಿಂಗ್ ಮೇಲೆ ಇದೆ ಎಂದರೆ ಮಾತ್ರ ನೀವು ವಾಣಿಜ್ಯ ವಿಭಾಗವನ್ನು ತೆಗೆದುಕೊಂಡು ಶಿಕ್ಷಣವನ್ನು ಮುಂದುವರಿಸಬಹುದಾಗಿದೆ. ವಿದ್ಯಾರ್ಥಿಗಳೇ, ಈ ಒಂದು ವಾಣಿಜ್ಯ ವಿಭಾಗದ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಇನ್ನು ಉಳಿದಿರುವುದೇ ಕಲಾವಿಭಾಗದ ಮಾಹಿತಿ.

ಕಲಾವಿಭಾಗದ ಮಾಹಿತಿ (Arts)

ಈ ಒಂದು ಕಲಾವಿಭಾಗದಲ್ಲಿ ನೀವು ನಿಮಗೆ ಅನುಗುಣವಾಗಿರುವಂತಹ ಕೋರ್ಸ್ ಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಕೆಲ ವಿದ್ಯಾರ್ಥಿಗಳಿಗೆ ಡಿಸೈನರ್ ಆಗಬೇಕು ಹಾಗೂ ಪತ್ರಿಕೋದ್ಯಮಿ ಆಗಬೇಕು ಎಂಬ ಕನಸಿರುತ್ತದೆ. ಅಂತಹ ವಿದ್ಯಾರ್ಥಿಗಳು ಮಾತ್ರ ಈ ರೀತಿಯ ಒಂದು ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಓದಿ. ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮಿಯಾಗಿ ತಮ್ಮ ವೃತ್ತಿ ಜೀವನವನ್ನು ಕೂಡ ಮುಂದುವರಿಸುತ್ತಾರೆ. ಅವರಂತೆ ನೀವು ಕೂಡ ಆಗಬೇಕು ಎಂದರೆ ಮಾತ್ರ ಈ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ. ಆಸಕ್ತಿ ಇರುವವರು ಮಾತ್ರ ಈ ಮೂರು ರೀತಿಯ ವಿಭಾಗದಲ್ಲಿ ಒಂದು ಕೋರ್ಸನ್ನು ಆಯ್ಕೆ ಮಾಡಿಕೊಂಡು ಹೋದಬಹುದು.

ಡಿಪ್ಲೋಮಾ ಕೋರ್ಸ್ ಮಾಹಿತಿ (Diploma)

SSLC ಮುಗಿದ ಬಳಿಕ ಡಿಪ್ಲೋಮೋ ಶಿಕ್ಷಣವನ್ನು ಪಡೆಯಲು ಮುಂದಾಗುತ್ತಿವಿ ಎನ್ನುವಂತಹ ವಿದ್ಯಾರ್ಥಿಗಳಿಗೆ, ಡಿಪ್ಲೋಮೋ ದಲ್ಲಿ ಯಾವೆಲ್ಲ ಉದ್ಯೋಗವಕಾಶಗಳು ದೊರೆಯುತ್ತವೆ ಹಾಗೂ ಯಾವ ಕೋರ್ಸ್ಗಳು ಇವೆ ಎಂಬುದು ಕೂಡ ಖಾತರಿಯಾಗಿ ತಿಳಿಯಬೇಕಾಗುತ್ತದೆ. ಡಿಪ್ಲೋಮೋ ಶಿಕ್ಷಣವನ್ನು ತೆಗೆದುಕೊಳ್ಳುವಂತಹ ವಿದ್ಯಾರ್ಥಿಗಳು ಇಂಜಿನಿಯರ್ ಆಗಬೇಕು ಎಂಬ ಕನಸನ್ನು ಇಟ್ಟುಕೊಂಡಿರುತ್ತಾರೆ. ಆ ಅಭ್ಯರ್ಥಿಗಳು ಅವರದೇ ಆದ ಕನಸಿನಂತೆಯೇ ಮುನ್ನುಗುತ್ತಾರೆ. ಇಂಜಿನಿಯರ್ ಕೂಡ ಆಗುತ್ತಾರೆ. ನಿಮಗೂ ಕೂಡ SSLC ಮುಗಿದ ಬಳಿಕ ಇಂಜಿನಿಯರ್ ಆಗಲೇಬೇಕು ಎಂಬ ಕನಸಿದ್ದರೆ ಮಾತ್ರ ನೀವು ಈ ರೀತಿಯ ಒಂದು ಡಿಪ್ಲೋಮೋ ಶಿಕ್ಷಣವನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕೂಡ ಆಗಬಹುದಾಗಿದೆ.

ನೋಡಿದ್ರಲ್ಲ ವಿದ್ಯಾರ್ಥಿಗಳೇ ಯಾವ ರೀತಿಯ ವಿವಿಧ ಕೋರ್ಸ್ಗಳು sslc ಮುಗಿದ ಬಳಿಕ ಲಭ್ಯವಿರುತ್ತದೆ ಎಂದು, ಇನ್ನೇಕೆ ತಡ ಮಾಡುವಿರಿ ನಿಮಗೆ ಆಸಕ್ತಿಯುಳ್ಳ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಮುಂದಿನ ಶಿಕ್ಷಣಕ್ಕೆ ಮುನ್ನುಗ್ಗಿರಿ. ನಿಮ್ಮ ಪೋಷಕರ ಸಹಾಯವನ್ನು ಕೂಡ ತೆಗೆದುಕೊಂಡು ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ ಎಂಬುದನ್ನು ಖಚಿತ ಪಡಿಸಿಕೊಂಡು, ಬಳಿಕ ಆ ಒಂದು ಶಿಕ್ಷಣವನ್ನೇ ಉತ್ತಮವಾಗಿ ಓದಿ ಮುಂದಿನ ದಿನಗಳಲ್ಲಿ ಅತ್ಯುತ್ತಮವಾದ ವೇತನವನ್ನು ಪಡೆದುಕೊಳ್ಳುವಂತಹ ವ್ಯಕ್ತಿಗಳು ನೀವಾಗಿರಿ.

ಇಲ್ಲಿಯವರೆಗೂ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *