ನಮಸ್ಕಾರ ಸ್ನೇಹಿತರೆ ಈ ಲೇಖನವನ್ನು ಯುವನಿಧಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಯುವನಿಧಿ ಗ್ಯಾರಂಟಿ ಯು ಯಾವತ್ತಿನಿಂದ ಜಾರಿಗೆ ಬರುತ್ತದೆ ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ ಮತ್ತು ಅರ್ಹತೆ ಏನು ಎಂಬುದನ್ನು ಈ ಒಂದು ಲೇಖನದಲ್ಲಿ ಎಲ್ಲವನ್ನು ಕೂಡ ತಿಳಿಸಿಕೊಟ್ಟಿರುತ್ತೇನೆ. ಕೊನೆಯವರೆಗೂ ಲೇಖನವನ್ನು ಓದಿ ಮತ್ತು ನಿಮ್ಮ ಗೆಳೆಯರೊಂದಿಗೆ ಈ ಲೇಖನದ ಮಾಹಿತಿಯನ್ನು ಹಂಚಿಕೊಳ್ಳಿ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಅರ್ಥಾತ್ ಯುವನಿಧಿ ಗ್ಯಾರಂಟಿ ಯು ಇದೇ ತಿಂಗಳು ಡಿಸೆಂಬರ್ 26 ನೇ ತಾರೀಕು 2023 ರಂದು ಜಾರಿಗೆ ಬರುತ್ತದೆ 26ನೇ ತಾರೀಕು ಡಿಸೆಂಬರ್ 2023 ರಿಂದ ಅರ್ಜಿ ಹಾಕಲು ಹಾಗೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದರು.
ಅರ್ಹ ಅಭ್ಯರ್ಥಿಗಳು ಮತ್ತು ಈ ಯೋಜನೆಗೆ ಸಂಬಂಧಪಟ್ಟ ಅಭ್ಯರ್ಥಿಗಳು ಜನವರಿ 1 2024 ರಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು ಅಥವಾ ಅರ್ಜಿಯನ್ನು ಸಲ್ಲಿಸಿಕೊಳ್ಳಬಹುದು ಎಂದು ಈ ಮೂಲಕ ತಿಳಿಸಿದ್ದಾರೆ.
2022-23 ರ ಸಾಲಿನಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದ ವಿದ್ಯಾರ್ಥಿಗಳು ಮತ್ತು ಯಾವುದೇ ರೀತಿಯ ಮುಂದಿನ ಶಿಕ್ಷಣಕ್ಕೆ ಹೋಗದವರು ಹಾಗೂ ಯಾವುದೇ ರೀತಿಯ ಉದ್ಯೋಗಕ್ಕೆ ಸೇರಿದವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮತ್ತು ಪದವಿ ಹೊಂದಿದವರಿಗೆ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೂ ಕೂಡ ಈ ಯೋಜನೆಯು ಸಂಬಂಧಪಟ್ಟ ಎಂದು ತಿಳಿಸಿದ್ದಾರೆ.
ಈ ಯೋಜನೆ ಅಡಿಯ ನಿರುದ್ಯೋಗ ಹೊಂದಿದ ಪದವಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 3000 ಹಾಗೂ ಡಿಪ್ಲೋಮಾ ತೆರೆಗಡೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ಮೂಲಕ ಈ ಯೋಜನೆಯು ಜಾರಿಗೆ ಬರಲಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ತಮಗೆ ಉದ್ಯೋಗ ಸಿಗುವವರೆಗೂ ಈ ಹಣ ಜಮಾ ಆಗುತ್ತದೆ ಅಥವಾ ಗರಿಷ್ಠ ಮಟ್ಟದಲ್ಲಿ ಎರಡು ವರ್ಷಗಳ ಕಾಲ ಮಾತ್ರ ಅಭ್ಯರ್ಥಿಗಳ ಖಾತೆಗೆ ಹಣ ಜಮಾ ಆಗುತ್ತದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ದಾಖಲೆಗಳು:
- 10ನೇ ತರಗತಿ ಅಂಕಪಟ್ಟಿ
- ದ್ವಿತೀಯ ಪಿಯುಸಿ ಅಂಕಪಟ್ಟಿ
- ಪದವಿಪೂರ್ವ ಕೋರ್ಸ್ನ ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರಗಳು
- ಸ್ವಯಂ ಘೋಷಣೆಯ ಪತ್ರ
ಈ ಮೇಲ್ಕಂಡ ದಾಖಲೆಗಳನ್ನು ಒದಗಿಸುವ ಮೂಲಕ ಯುವ ನಿಧಿ ಗ್ಯಾರಂಟಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಮೇಲ್ಕಂಡ ಮಾಹಿತಿಗಳನ್ನು ತಿಳಿದುಕೊಳ್ಳಿ ಡಿಸೆಂಬರ್ 26 ನೇ ತಾರೀಕು ಯೋಜನೆ ಜಾರಿಗೆ ಬರುತ್ತದೆ ಎಂದು ಕನ್ಫರ್ಮೇಶನ್ ಮಾಡಲಾಗಿದೆ ಮತ್ತು ಜನವರಿ ಒಂದನೇ ತಾರೀಖಿನಿಂದ ಅರ್ಜಿಯನ್ನು ಸಲ್ಲಿಸಲು ಅಥವಾ ನೋಂದಣಿಯನ್ನು ಮಾಡಿಕೊಳ್ಳಲು ಸೇವಾ ಸಿಂಧು ಪೋರ್ಟಲ್ಲಿ ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.
ಈ ಮಾಹಿತಿಯು ತಮಗೆ ಇಷ್ಟವಾದಲ್ಲಿ ಮತ್ತು ಈ ಮಾಹಿತಿಯನ್ನು ಇತರರಿಗೆ ಹಂಚಿಕೊಳ್ಳಲು ಇಷ್ಟವಿದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ನಿಮ್ಮ ಕುಟುಂಬದವರಿಗೂ ಕೂಡ ಹಂಚಿಕೊಳ್ಳಿ.
ಧನ್ಯವಾದಗಳು……