Guarantee Schemes: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಿಹಿ ಸುದ್ದಿ ಸರ್ಕಾರದ ಕಡೆಯಿಂದ ಬಂದಿದೆ. ಆ ಗುಡ್ ನ್ಯೂಸ್ ಏನು ಯಾರಿಗೆ ಈ ಸಿಹಿ ಸುದ್ದಿ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ. ನೀವು ಕೂಡ ಆ ಒಂದು ಸಿಹಿ ಸುದ್ದಿಯನ್ನು ತಿಳಿದು ನಿಮಗೂ ಕೂಡ ಅನ್ವಯವಾಗುತ್ತದೆ ಎಂದು ಒಂದೊಮ್ಮೆ ನೋಡಿರಿ. ಕರ್ನಾಟಕದ ಜನತೆಗೆ ಮಾತ್ರ ಈ ಸಿಹಿ ಸುದ್ದಿ ಅನ್ವಯವಾಗುತ್ತದೆ. ಈ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿರಿ.
ಗ್ಯಾರಂಟಿ ಯೋಜನೆಗಳ ಮಾಹಿತಿ !
ಚುನಾವಣೆ ಕಳೆದು ಒಂದು ವರ್ಷ ಕಳೆಯಿತು. ಆ ಒಂದು ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೂಡ ಕಾಂಗ್ರೆಸ್ ಪಕ್ಷವು ಪರಿಚಯಿಸಿದೆ. ಕರ್ನಾಟಕದ ಜನರು ಮಾತ್ರ ಈವರೆಗೂ ಗ್ಯಾರೆಂಟಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಬೇರೆ ರಾಜ್ಯದಲ್ಲಿಯೂ ಕೂಡ ಇದೇ ರೀತಿಯ ಯೋಜನೆಗಳು ಜಾರಿಯಾಗಿದೆ.
ಕರ್ನಾಟಕದ ಜನತೆಗೆ ಎಷ್ಟೆಲ್ಲಾ ಪ್ರಯೋಜನಗಳು ಪ್ರತಿ ತಿಂಗಳು ಹಾಗೂ ಪ್ರತಿದಿನ ಆಗುತ್ತದೆಯೋ ಅಷ್ಟೇ ಸೌಲಭ್ಯಕಾರವಾದ ಪ್ರಯೋಜನಗಳು ಆ ಯೋಜನೆಗಳಲ್ಲಿಯೂ ಕೂಡ ಆಗುತ್ತಿದೆ. ಮೊಟ್ಟಮೊದಲನೇ ಬಾರಿಗೆ ಪಂಚ ಗ್ಯಾರಂಟಿಗಳನ್ನು ಪರಿಚಯಿಸಿರುವಂತಹ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿಯೂ ಕೂಡ ಈ ಯೋಜನೆಗಳನ್ನು ಅಸ್ತಿತ್ವದಲ್ಲಿರುತ್ತವೆ ಎಂದು ಮುಖ್ಯಮಂತ್ರಿ ಅವರು ಮಾಹಿತಿಯನ್ನು ನೀಡಿದ್ದಾರೆ.
ಮೊಟ್ಟಮೊದಲನೇ ಬಾರಿಗೆ ಎಲ್ಲಾ ಕರ್ನಾಟಕದ ಜನತೆಯು ಕೂಡ ಪ್ರತಿನಿತ್ಯ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣವನ್ನು ಕೂಡ ಮುಂದುವರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೂಡ ಶಕ್ತಿ ಯೋಜನೆ ಮುಖಾಂತರ ಬಸ್ಸುಗಳಲ್ಲಿ ಉಚಿತವಾಗಿಯೇ ಪ್ರಯಾಣ ಮಾಡಬಹುದಾ ಎಂದು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ನೀವು ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ನೀವು ಸಂಪೂರ್ಣವಾದ ಮಾಹಿತಿಯನ್ನು ಕೂಡ ಓದಿರಿ.
ಪಂಚ ಗ್ಯಾರೆಂಟಿ ಯೋಜನೆಗಳಿಗೆ ಇದುವರೆಗೂ ಆಗಿರುವಂತಹ ವೆಚ್ಚವೆಷ್ಟು ?
ಸ್ನೇಹಿತರೆ ಇದುವರೆಗೂ ಕೂಡ ಈ ಪಂಚ ಗ್ಯಾರೆಂಟಿ ಯೋಜನೆಗಳಿಗೆ 44,816 ಕೋಟಿ ರೂ ಹಣ ವೆಚ್ಚವಾಗಿದೆ ಎಂದು ಸರ್ಕಾರ ಮಾಹಿತಿಯನ್ನು ಕೂಡ ನೀಡಿದೆ. ಒಂದೊಂದು ಯೋಜನೆಯು ಕೂಡ ಒಂದೊಂದು ರೀತಿಯ ವೆಚ್ಚವನ್ನು ಭರಿಸಿದೆ. ಅದರಲ್ಲಿ ಹೆಚ್ಚಿನ ಪ್ರಮಾಣದ ವೆಚ್ಚವನ್ನು ಭರಿಸಿರುವಂತಹ ಯೋಜನೆ ಯಾವುದೆಂದರೆ ಅದುವೇ ಗೃಹಲಕ್ಷ್ಮಿ ಯೋಜನೆ,
ಇದುವರೆಗೂ 23,098 ಕೋಟಿಯನ್ನು ಭರಿಸಿರುವಂತಹ ಗೃಹಲಕ್ಷ್ಮಿ ಯೋಜನೆಯು ಇನ್ಮುಂದೆ ಕೂಡ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಐದು ವರ್ಷಗಳವರೆಗೂ ಕೂಡ ಈ ಎಲ್ಲಾ ಯೋಜನೆಗಳು ಕಾರ್ಯನಿರ್ವಹಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾಹಿತಿಯನ್ನು ನೀಡಿದ್ದಾರೆ.
ಇದು ಎಲ್ಲಾ ಮನೆಗಳಿಗೂ ಕೂಡ ಉಚಿತವಾಗಿ ವಿದ್ಯುತ್ ಸಂಪರ್ಕ ಕೂಡ ದೊರೆಯುತ್ತದೆ. ಅದು ಪ್ರತಿದಿನವೂ ಕೂಡ ದೊರೆಯಲಿದೆ. ಆದಕಾರಣ ವಿದ್ಯುತ್ ಸಂಪರ್ಕದಿಂದ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 10,207 ಕೋಟಿರೂ ಹಣವನ್ನು ಈವರೆಗೂ ಭರಿಸಿದೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದರು ಈವರೆಗೂ ಆದಂತಹ ವೆಚ್ಚ 4,054 ಕೋಟಿ ಹಣ.
ಇನ್ನು ಯುವನಿಧಿ ಯೋಜನೆಯನ್ನು ತೆಗೆದುಕೊಂಡರೆ ಈವರೆಗೂ ವೆಚ್ಚವಾಗಿರುವಂತಹ ಮೊತ್ತ 93 ಕೋಟಿ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಎಲ್ಲರೂ ಕೂಡ 5 ಕೆಜಿ ಅಕ್ಕಿಯ ಹಣವನ್ನು ಪ್ರತಿ ತಿಂಗಳು ಪಡೆಯುತ್ತಿದ್ದರು ಅದರ ವೆಚ್ಚ 7,364 ಕೋಟಿ ರೂ ಹಣವಾಗಿದೆ.
ನೋಡಿದ್ರಲ್ಲ ಸ್ನೇಹಿತರೆ ಎಷ್ಟು ಯೋಚನೆಗಳು ಇದುವರೆಗೂ ಕಾರ್ಯನಿರ್ವಹಿಸುತ್ತಿವೆ. ಹಾಗೂ ಎಷ್ಟು ಹಣವನ್ನು ಗಳಿಸಿವೆ ಎಂದು ಇನ್ಮುಂದೆ ಕೂಡ ಈ ಯೋಜನೆ ಅಸ್ತಿತ್ವದಲ್ಲಿರುತ್ತದೆಯಾ ಎಂಬ ಪ್ರಶ್ನೆ ನಿಮ್ಮಲ್ಲಿ ಹಲವಾರು ದಿನಗಳಿಂದಲೂ ಕೂಡ ಮೂಡುತ್ತಿದೆ. ಹೌದು ಸ್ನೇಹಿತರೆ ಮುಂದಿನ ದಿನಗಳಲ್ಲಿಯೂ ಕೂಡ ಈ ಗ್ಯಾರಂಟಿ ಐದು ಯೋಜನೆಗಳು ಕಾರ್ಯ ನಿರ್ವಹಿಸುತ್ತವೆ ಎಂಬ ಮಾಹಿತಿಯನ್ನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮದಲ್ಲಿ ಹಾಗೂ ಅಧಿಕೃತವಾಗಿಯೇ ಘೋಷಣೆಯನ್ನು ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಈ ಒಂದು ಯೋಜನೆಗಳನ್ನು 5 ವರ್ಷದ ಒಳಗೆ ರದ್ದುಗೊಳಿಸುವುದಿಲ್ಲ. ಐದು ವರ್ಷಗಳವರೆಗೂ ಕೂಡ ನಿರಂತರವಾಗಿ ಈ ಯೋಜನೆಗಳನ್ನು ಕಾರ್ಯ ನಿರ್ವಹಿಸುತ್ತೇವೆ ಎಂಬ ಸಿಹಿ ಸುದ್ದಿಯನ್ನು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನೀಡಿದ್ದಾರೆ. ಕೆಲಸ 2024-25 ನೇ ಸಾಲಿನಲ್ಲಿ 52 ಸಾವಿರ ಕೋಟಿಯನ್ನು ಮೀಸಲಿಡಲು ಮುಂದಾಗಿದೆ ಸರ್ಕಾರ. ಈ ವರ್ಷದಲ್ಲಿ ಮೀಸಲಿಟ್ಟ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಿನ ಹಣವನ್ನು ಮೀಸಲಿಡಲು ಮುಂದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…