ನಮಸ್ಕಾರ ಸ್ನೇಹಿತರೆ,ಕೇಂದ್ರ ಸರ್ಕಾರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡುತ್ತಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ತುಂಬಾ ಹರಿದಾಡುತ್ತಿದೆ. ಇದನ್ನು ನೋಡಿ ಕೆಲವರು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ. ಆದರೆ ಇದು ಕೇವಲ ಸುಳ್ಳು ಸುದ್ದಿಯಲ್ಲ. ವಾಸ್ತವವಾಗಿ, ಕೇಂದ್ರವು ಉಚಿತ ಹೊಲಿಗೆ ಯಂತ್ರ(Sewing Machine)ಗಳನ್ನು ಇದೀಗ ನೀಡುತ್ತಿದೆ. ವಿಶ್ವಕರ್ಮ ಯೋಜನೆ ಅಡಿಯಲ್ಲಿ ಈ ಸೌಲಭ್ಯ ಕೂಡ ಸಿಗಲಿದೆ. ಪೂರ್ತಿ ವಿವರಕ್ಕಾಗಿ ಈ ಸುದ್ದಿ ಓದಿಕೊಳ್ಳಿ.
ಉಚಿತ ಹೊಲಿಗೆ ಯಂತ್ರ ಯೋಜನೆಯ ಬಗ್ಗೆ ಇಲ್ಲಿದೆ ವಿವರ:
ಈ ಯೋಜನೆಯನ್ನು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(PM Vishvakarma yojane)ಯ ಅಂಗವಾಗಿ ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ ಹೊಲಿಗೆ ಯಂತ್ರ ಖರೀದಿಸಲು ಕೇಂದ್ರವು 15 ಸಾವಿರ ರೂ ಈ ಹಣವನ್ನು ಸೀದಾ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸ್ನೇಹಿತರೆ,ಹಾಗಾಗಿ ಹೊಲಿಗೆ ಕೆಲಸ ಮಾಡಿ ಉದ್ಯೋಗ ಪಡೆಯಬಹುದು ಮತ್ತು ಸಂಪಾದಿಸಬಹುದು ಆಗಿರುತ್ತದೆ. ನಿಮ್ಮ ಆದಾಯವನ್ನು ಕೂಡ ನೀವು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಕೇಂದ್ರವೂ ಇದಕ್ಕಾಗಿ ₹20,000ದವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಈ ಹಣದಲ್ಲಿ ನೀವು ಹೊಲಿಗೆ ಯಂತ್ರದ ಅಂಗಡಿಯನ್ನು ಪ್ರಾರಂಭಿಸಬಹುದು ಆಗಿರುತ್ತದೆ. ಈ ಯೋಜನೆಗೆ ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಅರ್ಜಿ ಸಲ್ಲಿಸಬಹುದು ಆಗಿದೆ ಅಂತ ತಿಳಿಸಲಾಗಿದೆ. ಈ ಯೋಜನೆಯನ್ನು ಹೇಗೆ ಪಡೆಯುವುದು ಎಂದು ತಿಳಿಯೋಣ ಬನ್ನಿ ಸ್ನೇಹಿತರೆ.
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಹತೆ ಏನಿರಬೇಕು?
- ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತೀಯನಾಗಿರಬೇಕು.
- ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವವರು ಈಗಾಗಲೇ ಹೊಲಿಗೆ ಕೆಲಸವನ್ನ ಮಾಡುತ್ತಿರುವವರಾಗಿರಬೇಕು ಎಂದು ತಿಳಿಸಲಾಗಿದೆ.
- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(PM Vishvakarma Yojane) ಅಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುವ ಯಾರಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಆಗಿದೆ.
- ಉಚಿತ ಹೊಲಿಗೆ ಯಂತ್ರ(Free Sewing Machine Scheme) ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಎಂದು ತಿಳಿಸಲಾಗಿದೆ.
- ಉಚಿತ ಹೊಲಿಗೆ ಯಂತ್ರ ಯೋಜನೆ ಅರ್ಜಿದಾರರು ಎಲ್ಲಾ ಪ್ರಮುಖ ದಾಖಲೆಗಳನ್ನು(Documents) ಹೊಂದಿರಬೇಕು ಎಂದು ತಿಳಿಸಲಾಗಿದೆ.
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್(adhar Card)
- ವಿಳಾಸ ಪುರಾವೆ(adress proof)
- ಗುರುತಿನ ಚೀಟಿ(identity card)
- ಜಾತಿ ಪ್ರಮಾಣಪತ್ರದ ನಕಲು ಪ್ರತಿ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್ ವಿವರಗಳು
ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ,ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಮೊದಲು ಅಧಿಕೃತ ಜಾಲತಾಣಕ್ಕೆ https://pmvishwakarma.gov.in ಗೆ ಹೋಗಬೇಕು.
ಅಲ್ಲಿ ನೀವು ಮೊದಲು ನೋಂದಾಯಿಸಬೇಕು. ನೀವು ಆನ್ಲೈನ್ನಲ್ಲಿ ಅರ್ಜಿ ಹಾಕಲು ಆಗಲಿಲ್ಲ ಅಂದರೆ, ನೀವು ನಿಮ್ಮ ಹತ್ತಿರದ ಸಿಎಸ್ಸಿ(CSC) ಕೇಂದ್ರಕ್ಕೆ ಹೋಗಿ ಅದನ್ನು ಹಾಕಬಹುದು. ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ಸ್ವೀಕೃತಿಯನ್ನು ಪಡೆಯಬೇಕು ಆಗಿದೆ. ಆ ರಸೀದಿಯನ್ನು(Receipt) ನಿಮ್ಮ ಬಳಿ ಇಟ್ಟುಕೊಳ್ಳಿ. ಏಪ್ರಿಲ್ ತಿಂಗಳಲ್ಲಿ ನೀವು ಹೊಲಿಗೆ ಯಂತ್ರವನ್ನು ಖರೀದಿಸಲು ಹಣವನ್ನು ಪಡೆಯುತ್ತೀರಿ ಎಂದು ಹೇಳಬಹುದು.