ujjwala scheme: ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಸಿಗುತ್ತೆ, ಎಲ್ಪಿಜಿ ಸಿಲಿಂಡರ್ ಮತ್ತು ಸ್ಟವ್ ಕೂಡಲೇ ಅರ್ಜಿ ಸಲ್ಲಿಸಿ.

ujjwala scheme

ujjwala scheme: ನಮಸ್ಕಾರ ಸ್ನೇಹಿತರೆ… ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಬಿಪಿಎಲ್ ರೇಷನ್ ಕಾರ್ಡ್ ನಿಂದ ದೊರೆಯುತ್ತದೆ ಉಚಿತವಾಗಿ ಮೂರು ಗ್ಯಾಸ್ ಮತ್ತು ಇದೊಂದು ರೀತಿಯಾಗಿ ಬಿಪಿಎಲ್ ರೇಷನ್ ಕಾರ್ಡ್ದಾರರಿಗೆ ಭರ್ಜರಿಯಾದಂತಹ ಗುಡ್ ನ್ಯೂಸ್ ಎಂದು ಹೇಳಬಹುದು, ಏಕೆಂದರೆ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿದವರಿಗೆ ಸರ್ಕಾರದಿಂದ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತಿವೆ, ಬಿಪಿಎಲ್ ರೇಷನ್ ಕಾರ್ಡ್ ನ ಮುಖಾಂತರ ಎಷ್ಟೋ ಯೋಜನೆಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ. 

ಈಗ ಇತ್ತೀಚಿನ ದಿನಗಳಲ್ಲಿ ಹೇಳುವುದಾದರೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗೆ ಈ ಒಂದು ರೇಷನ್ ಕಾರ್ಡ್ ತುಂಬಾ ಮುಖ್ಯವಾದಂತಹ ಒಂದು ದಾಖಲೆಯಾಗಿದೆ ಎಂದು ಹೇಳಬಹುದು, ಏಕೆಂದರೆ ರೇಷನ್ ಕಾರ್ಡ್ ಮುಖಾಂತರವೇ ಸರ್ಕಾರದ ಹಲವಾರು ರೀತಿಯ ಯೋಜನೆಗಳ ಪ್ರಯೋಜನವನ್ನು ಪಡೆಯಲು ಮಾತ್ರ ಸಾಧ್ಯ.

ಈ ರೇಷನ್ ಕಾರ್ಡ್ನ ಮುಖಾಂತರ ಮೂರು ಗ್ಯಾಸ್ ಒಲೆ ಮತ್ತು ಸ್ಟವ್ ಅನ್ನು ಪಡೆಯುವುದು ಹೇಗೆ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇನೆ. ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಇದಕ್ಕೆ ಅಗತ್ಯವಿರುವಂತಹ ದಾಖಲೆಗಳು ಯಾವುವು ಇದಕ್ಕೆ ಹೊಂದಿರಬೇಕಾದಂತಹ ಮುಖ್ಯ ಅರ್ಹತೆಗಳು ಏನು ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಲೇಖನದಲ್ಲಿ ಸಂಪೂರ್ಣವಾಗಿ ಓದಿ ಉಪಯುಕ್ತವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.

ಸ್ನೇಹಿತರೆ ಸರ್ಕಾರವು ಈಗಾಗಲೇ 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮುಖಾಂತರ ಹಲವಾರು ಸಾಕಷ್ಟು ಬಡ ಮಹಿಳೆಯರಿಗೆ ಉಚಿತವಾದಂತಹ ಗ್ಯಾಸ್ಗಳನ್ನು ನೀಡಲಾಗುತ್ತಿತ್ತು, ಆದರೆ ಈ ಯೋಜನೆಯನ್ನು ಜಾರಿಗೆ ತಂದಿರುವಂತಹ ಮುಖ್ಯ ಉದ್ದೇಶ ಏನೆಂದರೆ ಮಹಿಳೆಯರು ಅಡುಗೆ ಮಾಡಲು ಕಷ್ಟವನ್ನು ಪಡುತ್ತಾರೆ ಏಕೆಂದರೆ ಅಡುಗೆ ಮಾಡಲು ಒಲೆಯಲ್ಲಿ ತುಂಬಾ ಸಮಯ ಹಿಡಿಯುತ್ತದೆ.

ಇದರಿಂದ ಮಹಿಳೆಯರು ಇನ್ನಿತರ ಕೆಲಸಗಳನ್ನು ಮಾಡಲು ಕೂಡ ಸಾಧ್ಯವಿಲ್ಲ. ಮತ್ತಿತರ ಸಮಸ್ಯೆಗಳನ್ನೆಲ್ಲ ಆದರಿಸಿ ಮೋದಿ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯನ್ನು ಜಾರಿಗೆ ತಂದ ನಂತರ ಮಹಿಳೆಯರು ಆರಾಮಾಗಿ ಅಡುಗೆ ಮಾಡುತ್ತಿದ್ದಾರೆ. ಜೊತೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಪ್ರಯೋಜನವನ್ನು ಪಡೆದಿರುವಂತಹ ಮಹಿಳೆಯರ ಸಂಖ್ಯೆ ಸುಮಾರು 10 ಮಿಲಿಯನ್.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮುಖಾಂತರ ಉಚಿತವಾಗಿ ಗ್ಯಾಸ್ ಕೂಡ ಸಿಗುತ್ತದೆ. ಜೊತೆಗೆ ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾಲವು ಕೂಡ ದೊರೆಯುತ್ತದೆ. ಅದು ಬಡ್ಡಿ ರಹಿತವಾಗಿ, ಯಾವುದೇ ರೀತಿಯ ಬಡ್ಡಿ ಇಲ್ಲದೆ 1600 ರೂಪಾಯಿ ಸಾಲವನ್ನು ನೀಡುತ್ತಿದೆ ಸರ್ಕಾರ.

ಬಡ್ಡಿ ರಹಿತ ಸಾಲವನ್ನು ನೀಡುತ್ತಿರುವ ಮುಖ್ಯ ಉದ್ದೇಶವೆಂದರೆ ಮಹಿಳೆಯರು ಆರ್ಥಿಕ ಪರಿಸ್ಥಿತಿಯಲ್ಲಿ ಇರುತ್ತಾರೆ ಅಂತಹ ಆರ್ಥಿಕ ಪರಿಸ್ಥಿತಿಗಳನ್ನು ನಿಭಾಯಿಸಲು ಈ ಒಂದುಸಾಲವನ್ನು ನೀಡಲಾಗುತ್ತಿದೆ. ಯಾವುದೇ ಬಡ್ಡಿ ಇಲ್ಲದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಬೇಕಾಗುವಂತಹ ಅರ್ಹತೆಗಳಿವು.

  • ನೀವೇನಾದರೂ ಬೇರೆ ಗ್ಯಾಸ್ ಕನೆಕ್ಷನ್ ಅನ್ನು ಒಂದಿದ್ದು ಉಚಿತ ಗ್ಯಾಸ್ ಕನೆಕ್ಷನ್ ಗೆ ಅರ್ಜಿಯನ್ನು ಸಲ್ಲಿಸಿದರೆ ಇದು ಸಾಧ್ಯವಿಲ್ಲ. ನೀವು ಒಟ್ಟಾರೆ ಮೊದಲಿಂದಲೂ ಕೂಡ ಗ್ಯಾಸ್ ಅನ್ನು ಹೊಂದಿರಬಾರದು ಅಂತವರಿಗೆ ಮಾತ್ರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
  • 18 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
  • ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಮತ್ತು ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳು ಮತ್ತು ಮತ್ತಿತರ ಬಡ ಕುಟುಂಬಗಳು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಹೊಂದಿರಬೇಕಾದಂತಹ ದಾಖಲೆಗಳು ಯಾವುವು ಎಂದರೆ :-

  •  ನಿಮ್ಮ ಕುಟುಂಬದ ಸದಸ್ಯರ ಆಧಾರ್   ಕಾರ್ಡುಗಳು
  •  ಬಿಪಿಎಲ್ ರೇಷನ್ ಕಾರ್ಡ್
  •  ಪಾಸ್ವರ್ಡ್ ಗಾತ್ರದ ಭಾವಚಿತ್ರ
  •  ವಸತಿ ಪ್ರಮಾಣ ಪತ್ರ
  •  ಬ್ಯಾಂಕ್ ಖಾತೆ
  •  ಜಾತಿ ಪ್ರಮಾಣ ಪತ್ರ

ಆನ್ಲೈನ್ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆಫ್ಲೈನ್ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಸಬಹುದು ಆಫ್ಲೈನ್ ಮುಖಾಂತರ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ನೀವು ನಿಮ್ಮ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಹೋಗಿ ಅಲ್ಲಿ ಕೇಳುವಂತಹ ದಾಖಲೆಗಳನ್ನು ನೀಡಿ ಅರ್ಜಿಯನ್ನು ಕೂಡ ಸಲ್ಲಿಸಬಹುದು ಇದಕ್ಕೂ ಕೂಡ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ ನೀವು ಆನ್ಲೈನ್ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆನ್ಲೈನ್ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಸಿ ನೀವು ಉಚಿತವಾದ ಗ್ಯಾಸನ್ನು ನಿಮ್ಮದಾಗಿಸಿಕೊಳ್ಳಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *