Ration Card Correction Today: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾ? ಹಾಗೂ ರೇಷನ್ ಕಾರ್ಡ್ ನಲ್ಲಿ ಯಾರನ್ನಾದರೂ ಡಿಲೀಟ್ ಮಾಡಿಸಬೇಕಾ? ಹಾಗೂ ಯಾರನ್ನಾದರೂ ಸೇರಿಸಿಕೊಳ್ಳಬೇಕಾ? ಇಲ್ಲಿದೆ ನಿಮಗೆ ಒಂದು ಒಳ್ಳೆಯ ಅವಕಾಶ.!
ರೇಷನ್ ಕಾರ್ಡ್ ತಿದ್ದುಪಡಿ ಆರಂಭ!
ನೀವೇನಾದರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾ? ಹಲವಾರು ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಾದು ಕುಳಿತಿದ್ದಾರೆ ಅಂತವರಿಗೆ ಒಂದು ಸಿಹಿ ಸುದ್ದಿ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಪ್ರಸ್ತುತ ಚಾಲುತಿಯಲ್ಲಿರುವ ಐದು ಗ್ಯಾರಂಟಿಗಳ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹುಮುಖ್ಯವಾದ ದಾಖಲೆಯಾಗಿರುತ್ತದೆ.
ಹಲವಾರು ಜನರು ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಿಕೊಳ್ಳಲು ಹಾಗೂ ರೇಷನ್ ಕಾರ್ಡ್ ನಿಂದ ಹೆಸರನ್ನು ತೆಗೆಯಲು ಹಾಗೂ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿ ತಿದ್ದುಪಡಿ ಮಾಡಿಸಲು ಬಹಳಷ್ಟು ಜನ ಕಾದು ಕುಳಿತಿದ್ದಾರೆ. ಎಂಬುದು ಕರ್ನಾಟಕದ ಎಲ್ಲ ಜನತೆಗೆ ಗೊತ್ತಿರುವ ವಿಷಯವಾಗಿದೆ. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅವಕಾಶವನ್ನು ಇವತ್ತು ಕಲ್ಪಿಸಿಕೊಡಲಾಗಿದೆ.
ಇವತ್ತು ಅಂದರೆ ದಿನಾಂಕ 2-7-2024 ರಂದು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಯಾವ ಜಿಲ್ಲೆಗಳಲ್ಲಿ ಎಂದು ಈ ಕೆಳಗೆ ನೀಡಲಾಗಿರುತ್ತದೆ.
ಸರ್ವರ್ 01:- ಬೆಂಗಳೂರು ಗ್ರಾಮೀಣ ಹಾಗೂ ಬೆಂಗಳೂರು ನಗರ ಜಿಲ್ಲೆಯವರೆಗೆ, 2-7-2024 ರಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಕಾಲಾವಕಾಶ.
ಸರ್ವರ್ 02:- ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ದಕ್ಷಿಣ ಕನ್ನಡ, ಧಾರವಾಡ, ಗದಗ, ಚಿಕ್ಕಮಗಳೂರು, ಹಾವೇರಿ, ಹಾಸನ, ಕೊಡಗು, ಮೈಸೂರು, ಮಂಡ್ಯ, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯವರೆಗೆ 2-7-2024 ರಂದು ಮಧ್ಯಾಹ್ನ 2 ಗಂಟೆಯಿಂದ ನಾಲ್ಕು ಗಂಟೆವರೆಗೆ ತಿದ್ದುಪಡಿ ಮಾಡಿಸಲು ಕಾಲಾವಕಾಶ.
ಸರ್ವರ್ 03:- ಚಿಕ್ಕಬಳ್ಳಾಪುರ, ಬೀದರ್, ಬಳ್ಳಾರಿ, ಚಿತ್ರದುರ್ಗ, ಕಲಬುರ್ಗಿ, ದಾವಣಗೆರೆ, ರಾಯಚೂರು, ಕೊಪ್ಪಳ, ಕೋಲಾರ, ತುಮಕೂರು, ಶಿವಮೊಗ್ಗ, ರಾಮನಗರ, ಯಾದಗಿರಿ, ವಿಜಯನಗರ ಜಿಲ್ಲೆಯವರು 2-7-2024 ರಂದು ಮಧ್ಯಾಹ್ನ 4 ರಿಂದ ಸಂಜೆ 6 ರವರೆಗೆ ತಿದ್ದುಪಡಿ ಮಾಡಿಸಲು ಕಾಲಾವಕಾಶ ಕಲ್ಪಿಸಿಕೊಡಲಾಗಿದೆ.
ರೇಷನ್ ಕಾರ್ಡ್ ನಲ್ಲಿ ಯಾವ ಬದಲಾವಣೆ ಮಾಡಿಸಬಹುದು?
- ಹೆಸರು ತಿದ್ದುಪಡಿ ಮಾಡಿಸಬಹುದು
- ಹೆಸರು ಸೇರ್ಪಡೆ ಮಾಡಿಸಬಹುದು
- ಕುಟುಂಬದ ಯಜಮಾನಿ ಬದಲಾವಣೆ ಮಾಡಿಸಬಹುದು
- ರೇಷನ್ ಕಾರ್ಡ್ ನಿಂದ ಹೆಸರು ಡಿಲೀಟ್ ಮಾಡಿಸಬಹುದು
- ಈ-ಕೆವೈಸಿ ಹಾಗೂ ಇತರ ಸೇವೆಗಳನ್ನು ಕೂಡ ಮಾಡಿಸಬಹುದು
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಏನು ಮಾಡಬೇಕು?
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ತಿಳಿಸಿರುವ ಹಾಗೆ ಕಾಲಾವಕಾಶವನ್ನು ನೀಡಲಾಗಿರುತ್ತದೆ. ತಕ್ಷಣವೇ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಅಥವಾ ಗ್ರಾಮಒನ್ ಕೇಂದ್ರ ಹಾಗೂ ಸಿಎಸ್ಸಿ ಕೇಂದ್ರಗಳಿಗೆ ಭೇಟಿ ನೀಡಿ ತಕ್ಷಣವೇ ನಿಮ್ಮ ಕೆಲಸವನ್ನು ಪೂರ್ಣಗೊಳಿಸಬಹುದಾಗಿರುತ್ತದೆ.