Adhaar Card Loan: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ, ಪ್ರಧಾನಮಂತ್ರಿ ಆಧಾರ್ ಕಾರ್ಡ್ ಲೋನ್ (Loan) ಈ ಯೋಜನೆಯ ಮೂಲಕ ಲೋನ್ ಪಡೆಯುವುದು ಹೇಗೆ? ಹಾಗೂ ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ಅಂದರೆ ಆರ್ಥಿಕವಾಗಿ ಯಾರಾದರೂ ಸಮಸ್ಯೆ ಇದ್ದಲ್ಲಿ, ಸಾಲದ ಅವಶ್ಯಕತೆ ತುಂಬಾ ಇರುತ್ತದೆ. ಹಾಗಾಗಿ ಆಧಾರ್ ಕಾರ್ಡ್ ಮೂಲಕ ಸಾಲ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಪಿಎಂ ಆಧಾರ್ ಕಾರ್ಡ್ ಲೋನ್ ಸ್ಕೀಮ್ ಮೂಲಕ ನೀವು ಸಾಲವನ್ನು ಹೇಗೆ ಪಡೆದುಕೊಳ್ಳಬೇಕು? ಹಾಗೂ ಸಾಲಕ್ಕೆ ಬೇಕಾಗುವ ದಾಖಲೆಗಳೇನು? ಮತ್ತು ಸಾಲವನ್ನು ಪಡೆಯಲು ಏನು ಮಾಡಬೇಕು ಎಲ್ಲಾ ಪ್ರಶ್ನೆಗಳಿಗೆ ಇದೇ ಲೇಖನದಲ್ಲಿ ಉತ್ತರ ನೀಡಲಾಗಿರುತ್ತದೆ ನೋಡಿ. ಹಾಗಾಗಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಪಿಎಂ ಆಧಾರ್ ಕಾರ್ಡ್ ಲೋನ್ ಯೋಜನೆ!
ಸ್ನೇಹಿತರೆ, ಈ ಯೋಜನೆಯು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ಪ್ರಧಾನಮಂತ್ರಿ ಆಧಾರ್ ಕಾರ್ಡ್ ಸಾಲದ ಯೋಜನೆ ಅಡಿ ಸಾಲದ ಅವಶ್ಯಕತೆ ಇದ್ದವರಿಗೆ ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಹಾಗಾಗಿ ಯೋಜನೆಗೆ ಸಾಲದ ಅವಶ್ಯಕತೆ ಇದ್ದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಈ ಯೋಜನೆಯಡಿಯಲ್ಲಿ ಸಾಲದ ಮೇಲೆ ನೀವು ಕಡಿಮೆ ಬಡ್ಡಿ ದರವನ್ನು ಕೂಡ ಪಡೆದುಕೊಳ್ಳುತ್ತೀರಾ. ಗ್ರಾಮೀಣ ಪ್ರದೇಶದಲ್ಲಿ ಈ ಸಾಲದ ಮೇಲೆ 35% ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ. ಈ ಯೋಜನೆ ಅಡಿ ಸುಲಭವಾಗಿ ಸಾಲವನ್ನು ಪಡೆಯಬಹುದಾಗಿರುತ್ತದೆ. ಇದರಿಂದ ನೀವು ನಿಮ್ಮ ಅಗತ್ಯವಾದ ವಿಷಯಗಳಿಗೆ ಸಾಲವನ್ನು ಬಳಸಿಕೊಳ್ಳಬಹುದಾಗಿರುತ್ತದೆ.
ಸ್ನೇಹಿತರೆ ಈ ಯೋಜನೆ ಇಡಿ ನೀವು 7.3% ನಿಂದ ಹಿಡಿದು 12% ನವರೆಗೆ ಸಾಲದ ಮೇಲೆ ಬಡ್ಡಿ ದರವನ್ನು ಪಡೆದುಕೊಳ್ಳುತ್ತೀರಾ. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೂ ಇತರ ಬ್ಯಾಂಕ್ ಸಾಲಗಳಿಗೆ ಹೋಲಿಸಿದರೆ ನೀವು ಇದರಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳುತ್ತೀರಾ.
ಸಾಲ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು!
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಸ್ಟೇಟ್ಮೆಂಟ್
- ಮೊಬೈಲ್ ನಂಬರ್
ಮೇಲಿರುವ ದಾಖಲೆಗಳನ್ನು ತೆಗೆದುಕೊಂಡ ನೀವು ಪ್ರಧಾನಮಂತ್ರಿಯ ಆಧಾರ್ ಕಾರ್ಡ್ ಸಾಲ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ನಿಮಗೆ ಪ್ರತಿ ತಿಂಗಳು ₹15,000 ಕ್ಕಿಂತ ಹೆಚ್ಚು ಸಂಬಳವನ್ನು ಹೊಂದಿರಬೇಕು.
ಈ ಸಲ ಯೋಜನೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಹಾಗೂ ಅರ್ಜಿ ಸಲ್ಲಿಸಲು ಬಯಸುವವರು ಉತ್ತಮವಾದ ಸಿಬಿಲ್ ಸ್ಕೋರನ್ನು ಹೊಂದಿರಬೇಕು.
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಆಧಾರ್ ಕಾರ್ಡ್ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು, ಪ್ರಧಾನಮಂತ್ರಿ ಆಧಾರ್ ಕಾರ್ಡ್ ಸಾಲ ಯೋಜನೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಅಲ್ಲಿ ನೀವು ಆನ್ಲೈನ್ ಮೂಲಕವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅಥವಾ ಆಫ್ಲೈನ್ ಮೂಲಕ ನಿಮ್ಮ ಹತ್ತಿರದ ಬ್ಯಾಂಕ್ ಭೇಟಿ ನೀಡುವ ಮೂಲಕ ಅಲ್ಲಿರುವ ಸಿಬ್ಬಂದಿಗಳನ್ನು ಹೆಚ್ಚಿನ ವಿವರಗಳನ್ನು ಪಡೆಯುವ ಮೂಲಕ ಬೇಕಾಗುವ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬಹುದು.