aadhaar update: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, ಎಲ್ಲರ ಆಧಾರ್ ಕಾರ್ಡ್ ಗಳು ಕೂಡ ಜೂನ್ 14ರ ನಂತರ ರದ್ದಾಗುತ್ತದೆಯಾ ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಲೇಖನವನ್ನು ಓದುವ ಮುಖಾಂತರ ಈ ಒಂದು ಮಾಹಿತಿಯನ್ನು ತಿಳಿದು ನಿಮ್ಮ ಆಧಾರ್ ಕಾರ್ಡ್ ರದ್ದಾಗುತ್ತದೆಯಾ ಎಂದು ಖಚಿತಪಡಿಸಿಕೊಳ್ಳಿ.
ಜೂನ್ 14ರ ವರೆಗೂ ಆಧಾರ್ ಕಾರ್ಡ್ ಗಳನ್ನು ಉಚಿತವಾಗಿ ನವೀಕರಣ ಮಾಡಲು ಯುಐಡಿಎಐ ಅವಕಾಶವನ್ನು ಮಾಡಿಕೊಟ್ಟಿದೆ. ನೀವು ಮುಂದಿನ ತಿಂಗಳ ಒಳಗೆ ನಿಮ್ಮ ಆಧಾರ್ ಕಾರ್ಡ್ ಗಳನ್ನು ಕೂಡ ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿದೆ.
ಆಧಾರ್ ಅಪ್ಡೇಟ್ ಮಾಡಿಸದಿದ್ದರೆ ಆಧಾರ್ ಕಾರ್ಡ್ ರದ್ದಾಗುತ್ತಾ !
ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತಹ ಸುದ್ದಿ ಯಾವುದೆಂದರೆ ಅದುವೇ ಆಧಾರ್ ಕಾರ್ಡ್ ರದ್ದಾಗುತ್ತದೆ ಎಂಬ ವಿಚಾರ. ಎಲ್ಲರೂ ಕೂಡ ಇದೇ ರೀತಿಯ ಮಾಹಿತಿಯನ್ನು ಕೂಡ ಹಬ್ಬಿಸುತ್ತಿದ್ದಾರೆ. ಯಾವುದು ಎಂದರೆ ಹತ್ತು ವರ್ಷದ ಹಳೆಯ ಆಧಾರ್ ಕಾರ್ಡನ್ನು ಜೂನ್ 14ರ ಒಳಗೆ ಅಪ್ಡೇಟ್ ಮಾಡಿಸದಿದ್ದರೆ ಅಂತವರ ಆಧಾರ್ ಕಾರ್ಡ್ ಕೂಡ ರದ್ದಾಗುತ್ತದೆ.
ಆ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಯಾರು ಕೂಡ ಉಚಿತ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆಯಲು ಸಾಧ್ಯವಿಲ್ಲ. ಹಾಗೂ ಬೇರೆ ರೀತಿಯ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ಬಹಳ ಮುಖ್ಯ ಅಂತ ಕೆಲಸವನ್ನು ಕೂಡ ಮಾಡಲು ಆಗುವುದಿಲ್ಲ ಎಂಬ ಸುದ್ದಿ ವೈರಲ್ ಆಗುತ್ತಿದೆ. ಈ ಸುದ್ದಿ ನಿಜವೋ ಸತ್ಯವೋ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಕಡ್ಡಾಯ.
ಹೌದು ಸ್ನೇಹಿತರೆ ಇದು ಕಡ್ಡಾಯವಾಗಿದೆ. ಏಕೆಂದರೆ 10 ವರ್ಷಗಳ ನಂತರ ಎಲ್ಲಾ ಅಭ್ಯರ್ಥಿಗಳ ವಿಳಾಸವು ಕೂಡ ಬದಲಾವಣೆ ಆಗಿರುತ್ತದೆ. ಹಾಗೂ ಕೆಲವೊಂದು ಅಪ್ಡೇಟ್ಗಳನ್ನು ಕೂಡ ಅವರು ಮಾಡಿಸಲು ಮುಂದಾಗಿರುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಮಾಡಿಸಲು ಸಾಧ್ಯವಾಗಿರುವುದಿಲ್ಲ. ಆದರೆ ಕೆಲವೊಂದು ತಿಂಗಳ ಹಿಂದೆ ಯುಐಡಿಎಐ ಅಪ್ ಡೇಟ್ ಮಾಡಿಸಲು ಅವಕಾಶವನ್ನು ಕೂಡ ಕಲ್ಪಿಸಿ ಕೊಟ್ಟಿದ್ದು, ಆ ಒಂದು ಗಡುವು ಜೂನ್ 14ಕ್ಕೆ ಮುಗಿಯುತ್ತದೆ.
ನೀವು ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡುತ್ತೀರಿ ಎಂದರೆ ನೀವು ಜೂನ್ 14ರ ಒಳಗೆ ಮಾಡಬಹುದು. ಆದರೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಗಳನ್ನು ಕೂಡ ಅಪ್ಡೇಟ್ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಗಳು ರದ್ದಾಗುವುದಿಲ್ಲ.
ಉಚಿತ ನವೀಕರಣ ಮಾಡಿಸದಿದ್ದರೆ ಆಧಾರ್ ಕಾರ್ಡ್ ರದ್ದಾಗುವುದಿಲ್ಲ.
ಯುಐಡಿಎಐ ನವೀಕರಣಕ್ಕೆ ಗಡುವನ್ನು ಕೂಡ ನೀಡಿದೆ. ಆ ಗಡುವು ಮೂಗಿಯುವ ಒಳಗೆ ನೀವು ನವೀಕರಣವನ್ನು ಕೂಡ ಮಾಡಿಸಿಕೊಳ್ಳಬಹುದು. ಅಥವಾ ನೀವು ಅಪ್ಡೇಟ್ ಅನ್ನು ಮಾಡಿಸದಿದ್ದರೆ ನೀವು ಮುಂದಿನ ದಿನಗಳಲ್ಲಿ ಹಣವನ್ನು ನೀಡಿ ಆಧಾರ್ ಕಾರ್ಡ್ ಗಳನ್ನು ಕೂಡ ಅಪ್ಡೇಟ್ ಮಾಡಿಸಬೇಕಾಗುತ್ತದ. ಆದ್ದರಿಂದ ಎಲ್ಲರೂ ಈ ಒಂದು ಸುದ್ದಿಯನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ನಿಟ್ಟಿನಿಂದ ಈ ಸುದ್ದಿಯನ್ನೇ ವೈರಲ್ ಮಾಡುತ್ತಿದ್ದಾರೆ. ಏಕೆಂದರೆ ಅವರು ಕೂಡ ಉಚಿತವಾಗಿ ಆಧಾರ್ ಕಾರ್ಡ್ಗಳನ್ನು ನವೀಕರಣ ಮಾಡಿಸಬೇಕು ಎಂಬ ಕಾರಣದಿಂದ ಮಾತ್ರ ಈ ರೀತಿಯ ಒಂದು ಸುದ್ದಿ ವೈರಲಾಗುತ್ತಿದೆ.
ಈ ರೀತಿ ಆನ್ಲೈನ್ ಮುಖಾಂತರ ಆಧಾರ್ ಅಪ್ಡೇಟ್ ಮಾಡಿ.
https://myaadhaar.uidai.gov.in/ ಈ ಒಂದು ವೆಬ್ಸೈಟ್ಗೆ ಲಾಗಿನ್ ಆಗುವ ಮುಖಾಂತರ ನೀವು ಕೂಡ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳಬಹುದು. ನೀವೇ ಖುದ್ದಾಗಿ ಎಲ್ಲಾ ರೀತಿಯ ಮಾಹಿತಿಯನ್ನು ಓದುವ ಮೂಲಕ ಆಧಾರನ್ನು ಅಪ್ಡೇಟ್ ಮಾಡಿರಿ. ಅಂದರೆ ನಿಮ್ಮ ವಿಳಾಸ ತಪ್ಪಿದ್ದಲ್ಲಿ ವಿಳಾಸವನ್ನು ಕೂಡ ಬದಲಾವಣೆ ಮಾಡಿ. ಅಥವಾ ಇನ್ನಿತರ ಬದಲಾವಣೆಯನ್ನು ಮಾಡಬೇಕು ಎಂದರೆ, ಆ ಒಂದು ಕ್ರಮವನ್ನು ಅನುಸರಿಸುವ ಮುಖಾಂತರ ಆನ್ಲೈನ್ ನಲ್ಲಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು.
ನೀವೇನಾದರೂ ನಾಡಕಚೇರಿಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವಿರಿ ಎಂದರೆ ನಿಮಗೆ ರೂ.50 ಹಣ ಶುಲ್ಕವಾಗಿ ವಿಧಿಸಲಾಗುತ್ತದೆ. ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಕೂಡ ಮೊಬೈಲ್ ನಲ್ಲಿಯೇ ಆನ್ಲೈನ್ ಮೂಲಕ ಅಪ್ಡೇಟ್ ಮಾಡಿಸಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.