ನಮಸ್ಕಾರ ಸ್ನೇಹಿತರೆ…. ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಗೃಹಲಕ್ಷ್ಮಿ ಯೋಜನೆ ಅಲ್ಲದೆ ಈ ಯೋಜನೆಯ ಮುಖಾಂತರವೂ ಕೂಡ ಒಂದು ಲಕ್ಷ ರೂಪಾಯಿ ಮಹಿಳೆಯರಿಗೆ ಸಿಗುತ್ತದೆ ಹಾಗಿದ್ದರೆ ಆ ಯೋಜನೆ ಯಾವುದು ಅದರ ಬಗ್ಗೆ ಮಾಹಿತಿ ಏನು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇನೆ. ಲೇಖನವನ್ನು ಕೊನೆಯವರೆಗು ಓದಿ ಉಪಯುಕ್ತವಾದಂತಹ ಮಾಹಿತಿ ಪಡೆಯಿರಿ.
ಸ್ನೇಹಿತರೇ ಈಗಾಗಲೇ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮೂರು ಯೋಜನೆಗಳು ಕೂಡ ಮಹಿಳೆಯರಿಗಾಗಿ ತಂದಿದೆ ಯಾವ ಯೋಜನೆ ಯಾವುವು ಎಂದರೆ ಶಕ್ತಿ ಯೋಜನೆ, ಶಕ್ತಿ ಯೋಜನೆಯ ಮುಖಾಂತರ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡಬಹುದು. ಅದೇ ರೀತಿಯಾಗಿ ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದೆ ಗೃಹಲಕ್ಷ್ಮಿ ಯೋಜನೆಯ ಮುಖಾಂತರ 2000 ರೂಪಾಯಿಯನ್ನು ಪ್ರತಿ ತಿಂಗಳು ಉಚಿತವಾಗಿ ಪಡೆಯಬಹುದು.
ಇನ್ನು ಅನ್ನಭಾಗ್ಯ ಯೋಜನೆಯನ್ನು ಅಷ್ಟೇ ಮಹಿಳೆಯರೇ ರೇಷನ್ ಕಾರ್ಡ್ ನ ಮುಖ್ಯ ಸದಸ್ಯೆ ಆಗಿರಬೇಕಾಗುತ್ತದೆ. ಈ ಯೋಜನೆಯಲ್ಲೂ ಕೂಡ ಅಕ್ಕಿ ಹಣವನ್ನು ಕೂಡ ನೀಡಲಾಗುತ್ತದೆ. ಒಟ್ಟಾರೆ ಮಹಿಳೆಯರಿಗಾಗಿ ಸರ್ಕಾರವು ಯೋಜನೆಗಳನ್ನು ಜಾರಿಗೆ ತರುವಂತಹ ಉದ್ದೇಶ ಏನೆಂದರೆ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಉದ್ದೇಶದಿಂದ ಸರ್ಕಾರವು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಆದರೆ ಈಗ ಸರ್ಕಾರವು ಮಹಿಳೆಯರಿಗಾಗಿ ತಂದಿರುವಂತಹ ಯೋಜನೆಗಳಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಮಾತ್ರ.
ಹಾಗಿದ್ದರೆ ಮಹಿಳೆಯರಿಗೆ ಒಂದು ಲಕ್ಷ ನೀಡುವ ಯೋಜನೆ ಯಾವುದು? ಎಂದು ನೋಡೋಣ,
ಕಾಂಗ್ರೆಸ್ ಸರ್ಕಾರವು ಈಗಾಗಲೇ ಒಂದು ಘೋಷಣೆಯನ್ನು ಹೊರಡಿಸಿದೆ ಇದು ನಿಮಗಾಗಲೇ ತಿಳಿದಿರಬಹುದು ‘ಮಹಾಲಕ್ಷ್ಮಿ ಯೋಜನೆ’ ಎಂಬ ಒಂದು ಯೋಜನೆಯ ಪರಿಚಯವನ್ನು ಮಹಿಳೆಯರಿಗೆ ಮಾಡಿದೆ ಈ ಯೋಜನೆಯ ಮುಖಾಂತರ ಮಹಿಳೆಯರಿಗೆ ಒಂದು ಲಕ್ಷ ಹಣವನ್ನು ನೀಡಲಾಗುತ್ತದೆ, ಎಂದು ಘೋಷಣೆ ಮಾಡಿದೆ.
ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ಮಹಿಳೆಯರಿಗೂ ಕೂಡ ಒಂದು ಲಕ್ಷ ರೂಪಾಯಿ ಹಣ ಪಕ್ಕ ಎಂದು ಮಾಧ್ಯಮಗಳಲ್ಲೆಲ್ಲ ತಿಳಿಸಿದೆ, ಇದು ನಿಜಾನಾ ಅಥವಾ ಸುಳ್ಳ ಎಂದು ನೀವು ಚುನಾವಣೆಯ ರಿಸಲ್ಟ್ ಬಂದ ನಂತರ ಕಾದು ನೋಡಬೇಕಾಗಿದೆ,
ನಮ್ಮ ರಾಜ್ಯದಲ್ಲಿ ನಡೆಯುತ್ತಿರುವಂತಹ ಈ ರೀತಿಯ ಯೋಜನೆಗಳು ಕೂಡ ಬೇರೆ ರಾಜ್ಯಗಳಲ್ಲೂ ನಡೆಯುತ್ತಿದೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು ಒಬ್ಬರು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಏನಪ್ಪಾ ಹೇಳಿಕೆ ಎಂದರೆ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಎರಡು ಲಕ್ಷ ರೂಪಾಯಿಯನ್ನು ನೀಡುತ್ತೇನೆ ಎಂಬ ಘೋಷಣೆಯನ್ನು ಹೊರಡಿಸಿದ್ದಾರೆ ಕಾಂಗ್ರೆಸ್ ಸರ್ಕಾರ ಗೆದ್ದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ದಿಗ್ವಿಜಯ ಸಿಂಗ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಹೇಳಿಕೆ ನೀಡಿದ್ದಾರೆ.
ನೋಡಿದ್ರಲ್ಲ ಸ್ನೇಹಿತರೇ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಆದ ನಂತರ ಮತ್ತೊಂದು ಯಾವ ಯೋಜನೆಯನ್ನು ಜಾರಿಗೆ ತಂದಿದೆ ಇದರಲ್ಲಿ ಒಂದು ಲಕ್ಷ ರೂಪಾಯಿಯನ್ನು ನೀಡುತ್ತಾ, ಇಲ್ವಾ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ. ನೀವು ಕೂಡ ಈ ಯೋಜನೆಯಡಿಯಲ್ಲಿ ಹಣವನ್ನು ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕು. ಮುಂದಿನ ದಿನಗಳಲ್ಲಿ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ.
ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕೆ ಧನ್ಯವಾದಗಳು ಸ್ನೇಹಿತರೇ… ಮತ್ತೆ ಸಿಗೋಣ ಮುಂದಿನ ಲೇಖನದಲ್ಲಿ.