gruhalakshmi scheme: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಇನ್ಮುಂದೆ ಗೃಹಲಕ್ಷ್ಮಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ಬರಲ್ಲ. ಏಕೆ ಎಂಬ ಕಾರಣವನ್ನು ನಾವು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ. ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ. ನೀವು ಕೂಡ ಈ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಹಣವನ್ನು ಪಡೆಯುತ್ತಿದ್ದರೆ ಕೂಡಲೇ ಈ ಒಂದು ಲೇಖನವನ್ನು ಕೊನೆವರೆಗೂ ಓದಿರಿ. ಕರ್ನಾಟಕದ ಮಹಿಳೆಯರು ಈಗಾಗಲೇ ಬರೋಬ್ಬರಿ 18,000 ಹಣವನ್ನು ಪಡೆದುಕೊಂಡಿದ್ದಾರೆ.
ಕೆಲವರ ಖಾತೆಗೆ ಇನ್ನೂ ಕೂಡ ಹಣ ಬಂದಿಲ್ಲ. ಆದರೆ ಇನ್ನೂ ಕೆಲವರ ಖಾತೆಗೆ ಪ್ರತಿ ತಿಂಗಳು 2000 ಹಣ ಕೂಡ ಜಮಾ ಆಗಿದೆ. ಅಂತವರು ಯಾವುದೇ ರೀತಿಯ ಮುಂದಾಲೋಚನೆಯನ್ನು ಮಾಡಬೇಡಿ. ನಿಮಗೆ ಮುಂದಿನ ದಿನಗಳಲ್ಲಿ ಈ ಒಂದು ಹಣವು ಸ್ಥಗಿತಗೊಂಡರು ಸ್ಥಗಿತಗೊಳ್ಳಬಹುದು. ಏಕೆಂದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗಿದ್ದರೆ, ಮಾತ್ರ ಈ ರೀತಿಯ ಒಂದು ಸಮಸ್ಯೆ ಎದುರಾಗುತ್ತದೆ. ಯಾವ ಕಾರಣದಿಂದ ನಿಮಗೆ 2000 ಹಣ ಬರುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.
9 ಕಂತಿನ ಹಣ ಯಶಸ್ವಿಯಾಗಿ ಖಾತೆಗೆ ಜಮಾ ಆಗಿದೆ.
ಹೌದು ಸ್ನೇಹಿತರೆ ಕೆಲವು ಮಹಿಳೆಯರ ಖಾತೆಗೆ ಹಣ ಕೂಡ ಜಮಾ ಆಗಿದೆ. ಆದರೆ ಇನ್ನು ಉಳಿದಂತಹ ಮಹಿಳೆಯರ ಖಾತೆಗೆ ಯಾವುದೇ ರೀತಿಯ ಹಣ ಬಂದಿಲ್ಲ. ಅಂತವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ. ಏಕೆಂದರೆ ನೀವು ಯಾವುದೇ ರೀತಿಯ ತಪ್ಪನ್ನು ಮಾಡದಿದ್ದರೆ ನಿಮಗೆ ಕಡ್ಡಾಯವಾಗಿ ಗೃಹಲಕ್ಷ್ಮಿ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಅದರಲ್ಲೂ ಎಲ್ಲಾ ಕಂತಿನ ಹಣವನ್ನು ಕೂಡ ನೀವು ಪಡೆಯಲು ಅರ್ಹರಾಗುತ್ತೀರಿ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಮಾತ್ರ ನಿಮಗೆ ಗೃಹಲಕ್ಷ್ಮಿ ಕಡೆಯಿಂದ ಹಣ ಬರದಿರಲು ಕಾರಣ.
ಆದರೆ ಇನ್ನ ಕೆಲವೊಬ್ಬರು ಈಗಾಗಲೇ ಸಾಕಷ್ಟು ಕಂತಿನ ಹಣವನ್ನು ಕೂಡ ಪಡೆದಿದ್ದಾರೆ. ಆದರೆ ಅವರು ಇದೇ ತಿಂಗಳಿನಲ್ಲಿ ಹಣವನ್ನು ಇನ್ನೂ ಕೂಡ ಪಡೆದಿಲ್ಲ. ಹಾಗೂ ಕೆಲವೊಂದು ತಿಂಗಳ ಹಣವನ್ನು ಕೂಡ ಪಡೆದಿಲ್ಲ. ಅಂತವರಿಗೆ ಬಿಗ್ ಶಾಕ್ ಎಂದೆ ಹೇಳಬಹುದು. ಸರ್ಕಾರವೇ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಏಕೆಂದರೆ ಆ ಅಭ್ಯರ್ಥಿಗಳು ನಕಲಿ ರೇಷನ್ ಕಾರ್ಡ್ ಗಳನ್ನು ನೀಡುವ ಮುಖಾಂತರ ಗೃಹಲಕ್ಷ್ಮಿ ಯೋಜನೆ ಮುಖಾಂತರ ಹಣವನ್ನು ಕೂಡ ಪ್ರತಿ ತಿಂಗಳು ಪಡೆದಿದ್ದಾರೆ.
ಅಂತವರ ಮೇಲೆ ಕಠಿಣ ಕ್ರಮವೆಂದು ಸರ್ಕಾರ ನಿರ್ಧಾರ ಮಾಡಿದೆ. ನೀವು ಕೂಡ ನಕಲಿ ರೇಷನ್ ಕಾರ್ಡ್ ಗಳನ್ನು ಪಡೆದಿದ್ದೀರಿ ಎಂದರೆ ನಿಮ್ಮ ಮೇಲು ಕೂಡ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ. ನೀವು ಯಾವುದೇ ರೀತಿಯ ನಕಲಿ ರೇಷನ್ ಕಾರ್ಡ್ ಗಳನ್ನು ಪಡೆದಿಲ್ಲ ಆದರೂ ಕೂಡ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಹಾಗೂ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣ ಬಂದಿಲ್ಲವೆಂದರೆ ನೀವು ಒಂದೇ ಕುಟುಂಬದಲ್ಲಿ ಸಾಕಷ್ಟು ರೇಷನ್ ಕಾರ್ಡ್ ಗಳನ್ನು ಹೊಂದಿದ್ದೀರಿ ಎಂದರ್ಥ.
ಯಾವುದೇ ಕಾರಣವಿಲ್ಲದೆ ನಿಮ್ಮ ರೇಷನ್ ಕಾರ್ಡ್ ಗಳನ್ನು ಕೂಡ ರದ್ದು ಮಾಡುವುದಿಲ್ಲ. ಒಂದು ಬಾರಿ ನಿಮ್ಮ ದಾಖಲಾತಿಗಳನ್ನೆಲ್ಲ ಚೆಕ್ ಮಾಡುವ ಮುಖಾಂತರ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುತ್ತದೆ. ಪ್ರತಿ ತಿಂಗಳಿನಲ್ಲಿಯೂ ಕೂಡ ಲಕ್ಷಗಟ್ಟಲೆ ರೇಷನ್ ಕಾರ್ಡ್ ಗಳು ರದ್ದಾಗುತ್ತಿರುತ್ತದೆ. ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ ಎಂದೇ ಹೇಳಬಹುದು.
ರೇಷನ್ ಕಾರ್ಡ್ ಇದ್ರೆನಾ ಗೃಹಲಕ್ಷ್ಮಿ ಹಣ ಬರುವುದು.
ಹೌದು ಸ್ನೇಹಿತರೆ ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದಂತಹ ಗೃಹಿಣಿಯರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ಕಡೆಯಿಂದ ಪ್ರತಿ ತಿಂಗಳು ಹಣ ಬರುವುದು. ಹಾಗೂ ಮನೆಯಲ್ಲಿ ಯಜಮಾನಿ ಮಹಿಳೆಗೆ ಮಾತ್ರ ಈ ರೀತಿಯ ಒಂದು ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ.
ಆ ಎಲ್ಲಾ ಮಹಿಳೆಯರಿಗೂ ಕೂಡ ಹಣ ಬರುವುದಿಲ್ಲ. ಯಾರು ಅದರಲ್ಲಿ ಯಜಮಾನಿ ಎಂದು ಕಂಡುಬರುತ್ತಾರೋ ಅಂತಹ ಮಹಿಳೆಯರಿಗೆ ಮಾತ್ರ ಸಾಕಷ್ಟು ತಿಂಗಳಿನಿಂದಲೂ ಕೂಡ ಹಲವಾರು ಕಂತಿನ ಹಣ ಜಮಾ ಆಗಿದೆ. ರೇಷನ್ ಕಾರ್ಡ್ ಗಳನ್ನು ಹೊಂದಿಲ್ಲದಂತಹ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಹಣವು ಕೂಡ ಜಮಾ ಆಗುವುದಿಲ್ಲ.
ರೇಷನ್ ಕಾರ್ಡ್ ರದ್ದಾಗಿದೆ ಮುಂದೇನು ಮಾಡಬೇಕು ?
ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿವೆ ಎಂದರೆ ನೀವು ನಿಮ್ಮ ಮನೆಯಲ್ಲಿರುವಂತಹ ಮುಖ್ಯಸ್ಥರ ರೇಷನ್ ಕಾರ್ಡ್ಗಳೊಂದಿಗೆ ನಿಮ್ಮ ಹೆಸರನ್ನು ಕೂಡ ಜೋಡಣೆ ಮಾಡಿರಿ. ನೀವು ಒಂದೇ ಮನೆಯಲ್ಲಿ ವಾಸವಿದ್ದಿರಿ ಎಂದರೆ ನೀವು ಕೂಡ ಕುಟುಂಬದ ಸದಸ್ಯರಾಗಿ ಕಂಡುಬರುತ್ತೀರಿ. ಉದಾಹರಣೆಗೆ ನಿಮ್ಮ ಕುಟುಂಬದಲ್ಲಿ ನಾಲ್ಕು ಜನ ಇದ್ದಾರೆ ಎಂದರೆ ಅವರನ್ನು ಕೂಡ ಕುಟುಂಬದ ರೇಷನ್ ಕಾರ್ಡ್ಗಳೊಂದಿಗೆ ಈ ನಾಲ್ಕು ಸದಸ್ಯರ ಹೆಸರನ್ನು ಕೂಡ ನೋಂದಾಯಿಸಿದರೆ,
ಆಗ ನೀವು ರೇಷನ್ ಕಾರ್ಡ್ ಗಳ ಮುಖಾಂತರ ಮುಂದಿನ ತಿಂಗಳಿನಿಂದಲೇ ಉಚಿತವಾದಂತಹ ಧಾನ್ಯಗಳನ್ನು ಕೂಡ ಪಡೆಯಬಹುದು. ಆದರೆ ನೀವು ಗೃಹಲಕ್ಷ್ಮಿ ಹಣವನ್ನು ಪಡೆಯುವಂತಿಲ್ಲ. ಏಕೆಂದರೆ ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ರೇಷನ್ ಕಾರ್ಡ್ ದೊರೆಯುವುದು ಆದ ಕಾರಣ ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ಯಾರು ಮುಖ್ಯಸ್ಥ ಮಹಿಳೆ ಎಂದು ಕಂಡು ಬರುತ್ತಾರೆ ಅಂಥವರ ಖಾತೆಗೆ ಮಾತ್ರ ಹಣ ಜಮಾ ಆಗುತ್ತದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…