Jio Plans: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಜಿಯೋ ಬಳಕೆದಾರರಿಗೆ ಒಂದು ಬಿಗ್ ಶಾಕ್ ಎಂದು ಹೇಳಬಹುದು, ಯಾಕೆಂದರೆ ಜಿಯೋ ಪ್ರಿಪೇಯ್ಡ್ ಪ್ಲಾನ್ ನಲ್ಲಿ 25% ನಷ್ಟು ಹೆಚ್ಚಳ ಮಾಡಲಾಗುವುದು ಎಂಬ ಸುದ್ದಿಯು ಹೊರಬಂದಿದ್ದು ಜಿಯೋಗ್ರಾಹಕರಲ್ಲಿ ಬೇಸರವನ್ನುಂಟು ಮಾಡಿದೆ.
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವಂತಹ ರಿಲೈನ್ಸ್ ಜಿಯೋ ಕಂಪನಿಯ ಇದೀಗ ತನ್ನ ಗ್ರಾಹಕರಿಗೆ ಒಂದು ಬಿಗ್ ಶಾಕ್ ಅನ್ನು ಕೊಟ್ಟಿದೆ. ಅದೇನೆಂದರೆ ಜಿಯೋ ಪ್ರಿಪೇಯ್ಡ್ ಪ್ಲಾನ್ ಗಳ ಮೇಲೆ 25% ನಷ್ಟು ಹಣದ ಹೆಚ್ಚಳವನ್ನು ಮಾಡಲಾಗುವುದು ಎಂಬ ಅಧಿಕೃತ ಸೂಚನೆಯನ್ನು ಹೊರಡಿಸಿದೆ.
ಯಾವ ಯೋಜನೆಗಳ ಮೇಲೆ (Jio Plans) ದರ ಹೆಚ್ಚಾಗಲಿದೆ?
ಜಿಯೋ ಕಂಪನಿಯು ತನ್ನ 19 ಪ್ಲಾನ್ ಗಳ ಮೇಲೆ ಬೆಲೆಯನ್ನು ಏರಿಕೆ ಮಾಡಿದೆ. ಅದರಲ್ಲಿ ಎರಡು ಪೋಸ್ಟ್ ಪೇಡ್ ಯೋಜನೆಗಳು ಹಾಗೂ 17 ಪ್ರೀಪೇಡ್ ಯೋಜನೆಗಳು ಒಳಗೊಂಡಿರುತ್ತವೆ. ಉದಾಹರಣೆಗೆ 155 ರೂಪಾಯಿ ಪ್ಲಾನ್ ಅನ್ನು 189 ರೂಪಾಯಿಗೆ ಬದಲಾವಣೆ ಮಾಡಲಾಗಿದೆ. ಆದರೆ ಮಾನ್ಯತೆಯು ಕೇವಲ 28 ದಿನದವರೆಗೆ ಮಾತ್ರ ಇರುತ್ತದೆ. 29ರ ರೀಚಾರ್ಜ್ ಪ್ಲಾನ್ ಕೂಡ 249 ರೂಪಾಯಿಯ ಭಾರಿ ಅಂತರವನ್ನು ಕೊಂಡುಕೊಂಡಿದೆ.
(Jio Plans) ಯಾವಾಗಿನಿಂದ ಈ ಯೋಜನೆಗಳು ಜಾರಿಗೆ ಬರಲಿವೆ?
ಇನ್ನು ಮೂರು ದಿನಗಳಲ್ಲಿ ಈ ಯೋಜನೆಗಳು ಜಾರಿಗೆ ಬರಲಿವೆ ಎಂಬ ಸುದ್ದಿ ತಿಳಿದು ಬಂದಿದೆ. ಅಂದರೆ ಜುಲೈ 3ನೇ ತಾರೀಕಿನಂದು ಈ ಒಂದು ಪ್ಲಾನ್ ಗಳ ಮೇಲಿನ ಹೆಚ್ಚಳವನ್ನು ಕಾಣಬಹುದಾಗಿರುತ್ತದೆ. ಒಟ್ಟಿನಲ್ಲಿ ಜಿಯೋ ಕಂಪನಿಯೂ ಪ್ಲಾನ್ ಗಳ ಮೇಲಿನ ಹೆಚ್ಚಳವು ಜಿಯೋ ಗ್ರಾಹಕರ ಮುಖದಲ್ಲಿ ಬೇಸರವನ್ನು ಉಂಟು ಮಾಡಿದೆ.
ಇದನ್ನು ಓದು: ಸ್ನೇಹಿತರೆ ಈ ಯೋಜನೆಯ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ ಎಂದು ಹೇಳಲು ಬಯಸುತ್ತೇನೆ.