ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್ ಜಾರಿ ಆಗಿರುವಂತಹ ಮಾಹಿತಿಯ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಯಾವ ರೂಲ್ಸ್ ನಮಗೆ ಅನ್ವಯವಾಗುತ್ತದೆ, ಎಂಬುದನ್ನು ಕೂಡ ತಿಳಿದುಕೊಳ್ಳಿರಿ.
ಸಾಕಷ್ಟು ಲಕ್ಷಾಂತರ ಕುಟುಂಬಗಳು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಮತ್ತು ಎಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಹೊಂದಿರುವಂತಹ ಫಲಾನುಭವಿಗಳು ಕೂಡ ಇದ್ದಾರೆ. ಅವರೆಲ್ಲರೂ ಕೂಡ ಉಚಿತವಾಗಿ ಪಡಿತರ ಧಾನ್ಯಗಳನ್ನು ಕೂಡ ಈವರೆಗೂ ಪಡೆದುಕೊಳ್ಳುತ್ತಿದ್ದಾರೆ.
ಅಂತವರಿಗೆ ಇನ್ಮುಂದೆ ಮೇ ಒಂದನೇ ತಾರೀಖಿನಿಂದ ಹೊಸ ರೂಲ್ಸ್ ಕೂಡ ಜಾರಿಯಾಗುತ್ತೆ. ಆ ರೂಲ್ಸ್ ಪಾಲಿಸದೆ ಇದ್ದವರ ಮೇಲೆ ಆಹಾರ ಇಲಾಖೆ ಕೂಡ ಕ್ರಮ ತೆಗೆದುಕೊಳ್ಳುತ್ತದೆ ಎಚ್ಚರ, ಹಾಗಾದ್ರೆ ಆ ಒಂದು ರೂಲ್ಸ್ ಯಾರಿಗೆಲ್ಲ ಅನ್ವಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ…
ಪ್ರಸ್ತುತ ದಿನಗಳಲ್ಲಿ ಅಕ್ರಮ ರೇಷನ್ ಕಾರ್ಡ್ ಗಳು ಹೆಚ್ಚಾಗಿವೆ.
ಸರ್ಕಾರಿ ನೌಕರಿ ಕೆಲಸಗಳಲ್ಲಿರುವಂತಹ ಅಭ್ಯರ್ಥಿಗಳು ಕೂಡ ಅಕ್ರಮವಾದ ರೇಷನ್ ಕಾರ್ಡ್ಗಳನ್ನು ಮಾಡಿಸಿಕೊಂಡು ಪ್ರತಿ ತಿಂಗಳು ಉಚಿತವಾದ ಧಾನ್ಯಗಳನ್ನು ಕೂಡ ಪಡೆಯುತ್ತಿದ್ದಾರೆ. ಅಂತವರಿಗೂ ಕೂಡ ಆಹಾರ ಇಲಾಖೆ ಖಡಕ್ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಧಾನ್ಯವನ್ನು ಉಚಿತವಾಗಿ ವಿತರಣೆ ಮಾಡುತ್ತಿರುವಂತಹ ವಿತರಕರ ಮೇಲು ಕೂಡ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆ ಮಾಹಿತಿಯನ್ನು ನೀಡಿದೆ.
ಇದನ್ನು ಓದಿ :- ಸ್ವಂತ ಮನೆಗಳಲ್ಲಿ ವಾಸಿಸುತ್ತಿಲ್ಲವೇ ? ಹಾಗಾದರೆ ಸರ್ಕಾರದಿಂದಲೇ ಉಚಿತವಾದ ಮನೆಗಳನ್ನು ಪಡೆದುಕೊಳ್ಳಿ
ಯಾರು ಸರ್ಕಾರಿ ನೌಕರಿಯನ್ನು ಹೊಂದು ಕೂಡ ರೇಷನ್ ಕಾರ್ಡ್ ಗಳನ್ನು ಅಕ್ರಮವಾಗಿ ಮಾಡಿಸಿ ಧಾನ್ಯಗಳನ್ನು ಕೂಡ ಪ್ರತಿ ತಿಂಗಳು ಉಚಿತವಾಗಿ ಪಡೆಯುತ್ತಿದ್ದೀರೋ ಅಂತವರು ಇನ್ಮುಂದೆ ಪಡೆಯಲು ಸಾಧ್ಯವಿಲ್ಲ ಸರ್ಕಾರ ಎಚ್ಚರಿಕೆಯ ಕ್ರಮವನ್ನು ತೆಗೆದುಕೊಳ್ಳುವ ಮುನ್ನವೇ ನೀವೇ ಎಚ್ಚರಿಕೆಯಿಂದ ಮೊದಲು ಹೋಗಿ ನಿಮ್ಮ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಿಸಿರಿ. ಅಥವಾ ಆ ರೇಷನ್ ಕಾರ್ಡ್ ಗಳಲ್ಲಿ ನೀವು ಯಾವುದೇ ರೀತಿಯ ಪಡಿತರವನ್ನು ಕೂಡ ಪಡೆಯಬೇಡಿ.
ಸರ್ಕಾರಿ ನೌಕರಿ ಕೆಲಸವನ್ನು ಹೊಂದಿರುವಂತಹ ಅಭ್ಯರ್ಥಿಗಳು ಈ ರೀತಿಯ ಒಂದು ಅಕ್ರಮವಾದ ರೇಷನ್ ಕಾರ್ಡ್ ಗಳನ್ನು ಮಾಡಿಸಿರಿಕೊಂಡಿರುತ್ತಾರೆ. ಇನ್ನೂ ಕೆಲವರು ಯಾವುದೇ ರೀತಿಯ ಸರ್ಕಾರಿ ನೌಕರಿಯನ್ನು ಹೊಂದಿರುವುದಿಲ್ಲ, ಆದರೂ ಕೂಡ ಪ್ರತಿ ತಿಂಗಳು ಉಚಿತವಾಗಿ ಸಿಗುವಂತಹ ಧಾನ್ಯಗಳನ್ನು ಕೂಡ ಪಡೆದುಕೊಳ್ಳಲು ಕಾರ್ ಗಳನ್ನು ಕೂಡ ತೆಗೆದುಕೊಂಡು ಬಂದು ಆ ಕಾರ್ ಗಳ ಮುಖಾಂತರವೇ ಉಚಿತ ಪಡಿತರವನ್ನು ಕೂಡ ಪಡೆಯುತ್ತಿದ್ದಾರೆ.
ಕಾರ್ ಗಳನ್ನು ಖರೀದಿಸಿದ್ದಾರೆ ಎಂದರೆ ಅವರು ಬಡತನ ರೇಖೆಗಿಂತ ಮೇಲಿರುವವರಿ ಎಂದರ್ಥ, ಇಂತಹ ಅಭ್ಯರ್ಥಿಗಳಿಗೆ ಎಪಿಎಲ್ ರೇಷನ್ ಕಾರ್ಡ್ ಗಳು ಮಾತ್ರ ಅನ್ವಯವಾಗುತ್ತದೆ, ಅಂತಹ ಅಭ್ಯರ್ಥಿಗಳಿಂದ ಕಡುಬಡತನದಲ್ಲಿರುವಂತಹ ಅಭ್ಯರ್ಥಿಗಳಿಗೂ ಕೂಡ ಯಾವುದೇ ಧಾನ್ಯಗಳು ಈವರೆಗೂ ಸಿಗುತ್ತಿಲ್ಲ, ಅಂತವರು ರೇಷನ್ ಕಾರ್ಡ್ ಗಳನ್ನು ಕೂಡ ಅಪ್ಲೈ ಮಾಡಲು ಮುಂದಾಗುತ್ತಾರೆ.
ಆದರೂ ಕೂಡ ಸರ್ಕಾರ ಅವರಿಗೆ ರೇಷನ್ ಕಾರ್ಡ್ ಗಳನ್ನು ಪ್ರಸ್ತುತ ದಿನಗಳಲ್ಲಿ ನೀಡುತ್ತಿಲ್ಲ, ಏಕೆಂದರೆ ಈವರೆಗೂ ನೀಡಿರುವಂತಹ ರೇಷನ್ ಕಾರ್ಡ್ ಗಳಲ್ಲಿ ಸಾಕಷ್ಟು ಅಕ್ರಮವಾದ ರೇಷನ್ ಕಾರ್ಡ್ ಗಳು ಹೊರಬಂದಿದೆ. ಅಂಥವರನ್ನು ಲಿಸ್ಟ್ ಮಾಡಿಕೊಂಡಿದೆ ಸರ್ಕಾರ. ಆ ಒಂದು ಲಿಸ್ಟ್ ನಲ್ಲಿ ನೀವು ಕೂಡ ಇದ್ದೀರಿ ಎಂದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ. ಯಾವುದೇ ರೀತಿಯ ಸರ್ಕಾರಿ ಯೋಜನೆಯ ಪ್ರಯೋಜನಗಳನ್ನು ಕೂಡ ಪಡೆಯಲು ಈ ವ್ಯಕ್ತಿಗಳು ಸಾಧ್ಯವೇ ಇಲ್ಲ.
ನೀವು ಯಾವುದೇ ತಪ್ಪುಗಳನ್ನು ಮಾಡಿಲ್ಲ ಎಂದರು ಕೂಡ ನಿಮ್ಮ ರೇಷನ್ ಕಾರ್ಡ್ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೀವು ನೋಡಬೇಕಾಗುತ್ತದೆ. ಕೆಲವೊಮ್ಮೆ ರೇಷನ್ ಕಾರ್ಡ್ ಗಳು ರದ್ದಾಗಿದ್ದರು ಆ ರೀತಿ ರದ್ದಾಗಿರುವಂತಹ ರೇಷನ್ ಕಾರ್ಡ್ ಗಳನ್ನು ನೀವು ಮೊದಲಿಗೆ ನೋಡಿ ಆನಂತರ ಆಹಾರ ಇಲಾಖೆಗೆ ಭೇಟಿ ನೀಡಿ ಮತ್ತೆ ಅರ್ಜಿ ಸಲ್ಲಿಸಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಬಹುದು.
ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ.
- ಮೊದಲಿಗೆ ಆಹಾರ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ.
- ಆನಂತರ ಈ ಒಂದು ಪುಟದಲ್ಲಿ ರೇಷನ್ ಕಾರ್ಡ್ ಎಂಬುದನ್ನು ನೀವು ಹುಡುಕಬೇಕು.
- ಹುಡುಕಿದ ನಂತರ ಅದರ ಮೇಲೆ ಕ್ಲಿಕಿಸಿ.
- ನಂತರ ನಿಮ್ಮ ಜಿಲ್ಲೆ ನಿಮ್ಮ ಊರು ನಿಮ್ಮ ತಾಲೂಕು ಎಲ್ಲವುದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು.
- ಆಯ್ಕೆ ಮಾಡಿಕೊಂಡ ನಂತರವೇ ಪಡಿತರ ಲಿಸ್ಟ್ ಕೂಡ ಕಾಣುತ್ತದೆ.
- ಆ ಒಂದು ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆ ಎಂದರೆ ನಿಮ್ಮ ರೇಷನ್ ಕಾರ್ಡ್ ಗಳಿಗೆ ಯಾವುದೇ ರೀತಿಯ ತೊಂದರೆಗಳು ಕೂಡ ಆಗಿಲ್ಲ ಎಂದರ್ಥ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….