Raitha Siri Scheme: ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮತ್ತೊಂದು ಯೋಜನೆಯ ಬಗ್ಗೆ ತಿಳಿಸಿದ್ದು ಈ ಮೂಲಕ ರೈತರು ಸ್ವಾವಲಂಬಿಗೆ ಬದುಕು ಕಟ್ಟಿಕೊಳ್ಳಲು ₹10,000 ಹಣವನ್ನು ಸರ್ಕಾರದಿಂದ ಪಡೆಯಬಹುದು ಆ ಯೋಜನೆಯೇ ‘ರೈತ ಸಿರಿ ಯೋಜನೆ’.
ರೈತ ಸಿರಿ ಯೋಜನೆಯಡಿಯಲ್ಲಿ ರೈತರಿಗೆ ಆರ್ಥಿಕ ಸೌಲಭ್ಯ!
ಸ್ನೇಹಿತರೆ,2019 ರಿಂದ್ದ 20ನೇ ಸಾಲಿನಲ್ಲಿ ರೈತ ಸಿರಿ ಯೋಜನೆಯನ್ನು ಆರಂಭಿಸಿ ನಂತರ ಆವಾಗ್ಲೇ ಸ್ಥಗಿತಗೊಳಿಸಲಾಗಿತ್ತು ಈಗ 2024ರಲ್ಲಿ ಮತ್ತೆ ರೈತ ಸಿರಿ ಯೋಜನೆಗೆ ರಾಜ್ಯ ಸರ್ಕಾರ ಅನುದಾನ ನೀಡುವುದಾಗಿ ಇದೀಗ ಸಮಸ್ತ ರೈತರಿಗೆ ತಿಳಿಸಿದೆ.
ರೈತ ಸಿರಿ ಯೋಜನೆಯಡಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಹಾಗೂ ಅವರ ಕೃಷಿ ಚಟುವಟಿಕೆಗೆ ಬೇಕಾಗುವ ಹಲವು ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಒಂದು ಮುಖ್ಯ ಉದ್ದೇಶವಾಗಿದೆ.
ರೈತ ಸಿರಿ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಯಾರು ಅರ್ಹರು? ಇಲ್ಲಿದೆ ನೋಡಿ ವಿವರ!
- ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು
- ಕೃಷಿ ವೃತ್ತಿಯನ್ನೇ ತಾನು ಮಾಡುವವರಾಗಿರಬೇಕು
- ರಾಗಿ ಬೆಳೆಯುವ ಪ್ರಾಥಮಿಕ ರೈತರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ತಿಳಿಸಲಾಗಿದೆ.
- ಕನಿಷ್ಠ ಒಂದು ಹೆಕ್ಟರ್ ಜಮೀನು, ಆಸ್ತಿ ಹೊಂದಿರಬೇಕು ಎಂದು ಕೂಡ ತಿಳಿಸಲಾಗಿದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಆಧಾರ ಕಾರ್ಡ್(Adhar Card)
- ಭೂ ದಾಖಲೆಗಳು ಮತ್ತು ಪಹಣಿ(Land records RTC)
- ನಿವಾಸ ಪ್ರಮಾಣ ಪತ್ರ(Adress proof)
- ಆದಾಯ ಪ್ರಮಾಣ ಪತ್ರ(Income Certificate)
- ಪಡಿತರ ಚೀಟಿ(Ration Card)
- ಬ್ಯಾಂಕ್ ಖಾತೆಯ ವಿವರಗಳು(Bank Passbook)
- ಶಾಶ್ವತ ನಿವಾಸದ ಪ್ರಮಾಣ ಪತ್ರ(Permanent address)
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ(Passport size Photo)
ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ರೈತ ಕೃಷಿ (KSDA) ಜಾಲತಾಣಕ್ಕೆ ಭೇಟಿ ನೀಡಿ.
ಸೇವೆಗಳು(Services)ಎನ್ನುವ ವಿಭಾಗದಲ್ಲಿ ರೈತ ಸಿರಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.
ಈಗ ರೈತ ಸಿರಿ(Raitha Siri)ಯೋಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ಸದ್ಯಕ್ಕೇ ಇನ್ನೂ ರೈತರಿಗೆ ಆನ್ಲೈನ್ (online) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಲಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಕೇಂದ್ರವನ್ನು ಸಂಪರ್ಕಿಸಬಹುದು.