ration card list: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ರದ್ದಾದಂತಹ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆಯಾಗಿದೆ. ಆ ಒಂದು ರೇಷನ್ ಕಾರ್ಡ್ ಲಿಸ್ಟಿನಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ನಿಮಗೆ ಇನ್ಮುಂದೆ ಗೃಹಲಕ್ಷ್ಮಿ ಹಣ ಬರುವುದಿಲ್ಲ. ಯಾವ ರೀತಿ ರೇಷನ್ ಕಾರ್ಡ್ ಪಟ್ಟಿಯನ್ನು ಪರಿಶೀಲನೆ ಮಾಡಬೇಕು.
ಹಾಗೂ ಗೃಹಲಕ್ಷ್ಮಿ ಹಣ ಏಕೆ ಬರುವುದಿಲ್ಲ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ನೀವು ಕೂಡ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಒಂದು ಮಾಹಿತಿಯನ್ನು ತಿಳಿದು ನೀವು ಕೂಡ ನಿಮ್ಮ ರೇಷನ್ ಕಾರ್ಡನ್ನು ಒಂದೊಮ್ಮೆ ಪರಿಶೀಲನೆ ಮಾಡಿಕೊಳ್ಳಿರಿ.
ಸಾವಿರಾರು ರೇಷನ್ ಕಾರ್ಡ್ ಗಳು ರದ್ದಾಗಲು ಕಾರಣವೇನು ?
ಸ್ನೇಹಿತರೆ ಒಂದೇ ಕುಟುಂಬಸ್ಥರಲ್ಲಿಯೇ ಮೂರ್ನಾಲ್ಕು ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ಅಂದರೆ ಒಂದೇ ಕುಟುಂಬದಲ್ಲಿ ಇದ್ದು ಒಂದೇ ಮನೆಯಲ್ಲಿಯೇ ವಾಸವಿದ್ದು ಆ ಮನೆಯ ಸದಸ್ಯರು ಒಂದೊಂದು ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಈ ರೀತಿಯ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ. ಸರ್ಕಾರವು ಒಂದೇ ಕುಟುಂಬಸ್ಥರಿಗೆ ಒಂದೇ ರೇಷನ್ ಕಾರ್ಡ್ಗಳನ್ನು ಕೂಡ ನೀಡುತ್ತದೆ. ಆ ರೇಷನ್ ಕಾರ್ಡ್ ಗಳಲ್ಲಿ ಸದಸ್ಯರನ್ನು ಕೂಡ ಸೇರಿಸಬಹುದು.
ಆ ರೀತಿ ಸೇರಿಸಿಲ್ಲದ ಕಾರಣದಿಂದಲೂ ಕೂಡ ರೇಷನ್ ಕಾರ್ಡ್ ಗಳು ರದ್ದಾಗಿದೆ. ಏಕೆಂದರೆ ಅವರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಿ ರೇಷನ್ ಕಾರ್ಡ್ ಗಳನ್ನು ಕೂಡ ಪಡೆದಿರುತ್ತಾರೆ. ಇದು ಕಾನೂನಾತ್ಮಕವಾಗಿ ಅಪರಾಧವಾಗಿರುತ್ತದೆ.
ಮದುವೆಯಾದಂತಹ ಹೊಸ ದಂಪತಿಗಳು ಬೇರೆ ಮನೆಯಲ್ಲಿ ವಾಸವಿದ್ದರೆ ಮಾತ್ರ ಅವರಿಗೆ ಹೊಸ ರೇಷನ್ ಕಾರ್ಡ್ ಗಳು ಅನ್ವಯವಾಗುತ್ತದೆ. ಅವರು ಒಂದೇ ಮನೆಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಇದ್ದಾರೆ ಎಂದರೆ ಅವರು ಹಳೆಯ ರೇಷನ್ ಕಾರ್ಡ್ ಗಳಿಗೆ ತಮ್ಮ ಹೆಸರನ್ನು ಕೂಡ ಸೇರಿಸಿಕೊಳ್ಳಬಹುದಾಗಿದೆ. ಈ ರೀತಿಯಾಗಿ ಅವರು ರೇಷನ್ ಕಾರ್ಡ್ ಗಳಲ್ಲಿ ಹೆಸರನ್ನು ನೋಂದಾಯಿಸಿ ಕೊಡಬಹುದು.
ಕೆಲವರು ನಕಲಿ ರೇಷನ್ ಕಾರ್ಡ್ ಗಳನ್ನು ಕೂಡ ಪಡೆದುಕೊಂಡು ಪ್ರತಿ ತಿಂಗಳು ಧಾನ್ಯ ಹಾಗೂ ಗೃಹಲಕ್ಷ್ಮಿ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಅಂತವರಿಗೆ ಇನ್ಮುಂದೆ ಕಟ್ಟುನಿಟ್ಟಿನ ಕ್ರಮ ಜಾರಿಯಾಗುತ್ತದೆ. ಅಂತವರು ಯಾವುದೇ ರೀತಿಯ ಹಣವನ್ನು ಕೂಡ ಇನ್ಮುಂದೆ ಪಡೆಯುವ ಹಾಗಿಲ್ಲ. ಹಾಗೂ ರೇಷನ್ ಕಾರ್ಡ್ ಮುಖಾಂತರವೂ ಕೂಡ ಧಾನ್ಯಗಳನ್ನು ಕೂಡ ಪಡೆಯುವಂತಿಲ್ಲ.
ರೇಷನ್ ಕಾರ್ಡ್ ರದ್ದಾದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ?
ಸ್ನೇಹಿತರೆ ಕಡ್ಡಾಯವಾಗಿ ಸಮಸ್ಯೆಯು ಎದುರಾಗುತ್ತದೆ. ಏಕೆಂದರೆ ನೀವು ಗೃಹಲಕ್ಷ್ಮಿ ಹಣವನ್ನು ಪಡೆಯಲು ರೇಷನ್ ಕಾರ್ಡ್ ಗಳನ್ನು ನೀಡಿಯೇ ಪ್ರತಿ ತಿಂಗಳು ಹಣವನ್ನು ಕೂಡ ಪಡೆಯುತ್ತಿದ್ದೀರಿ ಅಂದರೆ, ಮೊದಲನೇ ಬಾರಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಂತಹ ಸಂದರ್ಭದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಿಯೇ ನೀವು ಗೃಹಲಕ್ಷ್ಮಿ ಯೋಜನೆಗೂ ಕೂಡ ನೋಂದಾವಣಿ ಆಗಿದ್ದೀರಿ.
ಆ ಒಂದು ರೇಷನ್ ಕಾರ್ಡ್ ರದ್ದಾಗಿದೆ ಎಂದರೆ ಸರ್ಕಾರ ನಿಮಗೆ ಯಾವುದೇ ರೀತಿಯ ಹಣವನ್ನು ಕೂಡ ಇನ್ಮುಂದೆ ಜಮಾ ಮಾಡುವುದಿಲ್ಲ. ನೀವು ಕೆಲವೊಂದು ಕಂತಿನ ಹಣವನ್ನು ಪಡೆದಿದ್ದೀರಿ ಎಂದರೆ, ಆ ಹಣ ನಿಮ್ಮ ಹತ್ತಿರದಲ್ಲಿಯೇ ಇರುತ್ತದೆ. ಹಾಗೂ ಮುಂದಿನ ಕಂತಿನ ಹಣವನ್ನು ಕೂಡ ನೀವು ಪಡೆಯಲು ಅರ್ಹರಾಗುವುದಿಲ್ಲ.
ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆಯಾ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ !
- ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಭೇಟಿ ನೀಡಬೇಕಾಗುತ್ತದೆ.
- ಭೇಟಿ ನೀಡಿದ ನಂತರ ಅಡ್ಡ ಗೆರೆಗಳನ್ನು ನೋಡುತ್ತೀರಿ, ಆ ಒಂದು ಅಡ್ಡ ಗೆರೆಗಳ ಮೇಲೆ ಕ್ಲಿಕಿಸಿರಿ.
- ಕ್ಲಿಕಿಸಿದ ನಂತರವೇ ಈ ರೇಷನ್ ಕಾರ್ಡ್ ಎಂಬುದನ್ನು ಕ್ಲಿಕ್ಕಿಸಬೇಕು.
- ಆನಂತರ ರೇಷನ್ ಕಾರ್ಡ್ ಕ್ಯಾನ್ಸಲ್ಡ್ ಅಂಡ್ ಸಸ್ಪೆಂಡ್ ಲಿಸ್ಟ್ ಎಂಬುದು ಕಾಣುತ್ತದೆ. ಅದರ ಮೇಲೆ ಒತ್ತಿರಿ.
- ಆನಂತರ ನಿಮ್ಮ ಜಿಲ್ಲೆ ನಿಮ್ಮ ಊರು ಎಲ್ಲ ಊರ್ದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ಅಥವಾ ಭರ್ತಿ ಮಾಡಬೇಕಾಗುತ್ತದೆ. ಆನಂತರ ಸಬ್ಮಿಟ್ ಎಂಬುದನ್ನು ಕ್ಲಿಕ್ಕಿಸುವ ಮುಖಾಂತರ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಕೂಡ ನೋಡಬಹುದು.
ಇದರಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ಹೆಸರು ಇದೆ ಎಂದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿದೆ. ನೀವು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಹಣ ಹಾಗೂ ಅನ್ನಭಾಗ್ಯ ಯೋಜನೆ ಮುಖಾಂತರ ಅನ್ನ ಭಾಗ್ಯ ಯೋಜನೆ ಹಣವನ್ನು ಕೂಡ ಪಡೆಯುವ ಹಾಗಿಲ್ಲ ಮತ್ತು ಧಾನ್ಯಗಳನ್ನು ಕೂಡ ಸರ್ಕಾರದಿಂದ ಪಡೆಯುವಂತಿಲ್ಲ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…