Ration Card News: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ದಿನದಿಂದ ದಿನಕ್ಕೆ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲಿವೆ ಒಂದು ಕಡೆ ತಮ್ಮ ಬಳಿ ಇದ್ದತಂಹ ಬಿಪಿಎಲ್ ಸರಿಯಾದ ಬಳಕೆಯನ್ನು ಮಾಡಿಕೊಳ್ಳದೆ ಇರುವಂತ ಹಿನ್ನೆಲೆಯಲ್ಲಿ ಸಾಕಷ್ಟು ಜನರ ಕಾರ್ಡ್ ಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಸರ್ಕಾರ ಅಂತಹ ರೇಷನ್ ಕಾರ್ಡ್ಗಳನ್ನು ರದ್ದು ಪಡಿಸುತ್ತಿದೆ ಇನ್ನೊಂದು ಕಡೆ ಇಷ್ಟು ದಿನಗಳು ಅರ್ಜಿಯನ್ನು ಸಲ್ಲಿಸಿ ಕುಳಿತಿದ್ದ ಜನರಿಗೆ ಸರ್ಕಾರ ಗುಡ್ ನ್ಯೂಸ್ ಅನ್ನು ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ಗಳನ್ನು ವಿತರಣೆಯ ಮಾಡಲಾಗುವುದು ಇದರ ಜೊತೆಗೆಯೇ ಸರ್ಕಾರದ ಮತ್ತೊಂದು ವಿಷಯ ಸಾರ್ವಜನಿಕರಿಗೆ ತಿಳಿಸಿದೆ.
ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿ :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಒಂದರ ಮೇಲೆ ಒಂದರಂತೆ ಬಿಡುಗಡೆ ಮಾಡುತ್ತಾ ಬಂತು ಈ ಎಲ್ಲ ಯೋಜನೆಗಳು ಸಾಮಾನ್ಯರಿಗೆ ಹಾಗೂ ಬಡತನದ ರೇಖೆಗಿಂತ ಕೆಳಗಿರುವಂತ ಹೆಚ್ಚು ಅನುಕೂಲ ಮಾಡಿಕೊಡುವಂತಹ ಯೋಜನೆಯು ಇದಾಗಿದೆ .
ಯಾರು ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಹೊಂದಿಲ್ಲವೋ ಅಂತವರಿಗೆ ಸರಕಾರದ ಹಲವು ಯೋಜನೆಗಳ ಪ್ರಯೋಜನವನ್ನು ಸಿಗದೇ ಇರಬಹುದು.
ಹೀಗಾಗಿಯೇ ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಕಾಯುತ್ತಿದ್ದವರಿಗೆ ಸರ್ಕಾರವು ಗುಡ್ ನ್ಯೂಸ್ ಅನ್ನು ನೀಡಿದೆ ಕಳೆದ ಎರಡುವರೆ ವರ್ಷಗಳಿಂದ ವಿತರಣೆಯ ಆಗದೆ ಹಾಗೆ ಉಳಿದಿದ್ದ ಮೂರು ಲಕ್ಷದಷ್ಟು ಹೊಸ ಪಡಿತರ ಕಾರ್ಡ್ಗಳನ್ನು ವಿತರಣೆಯನ್ನು ಮಾಡಲು ಸರ್ಕಾರವು ನಿರ್ಧರಿಸಿದೆ.
ಇದರಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳನ್ನು ಅದನ್ನು ಫಲಾನುಭವಿಗಳಿಗೆ ಅವರ ಆದಾಯಕ್ಕೆ ತಕ್ಕಂತೆಯೇ ಪಡಿತರ ಚೀಟಿಯನ್ನು ವಿತರಣೆಯನ್ನು ಮಾಡಲಾಗುವುದು.
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ :
ಇನ್ನು ಹೊಸದಾಗಿಯೇ ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳಲು ಬಯಸುವವರು ಅರ್ಜಿಯನ್ನು ಸಲ್ಲಿಸಬಹುದು ಇದರ ಜೊತೆಗೆಯೇ ತಿದ್ದುಪಡಿ ಸಹ ಮಾಡಿಕೊಳ್ಳಲು ಕೂಡ ಅವಕಾಶವನ್ನು ನೀಡಲಾಗುತ್ತದೆ ನೀವು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಪಡಿತರ ಚೀಟಿಯಲ್ಲಿ ಅಗತ್ಯವಿರುವಂತಹ ನವೀಕರಣವನ್ನು ಕೂಡ ಮಾಡಿಸಿಕೊಳ್ಳಬಹುದು.
ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು :
ಆಧಾರ್ ಕಾರ್ಡ್ ಕುಟುಂಬದಲ್ಲಿನ ಎಲ್ಲಾ ಸದಸ್ಯರ ಬಗ್ಗೆ ಮಾಹಿತಿ ಹಾಗೂ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಆಧಾರ್ ಲಿಂಕ್ ಆಗಿರುವಂತ ಮೊಬೈಲ್ ನಂಬರ್ ವಿಳಾಸದ ಪುರಾವೆ ಅರ್ಜಿಯನ್ನು ಸಲ್ಲಿಸುವಾಗ ಕುಟುಂಬದ ಎಲ್ಲಾ ಸದಸ್ಯರುಗಳು ಸೇವ ಕೇಂದ್ರಕ್ಕೆ ಹೋಗಬೇಕು ಎನ್ನುವುದನ್ನು ನೆನಪಿಡಬೇಕಾದ ವಿಷಯ.
ಇನ್ನು ಕೆಲವು ಜಿಲ್ಲೆಗಳಲ್ಲಿ ಪಡಿತರ ಚೀಟಿಯನ್ನು ತಿದ್ದುಪಡಿಗೆ ಮಾರ್ಚ್ 9ನೇ ತಾರೀಖಿನಿಂದ ಅವಕಾಶವನ್ನು ಮಾಡಿಕೊಡಲಾಗಿದೆ ನೀವು ನಿಮ್ಮ ಹತ್ತಿರದಲ್ಲಿ ಇರುವಂತ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದುಕೊಂಡು ಸ್ಥಳಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಿದ್ದುಪಡಿಯನ್ನು ಸಹ ಮಾಡಿಕೊಳ್ಳಬಹುದು.
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು :