ನಮಸ್ಕಾರ ಗೆಳೆಯರೇ,ಇಂದಿನ ನಮ್ಮ ಲೇಖನದಲ್ಲಿ Tata Capital Limited ಕಂಪನಿಯು ಭಾರತೀಯ PUC ವಿದ್ಯಾರ್ಥಿಗಳಿಗೆ ನೀಡಲಾಗುವ ‘ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್‌ಶಿಪ್ ಪ್ರೋಗ್ರಾಮ್'(Tata Capital Pankh Scholarship)ಅನ್ನು ಜಾರಿಗೆ ತಂದಿದೆ.
ಸ್ಕಾಲರ್‌ಶಿಪ್ ಸೌಲಭ್ಯ(Scholarship Facility): ವಿದ್ಯಾರ್ಥಿಗಳ ಬೋಧನಾ ಶುಲ್ಕದ ಶೇಕಡ.80% ರಷ್ಟು ಮರುಪಾವತಿ ಅಥವಾ ರೂ.10,000 ವರೆಗೆ ವಿದ್ಯಾರ್ಥಿವೇತನ ಸಿಗುತ್ತದೆ ಎಂದು ತಿಳಿಸಲಾಗಿದೆ.
ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
10-03-2024 ಕೊನೆಯ ದಿನಾಂಕ ಆಗಿದೆ!
ಅರ್ಹತೆ:
- ಪ್ರಥಮ ಅಥವಾ ದ್ವಿತೀಯ ಪಿಯುಸಿ ಓದುತ್ತಿರಬೇಕು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು
- ವಿದ್ಯಾರ್ಥಿಯ ಕುಟುಂಬದ ಆದಾಯ 2.5 ಲಕ್ಷ ಮೀರಿರಬಾರದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್!
ವಿದ್ಯಾರ್ಥಿಗಳು ಮೇಲಿನ ಲಿಂಕ್ ಕ್ಲಿಕ್ ಮಾಡಬೇಕು. ತೆರೆದ ವೆಬ್‌ಪೇಜ್(Webpage)ನಲ್ಲಿ 11ನೇ ತರಗತಿ ಹಾಗೂ 12ನೇ(PUC)ತರಗತಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಗೆ ಸಂಬಂಧಿತ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
2023 ರಿಂದ 24ನೇ ಸಾಲಿಗೆ ಮಾತ್ರ ಈ ವಿದ್ಯಾರ್ಥಿವೇತನ ನೀಡಲಿದ್ದು, ಒಂದು ಬಾರಿ ನೀಡಲಾಗುವ ಸೌಲಭ್ಯವಾಗಿದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು
- ಆಧಾರ್ ಕಾರ್ಡ್(Adhar Card)
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು(Passport size Photo)
- ಕುಟುಂಬದ ಆದಾಯ ಪ್ರಮಾಣ ಪತ್ರ(Income Certificate)
- ಶಾಲೆ / ಕಾಲೇಜಿಗೆ ಪ್ರವೇಶ ಪಡೆದಿರುವ ದಾಖಲೆ.(Admission letter)
- ಪ್ರವೇಶ ಶುಲ್ಕದ ರಶೀದಿ.(Receipt)
- ಸ್ಕಾಲರ್‌ಶಿಪ್ ಸೌಲಭ್ಯಕ್ಕಾಗಿ ಬ್ಯಾಂಕ್ ಖಾತೆ ವಿವರ.(Bank Passbook details)
- ಹಿಂದಿನ ತರಗತಿಯ ಅಂಕಪಟ್ಟಿ.(markscard)
- ಅಂಗವಿಕಲತೆಯ ಪ್ರಮಾಣ ಪತ್ರ.( Handicapped Certificate)