ರಾಜ್ಯದ ‘ವಸತಿ ರಹಿತ’ ಜನರಿಗೆ ಗುಡ್ ನ್ಯೂಸ್! ಈ ತಿಂಗಳ ಅಂತ್ಯದೊಳಗೆ 36 ಸಾವಿರ ಮನೆ ಹಂಚಿಕೆ! ಸಚಿವ ಜಮೀರ್ ಅಹ್ಮದ್ ಹೇಳಿಕೆ

Uchita Mane Yojane: ಕೊಳಗೇರಿ ಅಭಿವೃದ್ಧಿ ಮಂಡಳಿ ಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿ ಕೊಡುತ್ತಿರುವ ಮನೆಗಳ ಗುಣಮಟ್ಟ ಉತ್ತಮವಾಗಿರಬೇಕು ಎಂದು ತಿಳಿದು. ಜತೆಗೆ ಮೂಲ ಸೌಕರ್ಯ ಸಹಿತ ಎಲ್ಲ ಕಾಮಗಾರಿ ನಿಗದಿತ ಅವಧಿ ಯೊಳಗೆ ಪೂರ್ಣ ಗೊಳಿಸಬೇಕು ಎಂದು ನಮ್ಮ ರಾಜ್ಯದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸೂಚನೆ ನೀಡಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಿಂಗಳ ಅಂತ್ಯದಲ್ಲಿ 36 ಸಾವಿರ ಮನೆ ಹಂಚಿಕೆ ಮಾಡುವ ಹಿನ್ನಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮುಖ್ಯಮಂತ್ರಿಯವರು ಏಕ ಕಾಲದಲ್ಲಿ ರಾಜ್ಯ ಎಲ್ಲಾಕಡೆ ಮನೆಗಳ ಹಂಚಿಕೆಗೆ ಚಾಲನೆ ನೀಡಲಿದ್ದು ಅದೇ ದಿನ ಫಲಾನುಭವಿಗಳಿಗೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ. ಕುಡಿಯುವ ನೀರು, ಒಳ ಚರಂಡಿ, ವಿದ್ಯುತ್ ಸಂಪರ್ಕ ಸಹಿತ ಮೂಲ ಸೌಕರ್ಯ ಕಾಮಗಾರಿ ಫೆಬ್ರವರಿ.20 ರೊಳಗೆ ಮುಗಿದಿರಬೇಕು. ಇಲ್ಲದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ಇದೀಗ ನೀಡಿದರು.

ಇದನ್ನೂ ಓದಿ:

ಗೃಹಲಕ್ಷ್ಮಿ ಆರನೇ ಕಂತ್ತಿನ ಹಣ ನಿಮಗೆ ಇನ್ನೂ ಜಮೆ ಆಗಿಲ್ಲವಾ? ಈ ಕೆಲಸ ಮಾಡಿ ತಕ್ಷಣವೇ ಜಮೆ ಆಗುತ್ತದೆ!

ಪ್ರತಿ ಯೋಜನೆಯಲ್ಲಿ ಎಷ್ಟು ಮನೆ ನೀಡಲಾಗುವುದು? ಎಂಬ ಗುರಿ ನೀಡಲಾಗಿದೆಯೋ ಅಷ್ಟು ಕೊಡಲೇಬೇಕು ಎಂದು ತಿಳಿಸಲಾಗಿದೆ. ಗುತ್ತಿಗೆದಾರರಿಂದ ತೊಂದರೆ ಇದ್ದರೆ ಈಗಲೇ ಹೇಳಿಬಿಡಿ, ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಕೂಡ ತಿಳಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸಮಸ್ಯೆ ಆದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಂಡು ಅವರನ್ನೇ ಹೊಣೆ ಮಾಡಲಾಗುವುದು ಎಂದು ಸಚಿವ ತಿಳಿಸಿದರು.

ಮುಖ್ಯಮಂತ್ರಿ ಯವರು ಹಂಚಿಕೆ ಮಾಡಿದ ನಂತರ ಖುದ್ದು ನಾನೇ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಎಂದು ಕೂಡ ತಿಳಿಸಲಾಗಿದೆ. ಎಲ್ಲ ಮನೆಗಳಲ್ಲಿ ಫಲಾನುಭವಿಗಳು ವಾಸ ಇರಬೇಕು ಎಂದು ಕೂಡ ಹೇಳಿದ್ದಾರೆ. ಹಂಚಿಕೆ ವೇಳೆಗೆ ಎಲ್ಲ ಸೌಕರ್ಯ ಕಲ್ಪಿಸಬೇಕು ಎಂದು ಸಚಿವ ತಾಕೀತು ಮಾಡಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಈ ಹಿಂದೆ ಕಳೆದ 10ವರ್ಷ ಗಳಲ್ಲಿ ಮಂಜೂರು ಮಾಡಿದ್ದ 1.82 ಲಕ್ಷ ಮನೆ ಗಳಿಗೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸುತ್ತಿದೆ ಎಂದು ತಿಳಿಸಲಾಗಿದೆ. ಫಲಾನುಭವಿಗಳು ಒಂದು ಲಕ್ಷ ರೂ. ಪಾವತಿಸಿದರೆ ಉಳಿದ ಮೊತ್ತ ಸರ್ಕಾರ ಭರಿಸುತ್ತಿದೆ ಎಂದು ತಿಳಿಸಲಾಗಿದೆ. ಮೊದ ಹಂತದಲ್ಲಿ 36 ಸಾವಿರ ಮನೆ ನೀಡಲಾಗುತ್ತಿದೆ ಎಂದು ಕೂಡ ತಿಳಿಸಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *