Udyogini Loan Scheme: ಯಾವುದೇ ಬಡ್ಡಿ ಇಲ್ಲದೆ ₹3 ಲಕ್ಷ ವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ!

Udyogini Loan Scheme

Udyogini Loan Scheme: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಎಲ್ಲಾ ಜನರಿಗೆ ತಿಳಿಸುವ ವಿಷಯವೇನೆಂದರೆ, ಮಹಿಳೆಯರು ಆರ್ಥಿಕವಾಗಿ ಪ್ರಬಲರಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದೇನೆ. ಸಂಪೂರ್ಣವಾದ ಮಾಹಿತಿ ಬೇಕಿದ್ದರೆ ಲೇಖನವನ್ನು ಕೊನೆಯವರೆಗೂ ಓದಿ. ಈ ಯೋಜನೆ ಅಡಿಯಲ್ಲಿ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹಾಗೂ 1.5 ಲಕ್ಷದವರೆಗೆ ಸಬ್ಸಿಡಿ ಹಣವು ಕೊಡ ದೊರಕುತ್ತದೆ.

ಹೌದು ಸ್ನೇಹಿತರೆ, ನಿಮಗೆ ಉದ್ಯೋಗಿನಿ ಯೋಜನೆ ಮೂಲಕ ಮಹಿಳೆಯರಿಗೆ ಗರಿಷ್ಠ 3 ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಇದರಲ್ಲಿ ವಿಶೇಷ ವರ್ಗದ ಮಹಿಳೆಯರಿಗೆ 50% ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ಹಾಗಾದರೆ ನಿಮಗೆ ಸರಿಸುಮಾರು ₹1,50,000ವರೆಗೆ ಸಾಲ (Loan) ಮನ್ನಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ಸುಮಾರು 90,000ವರೆಗೆ ಸಾಲ (Loan) ಮನ್ನಾ ಮಾಡಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ.

ಉದ್ಯೋಗಿನಿ ಸಾಲ ಯೋಜನೆ! (Udyogini Loan Scheme)

ಹೌದು ಸ್ನೇಹಿತರೆ, ಈ ಯೋಜನೆ ಅಡಿ ಸಾಮಾನ್ಯ ವರ್ಗದ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಗಳ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಮಾಡಲು ಗರಿಷ್ಠ ₹3,00,000 ವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಸಾಲವನ್ನು (Loan) ನೀಡಲಾಗುವುದು ಎಂಬುದು ಈ ಯೋಜನೆಯ ವಿಶೇಷತೆ ಆಗಿರುತ್ತದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದ ಮಹಿಳೆಯರಿಗೆ ಶೇಕಡ 50% ನಷ್ಟು ಸಾಲದ ಮೇಲಿನ ಸಬ್ಸಿಡಿಯನ್ನು ನೀಡಲಾಗುತ್ತದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇಕಡ 30% ನಷ್ಟು ಸಾಲದ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತದೆ. ಸಬ್ಸಿಡಿ ಅಥವಾ ಅಷ್ಟು ಹಣವನ್ನು ಮನ ಮಾಡಲಾಗುತ್ತದೆ. 

ಯಾರು ಅರ್ಜಿ ಸಲ್ಲಿಸಬಹುದು? 

ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು ಸ್ವಂತ ಉದ್ಯೋಗವನ್ನು ಸ್ಥಾಪಿಸಿಕೊಳ್ಳಲು, ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಒದಗಿಸಿಕೊಳ್ಳಲಾಗಿರುತ್ತದೆ. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ರೇಷನ್ ಕಾರ್ಡ್ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
  • ಶಾಲಾ ವರ್ಗಾವಣೆ ಪ್ರಮಾಣ ಪತ್ರ 
  • ಯೋಜನೆಯ ವರದಿ
  • ಅಂಗವಿಕಲರು ಅಥವಾ ವಿಧವೆಯರ ಗುರುತಿನ ಪ್ರಮಾಣ ಪತ್ರ 

ನೀವು ಮೇಲಿನ ದಾಖಲೆಗಳನ್ನು ತೆಗೆದುಕೊಂಡು ಕರ್ನಾಟಕ ರಾಜ್ಯ ಮಹಿಳಾಭಿವೃದ್ಧಿ ನಿಗಮದಿಂದ ಪ್ರತಿ ವರ್ಷ ಉದ್ಯೋಗಿನಿ ಯೋಜನೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುವುದು ಎಂದು ತಿಳಿದು ಬಂದಿರುತ್ತದೆ ಈ ತಿಂಗಳಿನಲ್ಲಿ ಆನ್ಲೈನ್ ಮೂಲಕ ಅಥವಾ ಕರ್ನಾಟಕ ಸೇವಾ ಸಿಂಧು ಪೋರ್ಟಲ್ ಮೂಲಕ ಹಾಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? 

1.ಈ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹಾಗೂ ಪುರುಷರಿಗೆ ಅವಕಾಶ ಇರುವುದಿಲ್ಲ.

2.ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ.

3.ಈ ಯೋಜನೆಯಲ್ಲಿ ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಯಾವುದೇ ರೀತಿಯ ಕುಟುಂಬದ ವಾರ್ಷಿಕ ಆದಾಯ ಮಿತಿ ಇರುವುದಿಲ್ಲ ಎಂದು ತಿಳಿಸಲಾಗಿದೆ.

4.ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು ಎಂದು ತಿಳಿಸಲಾಗಿದೆ. 

5.ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು ಎಂದು ತಿಳಿಸಲಾಗಿರುತ್ತದೆ.

ಈ ಮೇಲಿನ ಅರ್ಹತೆಗಳು ನಿಮ್ಮಲ್ಲಿದ್ದರೆ ಹಾಗೂ ಮೇಲೆ ಕೊಟ್ಟಿರುವ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ತಿಳಿಸಿರುವ ಹಾಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಅರ್ಜಿ ಆಹ್ವಾನಿಸಲು ಶುರುವಾಗುತ್ತದೆ. ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ. 

WhatsApp Group Join Now
Telegram Group Join Now

Leave a Reply

Your email address will not be published. Required fields are marked *