ರೇಷನ್ ಕಾರ್ಡ್ ಇದ್ದರೆ ಇಷ್ಟೆಲ್ಲಾ ಲಾಭಗಳು! ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ!

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಒಂದು ರೇಷನ್ ಕಾರ್ಡ್ ನಿಂದ ಯಾವೆಲ್ಲಾ ಉಪಯೋಗಗಳು ಸರ್ಕಾರದಿಂದ ದೊರಕಲಿವೆ ಮತ್ತು ರೇಷನ್ ಕಾರ್ಡ್ ಇರುವುದರಿಂದ ಸರ್ಕಾರ ದೊರಕುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತೇನೆ ಕೊನೆಯವರೆಗೂ ಓದಿಕೊಳ್ಳಿ.

ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಓದಲು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಎಲ್ಲ ರೀತಿಯ ಮಾಹಿತಿಗಳು ದಿನನಿತ್ಯ ಮತ್ತು ಉದ್ಯೋಗದ ಮಾಹಿತಿ ಹಾಗೂ ಇತ್ತೀಚಿನ ಯೋಜನೆಗಳ ಬಗ್ಗೆ ಮಾಹಿತಿಗಳು ಕೂಡ ದೊರಕುತ್ತವೆ.

ನಮ್ಮ ದೇಶದಲ್ಲಿ ವಾಸಿಸುವ ಬಡ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಯಾವಾಗ್ಲೂ ಪರಿಚಯಿಸುತ್ತದೆ. ರಾಜ್ಯ ಸರ್ಕಾರ ಈ ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡುತ್ತದೆ ಅಂತಾನೆ ಹೇಳಬಹುದು.

ನಮ್ಮ ದೇಶದಲ್ಲಿ ವಾಸಿಸುವ ಅದೆಷ್ಟೋ ಜನ ಇಂದು ಪಡಿತರ ಚೀಟಿ (Ration card) ಹೊಂದಿರುವ ಕಾರಣಕ್ಕೆ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಬೆಲೆಗೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಕೂಡ ಸಾಧ್ಯವಾಗಿದೆ.

ಕೇಂದ್ರ ಸರ್ಕಾರದ ಯೋಜನೆ:

ಈ ಹಿಂದೆ ಕಳೆದ ಎರಡು ವರ್ಷಗಳಿಂದ ಅಂತ್ಯೋದಯ ಕಾರ್ಡ್ (Antyodaya card) ಹೊಂದಿರುವವರಿಗೆ ವಿಶೇಷ ಸೌಲಭ್ಯವನ್ನಾ ಕೇಂದ್ರ ಸರ್ಕಾರ ನೀಡಿರುವ ಈ ಯೋಜನೆಯನ್ನು ಮುಂದುವರೆಸಲು ಇದೀಗ ನಿರ್ಧರಿಸಿದೆ. ಅಂತ್ಯೋದಯ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಂಗವಿಕಲರು ಪ್ರಯೋಜನ ಪಡೆಯಬಹುದು ಜೊತೆಗೆ ಯಾವುದೇ ಶಾಶ್ವತ ಆದಾಯ ಇಲ್ಲದ ಹಾಗೂ 60 ವರ್ಷಗಳು ಮೇಲ್ಪಟ್ಟವರು ಕೂಡ ಈ ಪಡಿತರ ಚೀಟಿ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

  • ಆಧಾರ್ ಕಾರ್ಡ್(Adhar Card)
  • ಪಾಸ್ಪೋರ್ಟ್ ಅಳತೆಯ ಫೋಟೋ(Photo)
  • ವಿಳಾಸದ ಪುರಾವೆ(Adress proof)
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ (Caste and Income Certificate) ಕೂಡ ಬೇಕು

ಅಂತ್ಯೋದಯ ಕಾರ್ಡ್ ಯಾರಿಗೆ ಮೀಸಲು?

  • ಭೂ ಒಡೆತನ ಇಲ್ಲದ ಕಾರ್ಮಿಕರು
  • ಸಣ್ಣ ರೈತರು/ ಅತಿ ಸಣ್ಣ ರೈತರು
  • ಪೌರ ಕಾರ್ಮಿಕರು(Labours)
  • ಆಟೋ ಚಾಲಕರು(auto drivers)
  • ಕೊಳಗೇರಿಯಲ್ಲಿ ವಾಸ ಮಾಡುತ್ತಿರುವ ಕುಟುಂಬದವರು.
  • ಯಾವುದೇ ಆದಾಯದ ಮೂಲ ಇಲ್ಲದ 60 ವರ್ಷ ಮೇಲ್ಪಟ್ಟ ವಿಧವಾ ಮಹಿಳೆಯರು ಕೂಡ ಪಡೆದುಕೊಳ್ಳಬಹುದು

ಒಂದು ವರ್ಷಕ್ಕೆ 20,000 ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಕೂಡ ಪಡೆದುಕೊಳ್ಳಬಹುದು

WhatsApp Group Join Now
Telegram Group Join Now

Leave a Reply

Your email address will not be published. Required fields are marked *